ETV Bharat / state

ಜೆಡಿಎಸ್ 'ಜನತಾ ಜಲಧಾರೆ': ಹೆಚ್​ಡಿಕೆ ಕರ್ಮಭೂಮಿಯಿಂದಲೇ 15 ಗಂಗಾ ರಥಗಳಿಗೆ ಇಂದು ಹಸಿರು ನಿಶಾನೆ - Janata Jaladhare drinking water campaign

Janata Jaladhare drinking water campaign: ನೀರಾವರಿ ಯೋಜನೆ ಜಾರಿಗೆ ತರಲು ಇಂದು 'ಜನತಾ ಜಲಧಾರೆ' ರಥಗಳಿಗೆ ಚಾಲನೆ ಸಿಗಲಿದೆ. 31 ಜಿಲ್ಲೆಗಳ 184 ತಾಲೂಕುಗಳಲ್ಲಿ ಜಲಧಾರೆ ರಥ ಸಂಚರಿಸಲಿದೆ.

Janata Jaladhare drinking water campaign
ಜೆಡಿಎಸ್ ಜನತಾ ಜಲಧಾರೆಗೆ ಇಂದು‌ ಚಾಲನೆ
author img

By

Published : Apr 12, 2022, 10:21 AM IST

ರಾಮನಗರ: ನಗರದಲ್ಲಿ ಇಂದು 'ಜನತಾ ಜಲಧಾರೆ' ಗಂಗಾ ರಥಗಳಿಗೆ ವಿದ್ಯುಕ್ತವಾಗಿ ಚಾಲನೆ ಸಿಗಲಿದೆ. 15 ಗಂಗಾ ರಥಗಳಿಗೆ ಚಾಲನೆ ನೀಡಲಿರುವ ಮಾಜಿ ಪ್ರಧಾನಿ ಹೆಚ್‌.ಡಿ. ದೇವೇಗೌಡರು, ರಾಮನಗರದ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಲಿದ್ದಾರೆ.

ಬಳಿಕ ಜನತಾ ಜಲಧಾರೆ ಗಂಗಾ ರಥಗಳಿಗೆ ಹಸಿರು ನಿಶಾನೆ ನೀಡುವ ಮೂಲಕ‌ ಹನುಮ ಜಯಂತಿಯಂದು 15 ಪ್ರಮುಖ ಸ್ಥಳಕ್ಕೆ ಗಂಗಾ ರಥ ಹೊರಡಲಿದೆ. ಏ.16 ರಂದು ಪ್ರಮುಖ ನದಿ ಕೇಂದ್ರದಿಂದ ಜಲ ಸಂಗ್ರಹವಾಗಲಿದ್ದು, ನದಿ, ಉಪನದಿ ಸೇರಿದಂತೆ 94 ಸ್ಥಳದಿಂದ ಜಲ ಸಂಗ್ರಹವಾಗಲಿದೆ. ಕಾವೇರಿ, ಕಬಿನಿ, ಹೇಮಾವತಿ, ಅಘನಾಶಿನಿ, ಮಹಾದಾಯಿ, ಮಲಪ್ರಭಾ, ಘಟಪ್ರಭಾ ನದಿ ಸೇರಿದಂತೆ ಉಪನದಿಗಳ ಜಲ ಸಂಗ್ರಹಣೆಗೆ 15 ಗಂಗಾ ರಥಗಳು ಸಿದ್ಧಗೊಂಡಿವೆ.

ಜನತಾ ಜಲಧಾರೆ ಗಂಗಾ ರಥಗಳಿಗೆ ಇಂದು ಹಸಿರು ನಿಶಾನೆ

2023ರ ಸಾರ್ವತ್ರಿಕ ಚುನಾವಣೆಯಲ್ಲಿ ಜೆಡಿಎಸ್​ ಅಧಿಕಾರಕ್ಕೆ ಬಂದರೆ ನೀರಾವರಿಗೆ ಕಟಿಬದ್ಧವಾಗಲಿದೆ. ಒಂದು ವೇಳೆ ನಮಗೆ ಅಧಿಕಾರ ನೀಡಿ, ನೀರಾವರಿ ಯೋಜನೆ ಜಾರಿ ಮಾಡದಿದ್ದರೆ, ಜೆಡಿಎಸ್ ಪಕ್ಷವನ್ನೇ ವಿಸರ್ಜನೆ ಮಾಡುವುದಾಗಿ ಈಗಾಗಲೇ ಮಾಜಿ ಸಿಎಂ ಹೆಚ್​ಡಿಕೆ ಹೇಳಿದ್ದಾರೆ.

ನೀರಾವರಿ ಯೋಜನೆ ಜಾರಿಗೆ ತರಲು ಇಂದು ಜನತಾ ಜಲಧಾರೆ ರಥಗಳಿಗೆ ಚಾಲನೆ ಸಿಗಲಿದ್ದು,‌ 31 ಜಿಲ್ಲೆಗಳ 184 ತಾಲೂಕುಗಳಲ್ಲಿ ಜಲಧಾರೆ ರಥ ಸಂಚಾರವಾಗಲಿದೆ. ಶಕ್ತಿ ಕೇಂದ್ರ ರೇಷ್ಮೆ ನಗರಿ ರಾಮನಗರದಿಂದ ವಿವಿಧ ಜಿಲ್ಲೆಗಳಿಗೆ ಈ ಜಲಧಾರೆ ರಥಗಳು ತಲುಪಲಿವೆ. ಇಂದು ಜಲಧಾರೆ ಗಂಗಾ ರಥಗಳ ಚಾಲನೆ ಬಳಿಕ ಬೃಹತ್ ಸಮಾವೇಶ ಹಮ್ಮಿಕೊಂಡಿದ್ದು, ರಾಮನಗರ ಜಿಲ್ಲಾ ಕ್ರೀಡಾಂಗಣದಲ್ಲಿ ಜೆಡಿಎಸ್​ ಬೃಹತ್ ಸಮಾವೇಶಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಮಾಜಿ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ, ಜೆಡಿಎಸ್​ ರಾಜ್ಯಾಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ, ಮಾಜಿ ಸಚಿವರಾದ ಹೆಚ್.ಡಿ.ರೇವಣ್ಣ, ಸಾ.ರಾ.ಮಹೇಶ್, ಬಂಡೆಪ್ಪ ಖಾಶೆಂಪೂರ್, ಪುಟ್ಟರಾಜು, ಶಾಸಕರಾದ ಅನಿತಾ ಕುಮಾರಸ್ವಾಮಿ, ಅನ್ನದಾನಿ, ಅಲ್ಪಸಂಖ್ಯಾತ ನಾಯಕ ಸಿ.ಎಂ.ಇಬ್ರಾಹಿಂ, ಸಂಸದ ಪ್ರಜ್ವಲ್ ರೇವಣ್ಣ, ಜೆಡಿಎಸ್​ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ರಾಮನಗರ ಜೆಡಿಎಸ್​ ಜಿಲ್ಲಾಧ್ಯಕ್ಷ, ಮಾಗಡಿ ಶಾಸಕ ಎ.ಮಂಜುನಾಥ್ ಸೇರಿದಂತೆ ಹಲವು ಜೆಡಿಎಸ್​ ನಾಯಕರು ವೇದಿಕೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ಸಮಾವೇಶದಲ್ಲಿ 25 ಸಾವಿರಕ್ಕೂ ಹೆಚ್ಚು ಜನರು ಪಾಲ್ಗೊಳ್ಳುವ ನಿರೀಕ್ಷೆ ಇದ್ದು, ಈ ವೇದಿಕೆಯಲ್ಲಿ ಜನತಾ ಜಲಧಾರೆಯ ಸಂಕಲ್ಪವನ್ನ ತಿಳಿಸಲಿದ್ದಾರೆ. ಇದಲ್ಲದೇ ಈ ಯೋಜನೆಯಿಂದ ರಾಜ್ಯದ ನೀರಿನ ಸದ್ಬಳಕೆಯ ಬಗ್ಗೆ ನಾಯಕರು ವಿವರಣೆ ನೀಡಲಿದ್ದಾರೆ. ಮಾಜಿ ಸಿಎಂ ಹೆಚ್‌.ಡಿ ಕುಮಾರಸ್ವಾಮಿ ಅವರ ಮಹತ್ವಾಕಾಂಕ್ಷೆಯ ಕಾರ್ಯಕ್ರಮ ಇದಾಗಿದ್ದು, ಈ ಯೋಜನೆ ಮೂಲಕ‌ ಜೆಡಿಎಸ್ ಸಂಘಟನೆಯನ್ನ ಮುಂದಿನ ಚುನಾವಣೆಯಲ್ಲಿ ಅಧಿಕಾರಕ್ಕೆ ತರಲೇಬೇಕೆಂಬ ಪಣ ತೊಟ್ಟಿದ್ದಾರೆ.

ಇದನ್ನೂ ಓದಿ: ಏಪ್ರಿಲ್ 16ರ ಹನುಮ ಜಯಂತಿಯಂದು ಜನತಾ ಜಲಧಾರೆ ಆರಂಭ: ಹೆಚ್​ಡಿಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.