ರಾಮನಗರ: ನಿತ್ಯಾನಂದ ಸ್ವಾಮೀಜಿ ಮತ್ತೆ ಸುದ್ದಿಯಲ್ಲಿದ್ದಾರೆ. ಸ್ವಯಂಘೋಷಿತ ಕೈಲಾಸ ದೇಶದ ಸಂಸ್ಥಾಪಕ ಹಾಗೂ ಬಿಡದಿ ಧ್ಯಾನಪೀಠದ ಮುಖ್ಯಸ್ಥ ನಿತ್ಯಾನಂದ ಸ್ವಾಮೀಜಿ ಸದ್ಯ ಸಮಾಧಿ ಸ್ಥಿತಿ ತಲುಪಿದ್ದಾರೆ. ನಿರಂತರ ಧ್ಯಾನದಲ್ಲಿ ನಿರತರಾಗಿದ್ದಾರೆ ಎಂದೆಲ್ಲ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಬಗ್ಗೆ ನಿತ್ಯಾನಂದನ ಕೈಲಾಸ ಪೀಠದ್ದು ಎನ್ನಲಾದ ಫೇಸ್‌ಬುಕ್ ಪೇಜ್‌ನಲ್ಲಿ ಪ್ರತಿಕ್ರಿಯಿಸಿ ಪೋಸ್ಟ್ ಹಾಕಲಾಗಿದೆ. ಅದರಲ್ಲಿ ನಿತ್ಯಾನಂದರ ಸಂದೇಶಗಳನ್ನು ಬರೆಯಲಾಗಿದ್ದು, ನಿತ್ಯಾನಂದ ಕೈ ಬರಹ ಎನ್ನಲಾದ ಫೋಟೋ ಕೂಡ ಇದೆ. ನಾನು ಸದ್ಯ ಸಮಾಧಿ ಸ್ಥಿತಿ ತಲುಪಿದ್ದು, ಮತ್ತೆ 2026ರ ವೇಳೆಗೆ ಲೌಕಿಕ ಜಗತ್ತಿನ ಚಟುವಟಿಕೆಗಳಿಗೆ ಹಿಂತಿರುಗುತ್ತೇನೆ ಎಂದು ಬರೆಯಲಾಗಿದೆ.
ನಾನು ಈಗಾಗಲೇ ಸತ್ತು ಹೋಗಿದ್ದೇನೆ ಎಂದು ಕೆಲವರು ಸುದ್ದಿ ಹಬ್ಬಿಸಿದ್ದಾರೆ. ಆದರೆ, ಅದೆಲ್ಲ ಸುಳ್ಳು. ಈಗಲೂ 20ಕ್ಕೂ ಹೆಚ್ಚು ವೈದ್ಯರ ತಂಡ ನನ್ನನ್ನು ನೋಡಿಕೊಳ್ಳುತ್ತಿದೆ. ಸಮಾಧಿ ಸ್ಥಿತಿಯಲ್ಲಿದ್ದರೂ ನಿತ್ಯ ಶಿವ ಪೂಜೆ ಮಾಡುವುದನ್ನು ಬಿಟ್ಟಿಲ್ಲ. ಆದರೆ, ನೀರು–ಆಹಾರ ಸ್ವೀಕರಿಸುತ್ತಿಲ್ಲ ಎಂದೂ ಪೋಸ್ಟ್ನಲ್ಲಿ ನಿತ್ಯಾನಂದ ಸ್ಪಷ್ಟನೆ ಕೊಟ್ಟಿದ್ದಾರೆ.
ಇದನ್ನೂ ಓದಿ: ಮತಾಂತರ ನಿಷೇಧ ಮಸೂದೆ: ಅನುಮೋದನೆಗೆ ರಾಜ್ಯಪಾಲರಿಗೆ ರವಾನಿಸಲು ರಾಜ್ಯ ಸಚಿವ ಸಂಪುಟ ನಿರ್ಧಾರ