ETV Bharat / state

ಹೆಚ್​ಡಿಕೆ, ನಿಖಿಲ್ ಪರ ಮಾಜಿ ಪ್ರಧಾನಿ ದೇವೇಗೌಡ ಮತಯಾಚನೆ - ಮುಸ್ಲಿಂ ಸಮುದಾಯಕ್ಕೆ ರಿಸರ್ವೆಷನ್

ರಾಮನಗರ ಹಾಗೂ ಚನ್ನಪಟ್ಟಣದ ಅಭ್ಯರ್ಥಿಗಳಾದ ಹೆಚ್​ ಡಿ ಕುಮಾರಸ್ವಾಮಿ ಹಾಗೂ ನಿಖಿಲ್ ಕುಮಾರಸ್ವಾಮಿ ಅವರ ಪರವಾಗಿ ಮಾಜಿ ಪ್ರಧಾನಿ ದೇವೇಗೌಡರು ಚುನಾವಣಾ ಪ್ರಚಾರ ನಡೆಸಿದರು.

ಹೆಚ್​ಡಿಕೆ ಹಾಗೂ ನಿಖಿಲ್ ಕುಮಾರಸ್ವಾಮಿ ಪರ ಪ್ರಚಾರ ನಡೆಸಿದ ದೇವೇಗೌಡರು

author img

By

Published : May 6, 2023, 7:05 AM IST

ಹೆಚ್​ಡಿಕೆ ಹಾಗೂ ನಿಖಿಲ್ ಕುಮಾರಸ್ವಾಮಿ ಪರ ಪ್ರಚಾರ ನಡೆಸಿದ ದೇವೇಗೌಡರು

ರಾಮನಗರ: ''ನಿಮ್ಮೆಲ್ಲರಲ್ಲಿ ಕೈ ಮುಗಿದು ಪ್ರಾರ್ಥನೆ ಮಾಡ್ತೇನೆ. ಚನ್ನಪಟ್ಟಣ ಹಾಗೂ ರಾಮನಗರ ಕ್ಷೇತ್ರದ ಅನೇಕ ಜನರು ಮನೆಗೆ ಕರೆದುಕೊಂಡು ಹೋಗಿ ಊಟ ಬಡಿಸಿದವರು ನನ್ನ ಕಣ್ಣ ಮುಂದೆ ಇಲ್ಲ. ಆ ತಾಯಂದಿರು ಈಗ ಸ್ವರ್ಗದಲ್ಲಿ ಇದ್ದಾರೆ‌. ಅವರು ಅನ್ನ ಹಾಕಿ ಬೆಳೆಸಿದ್ದರಿಂದ 90ರ ವಯಸ್ಸಿನಲ್ಲಿಯೂ ನಿಮ್ಮ ಮುಂದೆ ನಿಂತಿದ್ದೇನೆ. ರೈತರಿಗೋಸ್ಕರ ಬಂದಿದ್ದೇನೆ'' ಎಂದು ಮಾಜಿ‌ ಪ್ರಧಾನಿ ಹೆಚ್. ಡಿ ದೇವೇಗೌಡ ಅವರು ತಮ್ಮ ಹಳೆ ನೆನಪು ಮೆಲುಕು ಹಾಕಿದರು. ರಾಮನಗರ ಹಾಗೂ ಚನ್ನಪಟ್ಟಣದಲ್ಲಿ ಅಭ್ಯರ್ಥಿಗಳಾದ ಹೆಚ್​ ಡಿ ಕುಮಾರಸ್ವಾಮಿ ಹಾಗೂ ನಿಖಿಲ್ ಕುಮಾರಸ್ವಾಮಿ ಪರ ಅವರು ಮತಯಾಚಿಸಿದರು.

''ಅರ್ಕಾವತಿ, ಇಗ್ಗಲೂರು ಜಲಾಶಯ ನಿರ್ಮಿಸಿದೆ. ಆದರೆ ಇವತ್ತು ಮೇಕೆದಾಟು ಅಣೆಕಟ್ಟೆಗೆ ಅವಕಾಶ ಕೊಡುತ್ತಿಲ್ಲ‌. ತಮಿಳರು ಸೇಲಂನಲ್ಲಿ ಏತನೀರಾವಾರಿ ಮುಖಾಂತರ ನೀರು ಹರಿಸಿ ಭತ್ತ ಬೆಳೆಯುತ್ತಿದ್ದಾರೆ. ನನ್ನ ರೈತರು ಕುಡಿಯವ ನೀರು ಕುಡಿಯುತ್ತಿದ್ದಾರೆ. ಈ ಬಗ್ಗೆ ಲೋಕಸಭೆಯಲ್ಲಿ 18 ಜನ ಭಾರತೀಯ ಜನತಾ ಪಾರ್ಟಿಯವರು, ಅನಂತ್ ಕುಮಾರ್​ಗೆ ಹೇಳಿದೆ‌. ನನ್ನ ಜನರಿಗೆ ನೀರಿಲ್ಲ ಅಂತ. ಅನಂತ ಕುಮಾರ್ ಬೆಳಗ್ಗೆ ಹೇಳ್ತೇನೆ ಎಂದು ಹೇಳಿ ಯಾರೂ ಕೂಡಾ ತಲೆ ಕೆಡಿಸಿಕೊಳ್ಳಲಿಲ್ಲ'' ಎಂದರು.

''ತಮಿಳರನ್ನು ಸೇರಿ ಸರ್ಕಾರ ಮಾಡಬೇಕು ಅಂತ ಎಂದರು. ಹೋರಾಟ ಮಾಡಿ ನಾನು ಜಲಾಶಯ ಕಟ್ಟಿದೆ. ವಾಜಪೇಯಿ, ಮನಮೋಹನ್ ಸಿಂಗ್, ಮೋದಿ ಯಾರು ಕೂಡ ಅಂದು ಹಣ ತಂದಿಲ್ಲ. ಸೊಪ್ಪು ಸಾರು ಮಾಡಿದ ತಾಯಂದಿರನ್ನು ನೆನೆಸಿಕೊಳ್ಳುತ್ತೇನೆ. ಅವರ ಹೆಸರು ಮರೆತೇ ಹೋಗಿದೆ. ರಾಮನಗರಕ್ಕೆ ಕೊನೆಗೆ ಬಂದಾಗ ನಿನ್ನ ನೋಡಿ ಸಾಯ್ತೇನೆ ಅಂತ ನನ್ನ ಬೆಳೆಸಿದವರು ಹೇಳುತ್ತಾರೆ'' ಎಂದು ಭಾಷಣದ ವೇಳೆ ದೇವೇಗೌಡರು ಗದ್ಗದಿತರಾದರು.

''ನನ್ನನ್ನು ಮುಖ್ಯಮಂತ್ರಿ ಹಾಗೂ ಪ್ರಧಾನಿಮಂತ್ರಿಯನ್ನಾಗಿ ಮಾಡಿದ ಜನರ ಬಳಿ ಇಂದು ಕೈಚಾಚಲು ಬಂದಿದ್ದೇನೆ. ನಿಖಿಲ್​ನನ್ನು ಮಂಡ್ಯದಲ್ಲಿ ಕರೆದುಕೊಂಡು ಹೋಗಿ ಸೋಲಿಸಿದ್ದಾರೆ. ನೀವು ಯಾವುದೇ ಕಾರಣಕ್ಕೂ ನಿಖಿಲ್​ ಕುಮಾರಸ್ವಾಮಿ ಸೋಲಿಸಲು ಬಿಡಲ್ಲ ಅಂತ ಮಾತು ಕೊಡಬೇಕು. ನಿಖಿಲ್ ಗೆಲ್ಲಿಸಿಕೊಡಿ. ತಮಿಳುನಾಡಿನಲ್ಲಿ ಒಬ್ಬ ಕಾಂಗ್ರೆಸ್, ಬಿಜೆಪಿಗ ಗೆಲ್ಲಲು ಆಗಿಲ್ಲ. ಆದರೆ ನಮಗೆ ಏನಾಗಿದೆ. ನಮ್ಮ ನೀರಿನ ಹಕ್ಕನ್ನು ಉಳಿಸಿಕೊಳ್ಳಲು ನಮಗೆ ಆಗುತ್ತಿಲ್ಲ. ಕುಮಾರಸ್ವಾಮಿ ಕೊಟ್ಟ ಕಾರ್ಯಕ್ರಮ ಹಿಂದೂಸ್ಥಾನದಲ್ಲಿ ಯಾರೂ ಕೊಟ್ಟಿಲ್ಲ. ಯಾರಾದರೂ ಮಾತು ಕೊಟ್ಟಂತೆ ನಡೆದುಕೊಂಡ ಮುಖ್ಯಮಂತ್ರಿ ಇದ್ರೆ ಅದು ಕುಮಾರಣ್ಣ ಮಾತ್ರ'' ಎಂದು ಹೇಳಿದರು.

''ಕಾಶ್ಮೀರಕ್ಕೆ 10 ವರ್ಷ ಯಾವ ಪ್ರಧಾನಿಯೂ ಹೋಗಿರಲಿಲ್ಲ. ನಾನು ಆವಾಗ ಕಾಶ್ಮೀರಕ್ಕೆ ಹೋಗಿದ್ದೆ. ಹೋದ್ರೆ ಹೊಡೆದಾಕ್ತಾರೆ ಎಂಬ ಭಯ ಇತ್ತು. ನಾನು ಸತ್ತರೆ ಹೊಳೆನರಸೀಪುರದಲ್ಲಿ ಮಣ್ಣು ಮಾಡುವಂತೆ ಹೇಳಿ ನಾನು ಹೋಗಿದ್ದೆ. ನಾಲ್ಕು ಬಾರಿ ಕಾಶ್ಮೀರಕ್ಕೆ ಹೋಗಿ ಅಲ್ಲಿ ಶಾಂತಿ ತಂದಿದ್ದೆ. ಮುಸ್ಲಿಂ ಬಾಂಧವರು ಇದನ್ನು ಅರ್ಥ ಮಾಡಿಕೊಳ್ಳಬೇಕು. ಮುಸ್ಲಿಂ ಸಮುದಾಯಕ್ಕೆ ಮೀಸಲಾತಿ ಕೊಟ್ಟಿರುವುದು ನಾವು'' ಎಂದು ದೇವೇಗೌಡ ಹೇಳಿದರು.

ಇದನ್ನೂ ಓದಿ: ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಮ್ಯಾಚ್ ಫಿಕ್ಸಿಂಗ್: ಸಿದ್ದರಾಮಯ್ಯ ಸತ್ಯ ಒಪ್ಪಿಕೊಂಡಿದ್ದಾರೆ ಎಂದ ಹೆಚ್​​ಡಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.