ರಾಮನಗರ : ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಗೆಲುವು ಸಾಧಿಸಿದ್ದಕ್ಕೆ ದರ್ಶನ್ ಅಭಿಮಾನಿಯೊಬ್ಬ ತನ್ನ ಬೆನ್ನಿನ ತುಂಬಾ ದರ್ಶನ್ ಡಿ-ಬಾಸ್ ಎಂಬ ಟ್ಯಾಟೂ ಹಾಕಿಸಿಕೊಳ್ಳುವ ಮೂಲಕ ಅಭಿಮಾನದ ಪರಾಕಾಷ್ಠೆ ಮೆರೆದಿದ್ದಾನೆ.
![Darshan tattoo on the back of the fan](https://etvbharatimages.akamaized.net/etvbharat/prod-images/kn_rmn_01_290519_darshan_fan_photo_7204219_2905digital_1559108211_1032.jpg)
ತಾಲೂಕಿನ ಕರೇನಹಳ್ಳಿ ಗ್ರಾಮದ ಕಾರ್ತಿಕ್ ಎಂಬಾತ ಬೆನ್ನಿನ ಮೇಲೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಸಿನಿಮಾದಲ್ಲಿನ ಭಾವಚಿತ್ರವನ್ನು ಪೂರ್ತಿಯಾಗಿ ಹಾಕಿಸಿಕೊಳ್ಳುವ ಮೂಲಕ ಗಮನ ಸೆಳೆದಿದ್ದಾನೆ. ನಗರದ ಮಧು ಟ್ಯಾಟೂ ಎಂಬ ಸೆಂಟರ್ನಲ್ಲಿ ಕಾರ್ತಿಕ್ ಈ ಹಚ್ಚೆಯನ್ನು ಹಾಕಿಸಿಕೊಂಡಿದ್ದಾನೆ.
![Darshan tattoo on the back of the fan](https://etvbharatimages.akamaized.net/etvbharat/prod-images/kn_rmn_01_290519_darshan_fan_photo_a_7204219_2905digital_1559108254_1009.jpg)
ನಟ ದರ್ಶನ್ ಅಭಿಮಾನಿಯಾಗಿರುವ ಕಾರ್ತಿಕ್ಗೆ ಮಂಡ್ಯ ಚುನಾವಣೆಯಲ್ಲಿ ಸುಮಲತಾ ಗೆದ್ದಿರೋದ್ದಕ್ಕೆ ಖುಷಿಯಾಗಿದೆಯಂತೆ. ಸುಮಲತಾ ಬೆನ್ನಿಗೆ ನಿಂತು ಚುನಾವಣಾ ಪ್ರಚಾರದಲ್ಲಿ ದರ್ಶನ್ ಪಾಲ್ಗೊಳ್ಳುವ ಮೂಲಕ ಅವರನ್ನು ಗೆಲುವಿನ ದಡಕ್ಕೆ ಮುಟ್ಟಿಸಿದ್ದಾರೆ. ಹಾಗಾಗಿ ದರ್ಶನ್ ಅಂದ್ರೆ ನನಗೆ ಎಲ್ಲಿಲ್ಲದ ಅಭಿಮಾನ.
ಹತ್ತಿರದಿಂದ ನಾನೊಮ್ಮೆ ಅವರನ್ನು ನೋಡಬೇಕು ಎಂದಿರುವ ಕಾರ್ತಿಕ್, ಅವರ ಎಲ್ಲಾ ಚಿತ್ರಗಳನ್ನು ನೋಡಿದ್ದೇನೆ. ದರ್ಶನ್ ಎಲ್ಲಿಗೆ ಬಂದರೂ, ಅವರನ್ನು ನೋಡಲು ಮಿಸ್ ಮಾಡೋದಿಲ್ಲ ಎಂಬ ಅಭಿಮಾನದ ಮಾತುಗಳನ್ನಾಡಿದ್ದಾನೆ. ಕಾರ್ತಿಕ್ ಬಿಡದಿಯಲ್ಲಿ ಡಿಸೈನರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾನಂತೆ. ಟ್ಯಾಟೂ ಹಾಕಿದ ಮಧು ಸಹ ದರ್ಶನ್ ಅಭಿಮಾನಿಯಾಗಿದ್ದು, ಈ ಟ್ಯಾಟೂಗೆ ಶೇ. 50ರಷ್ಟು ರಿಯಾಯಿತಿ ನೀಡಿದ್ದಾನೆ.