ETV Bharat / state

ಸ್ವ-ಉದ್ಯೋಗದ ಆಸೆ ತೋರಿಸಿ ಲಕ್ಷ ಲಕ್ಷ ವಂಚಿಸಿದ ಸೈಬರ್ ಖದೀಮರು!

ನಿಮ್ಮ ಸ್ವ ಉದ್ಯೋಗಕ್ಕೆ ಸಹಾಯ ಮಾಡುವುದಾಗಿ ಆನ್​ಲೈನ್​​ನಲ್ಲಿ ಹಣ ಪಾವತಿಸಿಕೊಂಡು 3 ಲಕ್ಷಕ್ಕೂ ಹೆಚ್ಚಿನ ಹಣ ವಂಚಿಸಿರುವುದು ಬೆಳಕಿಗೆ ಬಂದಿದೆ. ನಕಲಿ ಕಂಪನಿ ಸೃಷ್ಟಿಸಿ ಹಂತ ಹಂತವಾಗಿ ಹಣ ಪಡೆದು ವಂಚಿಸಲಾಗಿದೆ. ಈ ಸಂಬಂಧ ಸೈಬರ್ ಠಾಣೆಯಲ್ಲಿ ಎಫ್​​ಐಆರ್ ದಾಖಲಾಗಿದೆ.

ಸ್ವ-ಉದ್ಯೋಗದ ಕನಸು ತೋರಿಸಿ ಲಕ್ಷ ಲಕ್ಷ ವಂಚಿಸಿದ ಸೈಬರ್ ಖದೀಮರು
author img

By

Published : Feb 5, 2021, 8:10 PM IST

ರಾಮನಗರ: ಕೋವಿಡ್ ಲಾಕ್‌ಡೌನ್ ಬಳಿಕ ಅನೇಕರು ಉದ್ಯೋಗ ಕಳೆದುಕೊಂಡಿದ್ದಾರೆ. ಸ್ವಯಂ ಉದ್ಯೋಗ ನಡೆಸಲು ಸಾವಿರಾರು ಮಂದಿ ಹಾತೊರೆಯುತ್ತಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಳ್ಳಲು ಕೆಲ ವಂಚಕರು ನಕಲಿ ಕಂಪನಿಗಳ ಹೆಸರಿನಲ್ಲಿ ಉದ್ಯೋಗಕ್ಕೆ ನೆರವು ನೀಡುವ ನೆಪ ಹೇಳಿ ಹಣ ಗಳಿಸುವ ಮಾರ್ಗ ಕಂಡುಕೊಡಿದ್ದಾರೆ. ಈ ಜಾಲಕ್ಕೆ ಸಿಲುಕಿ ಅನೇಕರು ಲಕ್ಷ ಲಕ್ಷ ಕಳೆದುಕೊಳ್ಳುತ್ತಿದ್ದಾರೆ.

ಇದೀಗ ಇಂತಹ ಜಾಲಕ್ಕೆ ಸಿಲುಕಿ ವ್ಯಕ್ತಿಯೋರ್ವ 3.85 ಲಕ್ಷಕ್ಕೂ ಅಧಿಕ ಹಣ ಕಳೆದುಕೊಂಡು ಸೈಬರ್ ಠಾಣೆಯ ಮೆಟ್ಟಿಲೇರಿದ್ದಾರೆ. ಕನಕಪುರ ತಾಲೂಕಿನ ಸುನೀಲ್ ಎಂಬ ಯುವಕ ಸೈಬರ್ ಸೆಂಟರ್ ತೆರೆದು, ಸ್ವಯಂ ಉದ್ಯೋಗ ಮಾಡಬೇಕೆಂಬ ಕನಸಿಗೆ ಸೈಬರ್ ಖದೀಮರು ತಣ್ಣೀರೆರಚಿದ್ದಾರೆ. ವಾರದ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡ ಜಾಹೀರಾತನ್ನು ನಂಬಿದ ಕನಕಪುರದ ಅರಳಾಳುಸಂದ್ರದ ನಿವಾಸಿ ಸುನೀಲ್, ಸೈಬರ್ ಸೆಂಟರ್‌ ತೆರೆಯಲು ತಮ್ಮ ಫೋನ್ ನಂಬರ್​ ಹಾಕಿದ್ದಾರೆ. ಇದಾದ ಮೂರೇ ದಿನದಲ್ಲಿ ಸುಮಾರು ಲಕ್ಷ ಲಕ್ಷ ರೂ. ಕಳೆದುಕೊಂಡಿದ್ದಾರೆ.

Cyber ​​launderers who cheat lakhs of rupees
ನಕಲಿ ಕಂಪನಿ ಹೆಸರಿಗೆ ಹಣ ನೀಡಲು ಹೇಳಿದ್ದ ವಂಚಕರು
ನಕಲಿ ಕಂಪನಿ ಸೃಷ್ಟಿಸಿ ಮೋಸ

ವೆಬ್​​​ ಸಿಎಸ್‌ಬಿ ಪಾಯಿಂಟ್‌ಗಳ ಮೂಲಕ ಸೈಬರ್ ಸೆಂಟರ್ ತೆರೆಯಲು ಎಲ್ಲಾ ರೀತಿಯ ಸವಲತ್ತು, ಬಾಡಿಗೆ, ಕಟ್ಟಡದ ಅಡ್ವಾನ್ಸ್ ಎಲ್ಲವನ್ನು ಕಂಪನಿಯೇ ನೀಡಲಿದೆ ಎಂದು ನಂಬಿಸಿದ ಖದೀಮರು, ಕಂಪನಿಯ ಗ್ರಾಹಕರಾಗಲು 50 ಸಾವಿರ ಡೆಪಾಸಿಟ್ ಮಾಡಬೇಕು. ನಿಮಗೆ ನಂಬಿಕೆ ಇಲ್ಲದಿದ್ದರೆ ಈ ಹಿಂದೆ ನಮ್ಮ ಕಂಪನಿಯಿಂದ ಸೈಬರ್ ಸೆಂಟರ್ ತೆರೆದಿರುವವರನ್ನು ವಿಚಾರಿಸಹುದು ಎಂದು ದೂರವಾಣಿ ಸಂಖ್ಯೆಯನ್ನು ಸಹ ನೀಡಿದ್ದಾರೆ. ಇದನ್ನೇ ನಂಬಿದ್ದ ಸುನೀಲ್ 50 ಸಾವಿರ ರೂ.ಗಳನ್ನು ಅಕೌಂಟ್‌ಗೆ ಹಾಕಿದ್ದಾರೆ.

ಸರ್ಟಿಫಿಕೇಟ್ ನೀಡಿದ ನಕಲಿ ಕಂಪನಿ

ಇದಾದ ಬಳಿಕ ನಿಮ್ಮ ಹೆಸರಿನಲ್ಲಿ ಒಡಿ ಅಕೌಂಟ್ ತೆರೆಯಲಾಗಿದೆ ಎಂದು ನಂಬಿಸಿದ್ದಾರೆ. ಇನ್ನು ನಿಮಗೆ ಕಂಪನಿ ತೆರೆಯಲು ರಿಜಿಸ್ಟ್ರೇಷನ್ ಆಗಬೇಕಿದೆ. ಇದಕ್ಕಾಗಿ 3 ಕಂತುಗಳಲ್ಲಿ ಒಟ್ಟು 52,500 ರೂ.ಗಳನ್ನು ಪಡೆದುಕೊಂಡಿದ್ದಾರೆ. ಇದಾದ ಬಳಿಕ ನಿಮ್ಮ ಹಣವನ್ನು ಮರು ಪಾವತಿ ಮಾಡಲಾಗುವುದು ಎಂದು ನಂಬಿಸಿ ಮತ್ತೊಮ್ಮೆ 50 ಸಾವಿರ ರೂ. ಪಡೆದುಕೊಂಡಿದ್ದಾರೆ.
ಇಷ್ಟು ಮೊತ್ತದ ಹಣ ಸಂದಾಯ ಮಾಡಿದ ಬಳಿಕ ಸುನೀಲ್ ವಾಟ್ಸಪ್​​​​​​ ನಂಬರ್​ಗೆ ಕಂಪನಿಯೊಂದಿಗೆ 5 ವರ್ಷದ ಅಗ್ರಿಮೆಂಟ್ ಮಾಡಿಕೊಂಡಿರುವ ಕಾಪಿಯೊಂದನ್ನು ಕಳುಹಿಸಿ, ಸೈಬರ್ ಸೆಂಟರ್‌ಗೆ ಅಗತ್ಯವಿರುವ ವಸ್ತುಗಳನ್ನು ಕೊರಿಯರ್ ಮಾಡಲಾಗಿದೆ ಎಂದು ಟ್ರ್ಯಾಕಿಂಗ್ ಐಡಿ ಸಹ ಕಳುಹಿಸಿದ್ದಾರೆ.

FIR filed against a fake company
ನಕಲಿ ಕಂಪನಿ ವಿರುದ್ಧ ದಾಖಲಾದ ಎಫ್​ಐಆರ್ ಪ್ರತಿ

ಇದರಿಂದಾಗಿ ಇನ್ನೇನು ಸ್ವಂತ ಸೈಬರ್ ಸೆಂಟರ್ ತೆರೆದು ಕನಸು ನನಸು ಮಾಡಿಕೊಳ್ಳುವ ತವಕದಲ್ಲಿದ್ದ ಸುನೀಲ್​​​ಗೆ ಕರೆ ಮಾಡಿದ ವಂಚಕರು, ನಿಮಗೆ 10 ಲಕ್ಷದ ಓಡಿ ಅಪ್ರೂವಲ್ ಆಗಿದೆ. ಆದರೆ ಅದಕ್ಕಾಗಿ 90 ಸಾವಿರ ರೂ.ಗಳ ಜಿಎಸ್‌ಟಿ ಹಣ ಪಾವತಿ ಮಾಡಬೇಕು. ನೀವು 45 ಸಾವಿರ ಹಾಕಿ. ಕಂಪನಿಯಿಂದ 45 ಸಾವಿರ ರೂ.ಗಳನ್ನು ಪಾವತಿಸುವುದಾಗಿ ಹೇಳಿದ್ದಾರೆ. ಇದನ್ನು ನಂಬಿ 45 ಸಾವಿರ ಹಾಕಿದ್ದಾರೆ. ಇಷ್ಟಾದರೂ ತೃಪ್ತರಾಗದ ಖದೀಮರು, ಕಂಪನಿಯಿಂದ 45 ಸಾವಿರ ಡೆಪಾಸಿಟ್ ಮಾಡಲು ಆಗುತ್ತಿಲ್ಲ. ನೀವೇ ಮತ್ತೆ 45 ಸಾವಿರ ರೂ. ಹಾಕಿ, ನಿಮಗೆ ಮರಳಿಸುತ್ತೇವೆ ಎಂದಿದ್ದಾರೆ.

ಇಷ್ಟು ಮಾತ್ರವಲ್ಲದೆ ಸೈಬರ್ ಸೆಂಟರ್ ತೆರೆಯಲು ಎಲ್ಲವು ಸಿದ್ಧವಿದೆ. ಆದರೆ ಇನ್ಸೂರೆನ್ಸ್ ಕಟ್ಟಬೇಕು ಎಂಬ ಕಾರಣ ನೀಡಿ ಮತ್ತೆ 37,750 ರೂ.ಗಳನ್ನು ಪಡೆದುಕೊಂಡಿದ್ದಾರೆ. ಇದಾದ ಬಳಿಕ ಎಷ್ಟೇ ಕರೆ ಮಾಡಿದರೂ ರಾಂಗ್ ನಂಬರ್ ಎನ್ನುವ ಉತ್ತರ ಬರುತ್ತಿದ್ದು, ಸುನೀಲ್​ಗೆ ತಾನು ವಂಚನೆಗೊಳಗಾಗಿರುವುದು ತಿಳಿದಿದೆ. ಈ ಕುರಿತು ಸುನೀಲ್​​​ ಸೈಬರ್ ಠಾಣೆಯಲ್ಲಿ ದೂರು ನೀಡಿದ್ದು, ಎಫ್​ಐಆರ್ ದಾಖಲಾಗಿದೆ.

ಇದನ್ನೂ ಓದಿ: ಗ್ರಾಪಂ ಅಧ್ಯಕ್ಷ ಸ್ಥಾನಕ್ಕೂ ಲಾಬಿ.. ರೆಸಾರ್ಟ್​​​ನಲ್ಲಿ ಸದಸ್ಯರ ಮಸ್ತ್​ ಮಸ್ತ್ ನಾಗಿಣಿ ಡ್ಯಾನ್ಸ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.