ETV Bharat / state

Ramanagara crime : ತವರು ಮನೆ ಸೇರಿದ್ದ ಹೆಂಡ್ತಿ.. ಶೀಲ ಶಂಕಿಸಿ ಮಕ್ಕಳೆದುರೇ ಪತ್ನಿಯನ್ನು ಕೊಂದ ಪತಿ - ಮೊಹಮ್ಮದ್‌ ನೂಹ್ಮನ್‌

ತವರು ಮನೆಯಿಂದ ಹೆಂಡತಿಯನ್ನು ಕರೆದುಕೊಂಡು ಬಂದಿದ್ದ ಪತಿ, ದಾರಿಮಧ್ಯದಲ್ಲೇ ದೊಣ್ಣೆಯಲ್ಲಿ ಹೊಡೆದು ಕೊಂದಿದ್ದಾನೆ.

Husband killed his wife in front of the children
ಶೀಲ ಶಂಕಿಸಿ ಮಕ್ಕಳೆದುರೇ ಪತ್ನಿಯನ್ನು ಕೊಂದ ಪತಿ
author img

By

Published : Jun 17, 2023, 6:21 PM IST

ರಾಮನಗರ: ಊರಿಗೆ ಹೋಗೋಣವೆಂದು ಕರ್ಕೊಂಡು ಬಂದು ಮಕ್ಕಳೆದುರೇ ದಾರಿ ಮಧ್ಯೆ ವ್ಯಕ್ತಿಯೊಬ್ಬ ಶೀಲ ಶಂಕಿಸಿ ತನ್ನ ಪತ್ನಿಯನ್ನು ಮಕ್ಕಳೆದುರೇ ದೊಣ್ಣೆಯಿಂದ ಹೊಡೆದು ಬರ್ಬರವಾಗಿ ಕೊಲೆ ಮಾಡಿರುವ ಪ್ರಕರಣ ಕನಕಪುರ ತಾಲೂಕಿನ ಹೊಸಕೋಟೆ ಗ್ರಾಮದಲ್ಲಿ ನಡೆದಿದೆ.

ಅಂಬಿಕಾ ಕೊಲೆಯಾದ ಮಹಿಳೆಯಾಗಿದ್ದು, ರಾಮನಗರದ ಹಳೇಬೀದಿ ನೀಲಕಂಠೇಶ್ವರ ಬಡಾವಣೆ ನಿವಾಸಿ ಮುತ್ತುರಾಜು ಕೊಲೆಗೈದ ಆರೋಪಿ. ಕೌಟುಂಬಿಕ ಕಲಹದಿಂದ ಬೇಸತ್ತು ಅಂಬಿಕಾ ತಮ್ಮ ತವರುಮನೆ ಹೊಸಕೋಟೆಗೆ ತೆರಳಿದ್ದರು. ಈ ವೇಳೆ ಪತ್ನಿಯನ್ನು ನೋಡುವ ನೆಪದಲ್ಲಿ ಅಲ್ಲಿಗೆ ಬಂದಿದ್ದ ಆರೋಪಿ ಮುತ್ತುರಾಜು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಊರಿಗೆ ಹೋಗೋಣ ಎಂದು ಬೈಕ್‍ನಲ್ಲಿ ಕೂರಿಸಿಕೊಂಡು ಬಂದಿದ್ದಾರೆ. ಹೊಸಕೋಟೆ ಗ್ರಾಮದ ಹೊರವಲಯದಲ್ಲಿ ಬೈಕ್ ನಿಲ್ಲಿಸಿ ಇಬ್ಬರು ಜಗಳವಾಡಿಕೊಂಡಿದ್ದಾರೆ.

ಈ ವೇಳೆ ಜಗಳ ವಿಕೋಪಕ್ಕೆ ತಿರುಗಿ ಮುತ್ತುರಾಜ್ ಅಂಬಿಕಾರನ್ನು ದೊಣ್ಣೆಯಿಂದ ಮನಬಂದಂತೆ ಹೊಡೆದು ಹತ್ಯೆಗೈದಿದ್ದಾರೆ. ಸ್ಥಳೀಯರು ಈ ಕೊಲೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಆರೋಪಿ ಮುತ್ತುರಾಜ್‍ನನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಕನಕಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಉಳ್ಳಾಲದಲ್ಲಿ ಯುವಕ ಆತ್ಮಹತ್ಯೆ: ಯುವಕನೋರ್ವ ಮನೆಯೊಳಗಡೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಲ್ಲಿನ ಪೊಲೀಸ್‌ ಠಾಣಾ ವ್ಯಾಪ್ತಿಯ ತಲಪಾಡಿ ಕೆ. ಸಿ. ನಗರದಲ್ಲಿ ನಡೆದಿದೆ. ರಶೀದಾ ಭಾನು ಎಂಬವರ ಪುತ್ರ ಮೊಹಮ್ಮದ್‌ ನೂಹ್ಮನ್‌ (19) ಆತ್ಮಹತ್ಯೆ ಮಾಡಿಕೊಂಡಿರುವ ಯುವಕ. ಖಿನ್ನತೆಗೆ ಒಳಗಾಗಿದ್ದ ನೂಹ್ಮನ್‌ ಮನೆಯ ಒಳಗಡೆ ಕೊಠಡಿಯೊಳಗೆ ಸಾವಿಗೆ ಶರಣಾಗಿದ್ದಾನೆ. ಮನೆಮಂದಿ ಬಾಗಿಲು ಒಡೆದು ನೋಡಿದಾಗ ಇಂದು ಬೆಳಗ್ಗೆ ಘಟನೆ ಮೊಹಮ್ಮದ್​ ನೂಹ್ಮನ್​ ಮೃತದೇಹ ಕಂಡಿದೆ. ಐವರು ಸಹೋದರಿಯರಿಗೆ ಓರ್ವನೇ ಸಹೋದರನಾಗಿದ್ದ. ಖಿನ್ನತೆಗೆ ಕಾರಣ ತಿಳಿದುಬಂದಿಲ್ಲ. ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪರೀಕ್ಷೆಯಲ್ಲಿ ಫೈಲ್​ ಎಂದು ಯುವಕ ಆತ್ಮಹತ್ಯೆ: ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ ನೀಟ್​ ನಲ್ಲಿ ಎರಡನೇ ಬಾರಿಯೂ ಫೇಲ್​​ ಆದೆ ಎನ್ನುವ ಕಾರಣಕ್ಕೆ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಜಸ್ಥಾನದ ಕೋಟಾದಲ್ಲಿ ಶುಕ್ರವಾರ ನಡೆದಿತ್ತು. ಬಿಹಾರ ಮೂಲದ ರೋಷನ್​ ಎನ್ನುವ 21 ವರ್ಷದ ಯುವಕ ಕಳೆದ ಎರಡು ವರ್ಷಗಳಿಂದ ನೀಟ್​ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ. ಪರೀಕ್ಷೆ ಫಲಿತಾಂಶ ಪ್ರಕಟವಾದಾಗ ಯುವಕ ತನ್ನ ದೆಹಲಿಯ ಸಂಬಂಧಿಕರ ಮನೆಯಲ್ಲಿದ್ದನು. ನಂತರ ತನ್ನ ಕೋಟಾಗೆ ಮರಳಿದ್ದನು. ದೆಹಲಿಯ ಚಿಕ್ಕಪ್ಪ ಕರೆ ಮಾಡಿದಾಗ ರೋಷನ್​ ಕರೆ ಸ್ವೀಕರಿಸಿರಲಿಲ್ಲ. ರೋಷನ್​ ಕರೆ ಸ್ವೀಕರಿಸುತ್ತಿಲ್ಲ ಎಂದು ಚಿಕ್ಕಪ್ಪ ಕೋಟಾದಲ್ಲಿರುವ ತಮ್ಮ ಸಹೋದರನಿಗೆ ತಿಳಿಸಿದ್ದಾರೆ. ಅದರಂತೆ ಅವರು ರೋಷನ್​ ವಾಸವಾಗಿದ್ದ ರೂಂ ಗೆ ಬಂದು ಪರೀಕ್ಷಿಸಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಪ್ರಯಾಣಿಕನ ಮೇಲೆ ಆಟೋ ಚಾಲಕನ ಗೂಂಡಾ ವರ್ತನೆ ಸಿಸಿಟಿವಿಯಲ್ಲಿ ಸೆರೆ: ಮತ್ತೊಂದೆಡೆ ಚಾಲಕರಿಂದ ಸುಲಿಗೆ ಮಾಡುತ್ತಿದ್ದ ಆರೋಪಿ ಬಂಧನ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.