ETV Bharat / state

ಕಾಂಗ್ರೆಸ್ ಪಕ್ಷದ ತುಂಬೆಲ್ಲಾ ಇರುವುದೇ ದಲ್ಲಾಳಿಗಳು: ಡಾ. ಸಿ ಅಶ್ವತ್ಥ ನಾರಾಯಣ ವಾಗ್ದಾಳಿ - santro ravi

ಕತ್ತಲೆಯಲ್ಲಿ ಬಜೆಟ್ ಮಂಡಿಸಿದ್ದ ಕಾಂಗ್ರೆಸ್​ - ಬಿ.ಕೆ ಹರಿಪ್ರಸಾದ್ ಕೀಳುಮಟ್ಟದ ಹೇಳಿಕೆಗೆ ಉತ್ತರ ಕೊಡದೇ ಇರೋದು ಒಳ್ಳೆಯದು - ಕಾಂಗ್ರೆಸ್​ನವರು ಪೇಮೆಂಟ್ ಕೊಟ್ಟರೆ ಮಾತ್ರ ಕೆಲಸ ಮಾಡಿದವರು - ಬಿಜೆಪಿ ವಿಜಯ ಸಂಕಲ್ಪ ಅಭಿಯಾನಕ್ಕೆ ಸಿದ್ದತೆ.

congress-party-is-full-of-brokers-dr-c-aswattha-narayana-rant
ಕಾಂಗ್ರೆಸ್ ಪಕ್ಷದ ತುಂಬೆಲ್ಲಾ ಇರುವುದೇ ದಲ್ಲಾಳಿಗಳು: ಡಾ. ಸಿ ಅಶ್ವತ್ಥ ನಾರಾಯಣ ವಾಗ್ದಾಳಿ
author img

By

Published : Jan 18, 2023, 7:08 PM IST

ರಾಮನಗರ: ಜನ ವಿರೋಧಿ, ರೈತ ವಿರೋಧಿ ಕೆಲಸ ಮಾಡಿದ್ದು ಕಾಂಗ್ರೆಸ್ ಸರ್ಕಾರ. ಲೋಕಾಯುಕ್ತ ಸಂಸ್ಥೆ ಅಧಿಕಾರ ಮೊಟಕುಗೊಳಿಸಿದವರು, ಭ್ರಷ್ಟಾಚಾರಕ್ಕೆ ಪೂರಕವಾಗಿರುವವರು ಕಾಂಗ್ರೆಸ್ ಪಕ್ಷದವರೆಂದು ಸಚಿವ ಅಶ್ವತ್ಥ ನಾರಾಯಣ ಕಾಂಗ್ರೆಸ್ ನಾಯಕರ ವಿರುದ್ದ ವಾಗ್ಧಾಳಿ ನಡೆಸಿದರು. ರಾಮನಗರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ದಲ್ಲಾಳಿಗಳ ಸರ್ಕಾರ, ಅವರ ಹೇಳಿಕೆಗೆ ಮಹತ್ವ ನೀಡುವ ಅವಶ್ಯಕತೆ ಇಲ್ಲ ಎಂದು ಹೇಳಿದರು.

ಡಿಕೆ ಶಿವಕುಮಾರ್​ಗೆ ಅಶ್ವತ್ಥ ನಾರಾಯಣ್ ಟಾಂಗ್: ಕಾಂಗ್ರೆಸ್​ ಸರ್ಕಾರ ಪವರ್ ಇದ್ದಾಗಲೇ ಪವರ್ ಕಟ್ ಮಾಡಿಕೊಂಡು ಕತ್ತಲೆಯಲ್ಲಿ ಬಜೆಟ್ ಮಂಡಿಸಿದ್ದರು ಎಂದು 200 ಯೂನಿಟ್ ವಿದ್ಯುತ್ ಉಚಿತವಾಗಿ ನೀಡುವ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ಗೆ ಸಚಿವರು ಟಾಂಗ್ ಕೊಟ್ಟರು. ಇದಲ್ಲದೇ ಮೆಡಿಕಲ್ ಕಾಲೇಜು ವಿಚಾರವಾಗಿ ಮಾತನಾಡಿ, ಆರೋಗ್ಯ ವಿವಿ ವಿಚಾರ ಇದೀಗ ಕೋರ್ಟ್​ನಲ್ಲಿದೆ. ಮುಗಿದ ಕೂಡಲೇ ಟೆಂಡರ್ ಪ್ರಕ್ರಿಯೆ ನಡೆಯಲಿದೆ ಎಂದು ತಿಳಿಸಿದರು.

ಯುಪಿಎ ಸರ್ಕಾರದ ಅವಧಿಯಲ್ಲಿ ಬೆಲೆ ಏರಿಕೆ ಎಷ್ಟಿತ್ತು..? ನಮ್ಮ ಸರ್ಕಾರದ ಬೆಲೆ ಎಷ್ಟಿದೆ ಅನ್ನೋದನ್ನ ಬುದ್ದಿವಂತ ಕೆಪಿಸಿಸಿ ಅಧ್ಯಕ್ಷರು ತೋರಿಸಲಿ. ಅವರ ಸಮಯದಲ್ಲಿ ಯುದ್ಧ ನಡೆದಿರಲಿಲ್ಲ. ಇವತ್ತು ರಷ್ಯಾ, ಉಕ್ರೇನ್ ಯುದ್ಧ ನಡೆಯುತ್ತಿದೆ. ಯುದ್ಧ, ಕೋವಿಡ್ ಸಮಸ್ಯೆ ನಡುವೆಯೂ ಬೆಲೆ ಏರಿಕೆ ನಿಯಂತ್ರಿಸಿದ್ದೇವೆ. ಬೆಲೆ ಏರಿಕೆ ಬಗ್ಗೆಯೇ ಕಾಂಗ್ರೆಸ್ ನಾಯಕರೇ ತಿಳಿಸಲಿ ಎಂದು ಹೇಳಿದರು.

ಬಿಜೆಪಿಯಲ್ಲಿ ಸ್ಯಾಂಟ್ರೋ ರವಿ, ಪೈಟರ್ ರವಿ, ಸಿಟಿ ರವಿ ಹೇಳಿಕೆ ವಿಚಾರವಾಗಿ ಮಾತನಾಡಿ, ಬಿ.ಕೆ ಹರಿಪ್ರಸಾದ್ ಕೀಳುಮಟ್ಟದ ಹೇಳಿಕೆಗೆ ಉತ್ತರ ಕೊಡದೇ ಇರೋದು ಒಳ್ಳೆಯದು. ಕಾಂಗ್ರೆಸ್ ಪಕ್ಷದ ತುಂಬೆಲ್ಲಾ ಇರುವುದೇ ದಲ್ಲಾಳಿಗಳು. ಕಾಂಗ್ರೆಸ್ ಪಕ್ಷ ದಲ್ಲಾಳಿ ಪಕ್ಷ, ಭ್ರಷ್ಟಾಚಾರ ಬೆಳೆಸಿದವರು. ರೇಟ್ ಕಾರ್ಡ್ ಇಟ್ಟುಕೊಂಡು ಕೆಲಸ ಮಾಡುವವರು. ಫ್ರೀಯಾಗಿ ಎಂದೂ ಕೆಲಸ ಮಾಡಿಲ್ಲ, ಪೇಮೆಂಟ್ ಕೊಟ್ಟರೆ ಮಾತ್ರ ಕೆಲಸ ಮಾಡಿದವರು ಎಂದು ವಾಗ್ದಾಳಿ ನಡೆಸಿದರು.

ಯತ್ನಾಳ್ ವಿರುದ್ದ ಗರಂ: ಬಿಜೆಪಿಯಲ್ಲಿ ಪಕ್ಷವೇ ಬಲಿಷ್ಟವಾಗಿರೋದು. ಇಲ್ಲಿ ಯಾರೂ ಸೂಪರ್ ಲೀಡರ್​ಗಳು ಇಲ್ಲ. ಸೂಪರ್ ಲೀಡರ್ ನೋಡುವುದಾದರೆ ಪ್ರತಿಪಕ್ಷಗಳಲ್ಲಿ ನೋಡಬೇಕು. ನಾವೆಲ್ಲರೂ ಪಕ್ಷದ ನೆರಳಿನಲ್ಲಿ ಇರುವವರು, ಪಕ್ಷಕ್ಕಿಂತ ದೊಡ್ಡವರು ಯಾರೂ ಇಲ್ಲ. ಯತ್ನಾಳ್ ಯಾವ ಸ್ಥಾನದಲ್ಲಿದ್ದಾರೆ..? ಅವರ ಶಕ್ತಿ ಏನೂ ಎಂದು ಜನಕ್ಕೆ ಈಗಾಗಲೇ ಗೊತ್ತಾಗಿದೆ. ಅವರ ಹೇಳಿಕೆಯಿಂದ ನಮ್ಮ ಪಕ್ಷಕ್ಕೆ ಯಾವುದೇ ಡ್ಯಾಮೇಜ್ ಇಲ್ಲ ಎಂದರು.

ಬಿಜೆಪಿ ವಿಜಯ ಸಂಕಲ್ಪ ಅಭಿಯಾನಕ್ಕೆ ಸಿದ್ದತೆ: ಜನವರಿ 21 ರಿಂದ 29ರ ವರೆಗೆ ವಿಜಯ ಸಂಕಲ್ಪ ಅಭಿಯಾನ ನಡೆಯಲಿದ್ದು, ಬಿಜೆಪಿ ಪಕ್ಷವು ಸಂಕಲ್ಪ ಯಾತ್ರೆಗೆ ಸಕಲ ಸಿದ್ದತೆ ಮಾಡಿಕೊಂಡಿದೆ, ರಾಜ್ಯದ 58 ಸಾವಿರ ಭೂತ್​ ಮತ್ತು 312 ಮಂಡಲಗಳಲ್ಲಿ ವಿಜಯ ಸಂಕಲ್ಪ ಅಭಿಯಾನವನ್ನು ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಸರ್ಕಾರದ ಸಾಧನೆಗಳನ್ನ ಕರಪತ್ರದ ಮೂಲಕ ಮನೆಮನೆಗೆ ತಲುಪಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

ಅಭಿಯಾನದಲ್ಲಿ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳ ಕಾರ್ಯಕ್ರಮದ ಕುರಿತು ಮಾಹಿತಿ ನೀಡಲಾಗುವುದು. ಆನ್​ಲೈನ್​ ಮೂಲಕ ಪಕ್ಷದ ಸದಸ್ಯತ್ವ ನೋಂದಣಿ ಕಾರ್ಯಕ್ರಮ ಹಮ್ಮಿಕೊಂಡು ಮನೆಮನೆಗೆ ತೆರಳಿ ಪೋಸ್ಟರ್, ಸ್ಟಿಕ್ಕರ್ ಹಾಕಿ ಸರ್ಕಾರದ ಸಾಧನೆಗಳ ಪ್ರಚಾರ ಮಾಡಲಾಗುವುದು. 9 ದಿನಗಳ ಕಾಲ ರಾಜ್ಯಾದ್ಯಂತ ಕಾರ್ಯಕ್ರಮ ನಡೆಸುತ್ತಿದ್ದೇವೆ.
ರಾಮನಗರದಲ್ಲೂ ಕಾರ್ಯಕ್ರಮಕ್ಕೆ ಸಿದ್ಧತೆ ಮಾಡಿಕೊಂಡಿದ್ದು, ಎಲ್ಲ ಶಾಸಕರು, ವಿಧಾನ ಪರಿಷತ್ ಸದಸ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ: ಕೇಂದ್ರದ ವಿರುದ್ಧ ಹೋರಾಡಲು ಕೆಸಿಆರ್ ರೆಡಿ: ಬಿಎಸ್​​ಆರ್​​​​​​​​​​​ ಬೃಹತ್​ ಸಭೆಯಲ್ಲಿ ಸಿಎಂ ಪಿಣರಾಯಿ ವಿಜಯನ್ ಘೋಷಣೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.