ರಾಮನಗರ: ಜೆಡಿಎಸ್ ಪಕ್ಷ ಸಮಯ ಸಾಧಕ ಪಕ್ಷ, ಅಧಿಕಾರ ಎಲ್ಲಿ ಸಿಗುತ್ತೋ ಆ ಕಡೆ ಹೋಗುತ್ತಾರೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಎಂ. ಲಿಂಗಪ್ಪ ವಾಗ್ದಾಳಿ ನಡೆಸಿದ್ದಾರೆ.
ನಗರದ ಅಂಬೇಡ್ಕರ್ ಭವನದಲ್ಲಿ ಇಂದು ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಎಂಎಲ್ಸಿ ಸಿ.ಎಂ.ಲಿಂಗಪ್ಪ ಅವರು ಕನಕದಾಸರ ಹಾಡು ಹಾಡಿ ರಂಜಿಸಿದರು. ನಂತರ ಜೆಡಿಎಸ್ ನಡೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು ಜೆಡಿಎಸ್ಗೆ ಅಧಿಕಾರದ ಚಪಲತೆ ಹೆಚ್ಚು. ಜೆಡಿಎಸ್ ಪಕ್ಷದವರ ಸಹವಾಸವೇ ಬೇಡ, ಕಾಂಗ್ರೆಸ್ ನವರು ವಿರೋಧ ಪಕ್ಷದಲ್ಲೇ ಇರುತ್ತೇವೆ ಎಂದು ತಿಳಿಸಿದರು.
ಈಗ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ, ಯಡಿಯೂರಪ್ಪ ಮೂರು ವರ್ಷ ಸಿಎಂ ಆಗಿರಲಿ, ಅಭಿವೃದ್ಧಿ ಕೆಲಸ ಮಾಡಲಿ ಎಂದು ಲಿಂಗಪ್ಪ ಹಾರೈಸಿದ್ರು. ಇಂದಿನ ಸರ್ಕಾರಿ ಕಾರ್ಯಕ್ರಮಕ್ಕೆ ಕ್ಷೇತ್ರದ ಶಾಸಕಿ ಅನಿತಾ ಕುಮಾರಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಅಶ್ವತ್ಥ್ ನಾರಾಯಣ್ ಗೈರಾಗಿದ್ದರು. ಖಾಲಿ ಚೇರ್ಗಳಿಗೆ ಎಂಎಲ್ಸಿ ಸಿಎಂ ಲಿಂಗಪ್ಪ ಹಾಗೂ ಗಣ್ಯರು ಭಾಷಣ ಮಾಡುವಂತಾಯ್ತು.