ETV Bharat / state

ನೀವು ಅದೃಷ್ಟವಂತರೆಂದು ಕರೆ ಮಾಡಿ ದೋಖಾ ಮಾಡುತ್ತಿದ್ದ ಗ್ಯಾಂಗ್​ : ಓರ್ವ ಅಂದರ್ - ರಾಮನಗರದಲ್ಲಿ ವ್ಯಕ್ತಿ ಬಂಧನ ಸುದ್ದಿ

ಕರೆ ಮಾಡಿ ಹಣ ಕಬಳಿಸಿದ ಖದೀಮನನ್ನ ರಾಮನಗರ ಪೊಲೀಸರು ಬಂಧಿಸಿದ್ದಾರೆ.

ರಾಮನಗರ ಎಸ್ಪಿ ಅನೂಪ್ ಎ ಶೆಟ್ಟಿ ಹೇಳಿಕೆ
author img

By

Published : Oct 28, 2019, 4:35 AM IST

ರಾಮನಗರ ಹೊತ್ತಲ್ಲದ ಹೊತ್ತಲ್ಲಿ ಕಾಲ್ ಮಾಡಿ ನೀವು ಅದೃಷ್ಟವಂತರು, ನೀವು ಸಾವಿರಾರು ರೂಪಾಯಿ ಬೆಲೆಬಾಳುವ ಮೊಬೈಲ್‌ನ್ನ ಉಡುಗೊರೆಯಾಗಿ ಗೆದ್ದಿದ್ದೀರಾ ಎಂದು ಮೋಸ ಮಾಡಿದ್ದವರನ್ನು ಪೊಲೀಸರು ಬಂಧಿಸಿದ್ದಾರೆ.

ಸುಂದರ ಧ್ವನಿಯಲ್ಲಿ ಕರೆಮಾಡುವ ಮಹಿಳೆಯೊಬ್ಬಳು, ಇಂತಿಷ್ಟು ಹಣವನ್ನ ಮುಂಗಡವಾಗಿ ಕಟ್ಟಿ, ನಂತರ ನಿಮ್ಮ ಬಹುಮಾನವನ್ನ ಪಡೆದುಕೊಳ್ಳಿ ಅಂತಾಳೆ. ಇದಕ್ಕೆ ಮಾರುಹೋಗುವ ಜನರು ಆಕೆ ಕೇಳಿದ ಹಣ ನೀಡಿ ಮೋಸ ಹೋಗುತ್ತಿದ್ದರು. ಈ ಹಿನ್ನೆಲೆ ಈ ಖತರ್ನಾಕ್ ಕೆಲಸ ಮಾಡುತ್ತಿದ್ದ ಖದೀಮನನ್ನ ಪೊಲೀಸರು ಬಂಧಿಸಿದ್ದಾರೆ.

ರಾಮನಗರ ಎಸ್ಪಿ ಅನೂಪ್ ಎ ಶೆಟ್ಟಿ ಹೇಳಿಕೆ

ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಐವಾರ ಗ್ರಾಮದವನಾದ ಸತೀಶ ಎಂಬಾತ ಟೆಲಿ ಮಾರ್ಕೆಟಿಂಗ್‌ನಲ್ಲಿ ಕೆಲಸ ಮಾಡುತ್ತಿದ್ದ. ಆದರೆ ಈತನ ಮೂಲ ಉದ್ದೇಶವೇ ಅಮಾಯಕರಿಗೆ ದೋಖಾ ಮಾಡೋದು. ಈತನದ್ದೇ ಒಂದು ತಂಡವನ್ನ ಕಟ್ಟಿಕೊಂಡು ಕಾಲ್‌ಸೆಂಟರ್ ಮೂಲಕ ಅನಾಮಿಕರಿಗೆ ಹುಡುಗಿಯರಿಂದ ದೂರವಾಣಿ ಕರೆ ಮಾಡಿಸೋದು. ನಂತರ ನಿಮಗೆ 11 ಸಾವಿರ ಬೆಲೆಬಾಳುವ ಸ್ಯಾಮ್‌ಸಂಗ್ ಮೊಬೈಲ್‌ನ ಗಿಫ್ಟ್ ಆಗಿ ಕೊಡುತ್ತೇವೆ. ಇದಕ್ಕಾಗಿ ನೀವು ಮುಂಗಡವಾಗಿ ನಮಗೆ 1650 ರೂಪಾಯಿ ಹಣವನ್ನ ಅಕೌಂಟ್‌ಗೆ ಹಾಕಬೇಕೆಂದು ಪ್ರತ್ಯೇಕ ಅಕೌಂಟ್ ನಂ ಕೊಟ್ಟು ಹಣ ಕಟ್ಟಿಸಿಕೊಳ್ಳುತ್ತಾನೆ.

ಒಂದು ವಾರದ ನಂತರ ಹಣಕಟ್ಟಿದವರಿಗೆ 100 ರೂಪಾಯಿ ಬೆಲೆಬಾಳುವ ತರಕಾರಿ ಕಟಿಂಗ್ ಮಷಿನ್ ಕೊಟ್ಟು ದೋಖಾ ಮಾಡುತ್ತಾನೆ.

ಇದೇ ರೀತಿ ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಕುಂತೂರುದೊಡ್ಡಿ ಗ್ರಾಮದ ರಾಧಾಕೃಷ್ಣ ಎಂಬುವವರ ಮನೆಗೆ ಕರೆ ಮಾಡಿ ಹಣಕಟ್ಟಿಸಿಕೊಂಡು ದೋಖಾ ಮಾಡಿರುವ ಬಗ್ಗೆ ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ವಂಚನೆ‌ ಪ್ರಕರಣದಲ್ಲಿ ತನಿಖೆ ನಡೆಸಿದ ಪೋಲೀಸರಿಗೆ ಆರೋಪಿ ಸತೀಶ್​ ಬೆಂಗಳೂರಿನ ಸಹಕಾರನಗರದಲ್ಲಿ ಸೆರೆಸಿಕ್ಕಿದ್ದಾನೆ. ಅಲ್ಲದೆ, ಆತನ ಗೋಡೌನ್​ನ್ನು ಕೂಡ ಪೊಲೀಸರು ಸೀಜ್ ಮಾಡಿದ್ದಾರೆ. ಈತನ ಜೊತೆಗೆ ಇನ್ನು ಕೆಲ ಯುವಕರು, ಯುವತಿಯರು ಸಹ ಭಾಗಿಯಾದ್ದಾರೆ, ಮುಂದಿನ ದಿನಗಳಲ್ಲಿ ಅವರನ್ನು ಪತ್ತೆ ಮಾಡಲಾಗುವುದೆಂದು ರಾಮನಗರ ಎಸ್ಪಿ ಅನೂಪ್ ಎ ಶೆಟ್ಟಿ ತಿಳಿಸಿದ್ದಾರೆ.

ಬಂಧಿತನಿಂದ ಈಗಾಗಲೇ 23 ಮೊಬೈಲ್ ಫೋನ್, ಲ್ಯಾಪ್‌ಟಾಪ್, ಪ್ರಿಂಟರ್ ಹಾಗೂ 130 ತರಕಾರಿ ಕಟಿಂಗ್ ಬಾಕ್ಸ್ ಸೇರಿದಂತೆ ಹಲವು ವಸ್ತುಗಳನ್ನ ವಶಕ್ಕೆ ಪಡೆಯಲಾಗಿದೆ. ಇನ್ನು ರಾಜ್ಯದಲ್ಲಿ ಇಂತಹ ದಂಧೆ ಮಾಡುವವರು ಹೆಚ್ಚಾಗಿದ್ದು ಎಚ್ಚರಿಕೆಯಿಂದರಬೇಕೆಂದು ಸಾರ್ವಜನಿಕರಲ್ಲಿ ಎಸ್ಪಿ ಮನವಿ ಮಾಡಿದ್ದಾರೆ.

Intro:Body:ರಾಮನಗರ : ಹೊತ್ತಲ್ಲದ ಹೊತ್ತಲ್ಲಿ ಕಾಲ್ ಮಾಡಿ ನೀವು ಅದೃಷ್ಟವಂತರು, ನೀವು ಸಾವಿರಾರು ರೂಪಾಯಿ ಬೆಲೆಬಾಳುವ ಮೊಬೈಲ್‌ನ ಉಡುಗೊರೆಯಾಗಿ ಗೆದ್ದಿದ್ದೀರಾ ಎಂದು ಸುಂದರ ಧ್ವನಿಯಲ್ಲಿ ಮಹಿಳೆಯೊಬ್ಬಳು ಹೇಳ್ತಾಳೆ. ನಂತರ ಇಷ್ಟು ಹಣವನ್ನ ಮುಂಗಡವಾಗಿ ಕಟ್ಟಿ, ನಂತರ ನಿಮ್ಮ ಬಹುಮಾನವನ್ನ ಪಡೆದುಕೊಳ್ಳಿ ಅಂತಾರೆ.ಇದೆಲ್ಲಾ ಜನರನ್ನ ಹಳ್ಳಕ್ಕೆ ಕೆಡವೋ ಖತರ್ನಾಕ್ ಪ್ಲಾನ್ . ಇಂತಹ ಖರ್ತನಾಕ್‌ವೊಬ್ಬನನ್ನ ಪೊಲೀಸರು ಬಂದಿಸಿದ್ದಾರೆ ಊರವರಿಗೆಲ್ಲಾ ಪಂಗನಾಮ ಹಾಕ್ತಿದ್ದವ ಇದೀಗ ಪೋಲೀಸರ ಅತಿಥಿಯಾಗಿದ್ದಾನೆ.
ಮೂಲತ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಐವಾರ ಗ್ರಾಮದವನಾದ ಸತೀಶ ಎಂಬಾತ ಟೆಲಿ ಮಾರ್ಕೆಟಿಂಗ್‌ನಲ್ಲಿ ಕೆಲಸ ಮಾಡುತ್ತಿದ್ದ. ಆದರೆ ಈತನ ಮೂಲ ಉದ್ದೇಶವೇ ಅಮಾಯಕರಿಗೆ ದೋಖಾ ಮಾಡೋದು. ಈತನದ್ದೇ ಒಂದು ತಂಡವನ್ನ ಕಟ್ಟಿಕೊಂಡು ಕಾಲ್‌ಸೆಂಟರ್ ಮೂಲಕ ಅನಾಮಿಕರಿಗೆ ಹುಡುಗಿಯರಿಂದ ದೂರವಾಣಿ ಕರೆ ಮಾಡಿಸ್ತಾನೆ. ನಂತರ ನೀವು ಪೈ ಇಂಟರ್ ನ್ಯಾಷನಲ್ ಮಳಿಗೆಯಲ್ಲಿ ದುಬಾರಿ ಬೆಲೆಯ ಸ್ಯಾಮ್‌ಸಂಗ್ ಮೊಬೈಲ್ ಖರೀದಿ ಮಾಡಿರುವುದರಿಂದ ನಿಮಗೆ ೧೧ ಸಾವಿರ ಬೆಲೆಬಾಳುವ ಸ್ಯಾಮ್‌ಸಂಗ್ ಮೊಬೈಲ್‌ನ ಗಿಫ್ಟ್ ಆಗಿ ಕೊಡುತ್ತೇವೆ. ಇದಕ್ಕಾಗಿ ನೀವು ಮುಂಗಡವಾಗಿ ನಮಗೆ ೧೬೮೦ ರೂಪಾಯಿ ಹಣವನ್ನ ಅಕೌಂಟ್‌ಗೆ ಹಾಕಬೇಕೆಂದು ಪ್ರತ್ಯೇಕ ಅಕೌಂಟ್ ನಂ ಕೊಟ್ಟು ಹಣ ಕಟ್ಟಿಸಿಕೊಳ್ಳುತ್ತಾನೆ. ನಂತರ ಒಂದು ವಾರದ ನಂತರ ಹಣಕಟ್ಟಿದವರಿಗೆ ೧೦೦ ರೂಪಾಯಿ ಬೆಲೆಬಾಳುವ ತರಕಾರಿ ಕಟಿಂಗ್ ಮಷಿನ್ ಕೊಟ್ಟು ದೋಖಾ ಮಾಡುತ್ತಾನೆ.

ಇದೇ ರೀತಿ ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಕುಂತೂರುದೊಡ್ಡಿ ಗ್ರಾಮದ ರಾಧಕೃಷ್ಣ ಎಂಬುವವರ ಮನೆಗೆ ಕರೆ ಮಾಡಿ ಹಣಕಟ್ಟಿಸಿಕೊಂಡು ದೋಖಾ ಮಾಡಿರುವ ಬಗ್ಗೆ ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಡಿಮೆ ಮೊತ್ತವಿರುವ ಹಿನ್ನೆಲೆ ಯಾರು ಕೂಡ ಪೊಲೀಸ್ ಠಾಣೆಗೆ ಹೋಗಲ್ಲವೆಂಬುದೇ ಈ ಗ್ಯಾಂಗ್ ಮೂಲ ಉದ್ದೇಶವೆಂದು ಎಸ್‌ಪಿ ಅನೂಪ್ ಎ ಶೆಟ್ಟಿ ತಿಳಿಸಿದ್ದಾರೆ.
ವಂಚನೆ‌ ಪ್ರಕರಣದಲ್ಲಿ ತನಿಖೆ ನಡೆಸಿದ ಪೋಲೀಸರಿಗೆ ಆರೋಪಿ ಸತೀಶ ಬೆಂಗಳೂರಿನ ಸಹಕಾರನಗರದಲ್ಲಿ ಸೆರೆಸಿಕ್ಕಿದ್ದಾನೆ. ಇನ್ನು ಅಲ್ಲೇ ಇದ್ದ ಗೋಡೋನ್ ಕೂಡ ಪೊಲೀಸರು ಸೀಜ್ ಮಾಡಿದ್ದಾರೆ. ಇನ್ನು ಈತನ ಜೊತೆಗೆ ಇನ್ನು ಕೆಲ ಯುವಕರು, ಯುವತಿಯರು ಸಹ ಭಾಗಿಯಾದ್ದಾರೆ, ಮುಂದಿನ ದಿನಗಳಲ್ಲಿ ಅವರನ್ನು ಪತ್ತೆ ಮಾಡಲಾಗುವುದೆಂದು ರಾಮನಗರ ಎಸ್ಪಿ ಅನೂಪ್ ಎ ಶೆಟ್ಟಿ ತಿಳಿಸಿದ್ದಾರೆ.
ಬಂಧಿತನಿಂದ ಈಗಾಗಲೇ ೨೭ ಮೊಬೈಲ್ ಫೋನ್, ಲ್ಯಾಪ್‌ಟಾಪ್, ಪ್ರೀಂಟರ್, ಹಾಗೂ ೧೩೦ ತರಕಾರಿ ಕಟಿಂಗ್ ಬಾಕ್ಸ್ ಸೇರಿದಂತೆ ಹಲವು ವಸ್ತುಗಳನ್ನ ವಶಕ್ಕೆ ಪಡೆಯಲಾಗಿದೆ. ಇನ್ನು ರಾಜ್ಯದಲ್ಲಿ ಇಂತಹ ದಂಧೆ ಮಾಡುವವರು ಹೆಚ್ಚಾಗಿದ್ದು ಎಚ್ಚರಿಕೆಯಿಂದರಬೇಕೆಂದು ಸಾರ್ವಜನಿಕರಲ್ಲಿ ಎಸ್ಪಿ ಮನವಿ ಮಾಡಿದ್ದಾರೆ.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.