ರಾಮನಗರ: 'ಲವ್ ಯೂ ರಚ್ಚು' ಸಿನಿಮಾ ಶೂಟಿಂಗ್ ವೇಳೆ ವಿದ್ಯುತ್ ಅವಘಡ ಸಂಭವಿಸಿ ಫೈಟರ್ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ರಾಮನಗರ ಹೆಚ್ಚುವರಿ ಅಪರ ಜಿಲ್ಲಾ ನ್ಯಾಯಾಲಯ ಆದೇಶ ಹೊರಡಿಸಿದೆ.
ಪ್ರಕರಣದ ಆರೋಪಿಗಳಾದ ಲವ್ ಯೂ ರಚ್ಚು ಚಿತ್ರದ ನಿರ್ದೇಶಕ ಶಂಕರ, ಸಾಹಸ ನಿರ್ದೇಶಕ ವಿನೋದ್ ಕುಮಾರ್ ಹಾಗೂ ಕ್ರೇನ್ ಅಪರೇಟರ್ ಮಹದೇವ್‌ನನ್ನು ಬಿಡದಿ ಠಾಣೆ ಪಿಎಸ್ಐ ಭಾಸ್ಕರ್ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಇನ್ನು, ನಿರ್ಮಾಪಕ ಗುರು ದೇಶಪಾಂಡೆ, ಚಿತ್ರದ ಉಸ್ತುವಾರಿ ಫರ್ನಾಂಡಿಸ್ ತಲೆಮರೆಸಿಕೊಂಡಿದ್ದಾರೆ.
ಅಪರ ಸಿವಿಲ್ ನ್ಯಾಯಾಧೀಶರಾದ ಅನುಪಮ ಲಕ್ಷ್ಮಿ ಮೂವರು ಆರೋಪಿಗಳಿಗೆ ಆಗಸ್ಟ್ 24 ರವರೆಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದ್ದಾರೆ.
ವೀಕ್ಷಿಸಿ: 'ಮಾಸ್ತಿಗುಡಿ' ದುರಂತ ನೆನಪಿಸಿದ 'ಲವ್ ಯೂ ರಚ್ಚು' ಇನ್ಸಿಡೆಂಟ್!
ನಿನ್ನೆ ಜಿಲ್ಲೆಯ ಬಿಡದಿಯ ಜೋಗಿನದೊಡ್ಡಿ ಬಳಿ ಲವ್ ಯೂ ರಚ್ಚು ಸಿನಿಮಾ ಶೂಟಿಂಗ್ ವೇಳೆ ವಿದ್ಯುತ್ ಅವಘಡ ಸಂಭವಿಸಿ ತಮಿಳುನಾಡು ಮೂಲದ ಫೈಟರ್ ವಿವೇಕ್ (28) ಮೃತಪಟ್ಟಿದ್ದರು.