ETV Bharat / state

ತಂದೆ ತಾಯಿಯ ಶ್ರಮ ಮತ್ತು ತ್ಯಾಗದ ಸಂದೇಶ ಸಾರಲು ಕನ್ಯಾಕುಮಾರಿ ಟು ಲಡಾಕ್​ವರೆಗೆ ಯುವತಿಯ ಸೋಲೋ ರೈಡ್​

ರಾಮನಗರದ ಯುವತಿ ಚಿತ್ರಾರಾವ್‌, ತಂದೆ ತಾಯಿಯ ತ್ಯಾಗ ಶ್ರಮದ ಕುರಿತು ಸಂದೇಶ ಸಾರಲು ಕನ್ಯಾಕುಮಾರಿಯಿಂದ ಲಡಾಕ್​ವರೆಗೆ ಬೈಕ್ ರೈಡ್ ಮಾಡಿ ವಾಪಾಸ್ಸಾಗಿದ್ದಾಳೆ.

ಯುವತಿ ಸೋಲೋ ರೈಡ್​
ಯುವತಿ ಸೋಲೋ ರೈಡ್​
author img

By ETV Bharat Karnataka Team

Published : Jan 3, 2024, 2:05 PM IST

ಯುವತಿ ಸೋಲೋ ರೈಡ್​

ರಾಮನಗರ: ಮಕ್ಕಳಿಂದಲೇ ಬಹಳಷ್ಟು ತಂದೆ ತಾಯಂದಿರು ಮನೆಯಿಂದ ಹೊರದೂಡಲ್ಪಟ್ಟು ವೃದ್ಧಾಶ್ರಮ ಪಾಲಾಗುತ್ತಿರುವುದು ಇತ್ತೀಚಿಗೆ ಸರ್ವೇ ಸಾಮಾನ್ಯವಾಗಿದೆ. ಈ ತಪ್ಪಿನ ಅರಿವನ್ನು ಮೂಡಿಸಲು, ಹಿರಿಯರ ತ್ಯಾಗ ಹಾಗೂ ಅವರನ್ನು ಸಾಕಿದ ಶ್ರಮದ ಸಂದೇಶವನ್ನು ಸಾರಿ ಯುವ ಸಮುದಾಯದಲ್ಲಿ ಜಾಗೃತಿ ಮೂಡಿಸುವ ದೃಷ್ಟಿಯಿಂದ ಯುವತಿಯೊಬ್ಬಳು ಕನ್ಯಾಕುಮಾರಿಯಿಂದ ಲಡಾಕ್​ವರೆಗೆ ಬೈಕ್ ರೈಡ್ ಮಾಡಿ ವಾಪಸ್ಸಾಗಿದ್ದಾರೆ‌.

ರಾಯಲ್ ಎನ್‌ಫೀಲ್ಡ್ ಬೈಕ್‌ನಲ್ಲಿ ಯುವ ಸಮುದಾಯಕ್ಕೆ ಅರಿವು: ಹೌದು, ರಾಮನಗರ ತಾಲೂಕು ಕೃಷ್ಣಾಪುರದೊಡ್ಡಿ ಗ್ರಾಮದ ಚಿತ್ರಾರಾವ್‌ ಎಂಬುವವರೇ ಸೋಲೋ ಬೈಕ್‌ ರೈಡ್ ಮಾಡಿದ್ದು, ಕನ್ಯಾಕುಮಾರಿಯಿಂದ ಕಾಶ್ಮೀರ ಹಾಗೂ ಲಡಾಕ್​ವರೆಗೂ ತೆರಳಿ, ಯುವ ಸಮುದಾಯಕ್ಕೆ ಅರಿವು ಮೂಡಿಸಿದ್ದಾರೆ. ವೃತ್ತಿಯಲ್ಲಿ ಬೆಂಗಳೂರಿನ ವ್ಯಾಲ್ಯೂ ಲೀಫ್ ಕಂಪನಿಯಲ್ಲಿ ಉದ್ಯೋಗಿ ಆಗಿರುವ ಚಿತ್ರಾರಾವ್‌, ತನ್ನ ಕನಸಿನಂತೆ ರಾಯಲ್‌ ಎನ್‌ ಫೀಲ್ಡ್ ಹಿಮಾಲಯನ್​ ಬೈಕ್‌ ಖರೀದಿಸಿದ್ದರು. ಆರಂಭದಲ್ಲಿ ಮೈಸೂರು, ಚಿಕ್ಕಮಗಳೂರು ಸೇರಿದಂತೆ ಹಲವೆಡೆ ಸುತ್ತಾಡಿದ್ದ ಅವರಿಗೆ ಲಾಂಗ್​ ರೈಡ್ ಹೋಗುವ ಬಗ್ಗೆ ಆಲೋಚಿಸಿದ್ದರು. ಈ ವಿಚಾರವನ್ನು ದಾರಿದೀಪ ವೃದ್ಧಾಶ್ರಮ ನಡೆಸುತ್ತಿರುವ ತನ್ನ ತಾಯಿ ಕವಿತಾರಾವ್‌ ಬಳಿ ವ್ಯಕ್ತಪಡಿಸಿದ್ದರು.

ಆಗ ತಾಯಿ ಕವಿತಾರಾವ್‌ ಅವರು ಬೈಕ್​ ರೈಡ್‌ ಜೊತೆಗೆ ಹಿರಿಯ ನಾಗರಿಕರ ಕುರಿತು ಜನರಲ್ಲಿ ಜಾಗೃತಿ ಮೂಡಿಸುವಂತೆಯೂ ಸಲಹೆ ಕೊಟ್ಟರು. ಅದರಂತೆ ಚಿತ್ರಾರಾವ್‌ ತನ್ನ ಪ್ರಯಾಣವನ್ನು ಮೊದಲು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ (3,577 ಕಿ.ಮೀ) ನಿಗದಿ ಪಡಿಸಿಕೊಂಡಿದ್ದರು. ಅನಂತರ ತನ್ನ ಜಾಗೃತಿ ಕಾರ್ಯಕ್ರಮವನ್ನು ವಿಸ್ತರಿಸಿಕೊಂಡು ಲಡಾಕ್​ವರೆಗೂ ಸಂಚರಿಸಿ ಇಡೀ ಭಾರತ ದೇಶವನ್ನು ಸಂದರ್ಶಿಸಿದ್ದಾರೆ.

ತಮಿಳುನಾಡಿನ ಕನ್ಯಾಕುಮಾರಿಯಿಂದ ಆಗಸ್ಟ್‌ 26ರಂದು ಏಕಾಂಗಿಯಾಗಿ ಬೈಕ್​ನಲ್ಲಿ ಸವಾರಿ ಹೊರಟ ಚಿತ್ರಾರಾವ್‌, ಕರ್ನಾಟಕ, ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ಥಾನ, ಹರಿಯಾಣ, ಪಂಜಾಬ್‌ ಮಾರ್ಗವಾಗಿ ಜಮ್ಮು ಮತ್ತು ಕಾಶ್ಮೀರಕ್ಕೆ ಸೆಪ್ಟೆಂಬರ್ 14ರಂದು ತಲುಪಿದರು. ಅಲ್ಲಿಂದ ಕಾರ್ಗಿಲ್‌ ಮತ್ತು ಲಡಾಕ್​ವರೆಗೂ ಯಾತ್ರೆ ಮುಂದುವರೆಸಿ ಜಾಗೃತಿ ಅರಿವು ಮೂಡಿಸಿದ್ದಾರೆ. ಇದೀಗ ಬೆಂಗಳೂರಿಗೆ ವಾಪಸ್ಸಾಗಿದ್ದು, 24 ದಿನ 8 ರಾಜ್ಯಗಳಲ್ಲಿ 4,850 ಕಿ.ಮೀ. ಬೈಕ್​ ಓಡಿಸಿದ ಸಾಧನೆ ಅವರದ್ದಾಗಿದೆ.

ಹೋದ ಕಡೆಯಲ್ಲಿ ಚಿತ್ರಾಗೆ ಸಲಾಂ: ಚಿತ್ರಾರಾವ್​ ಅವರು ಪ್ರವಾಸ ಮಾಡಿದ ಎಲ್ಲಾ ಕಡೆ ಜನರಿಂದ ಸಹಕಾರ ಮತ್ತು ಜಾಗೃತಿಗೆ ಉತ್ತಮ ಸ್ಪಂದನೆ ಸಿಕ್ಕಿದೆ. ತಮಿಳುನಾಡು ಮತ್ತು ಕರ್ನಾಟಕದಲ್ಲಿ ಬೈಕ್‌ ರೈಡ್ ವೇಳೆ ಸ್ನೇಹಿತರು, ಸಂಬಂಧಿಕರ ಮನೆಯಲ್ಲಿ ವಾಸ್ತವ್ಯ ಹೂಡುತ್ತಿದ್ದ ಚಿತ್ರಾ ಬೇರೆ ರಾಜ್ಯಗಳಲ್ಲಿ ಹೋಟೆಲ್​ಗಳಲ್ಲಿ ವಾಸ್ತವ್ಯ ಹೂಡುತ್ತಿದ್ದರು. ದೇಶದ ಉತ್ತರದ ಮೈ ಕೊರೆಯುವ ಚಳಿ, ದಕ್ಷಿಣದಲ್ಲಿ ಬಿಸಿಲು, ಹಿಮಾಲಯದ ಮಂಜು, ಈಶಾನ್ಯ ರಾಜ್ಯಗಳ ಪ್ರಕೃತಿ ಸೌಂದರ್ಯ, ಪೂರ್ವ-ಪಶ್ಚಿಮದ ಕರಾವಳಿಯನ್ನು ನೋಡುವ ಅವಕಾಶದೊಂದಿಗೆ ಜಾಗೃತಿ ಹಮ್ಮಿಕೊಂಡಿದ್ದರು.

ಬೆಳಗ್ಗೆಯಿಂದ ಸಂಜೆ 7 ರವರೆಗೆ ಬೈಕ್​ ಜಾಗೃತಿ: 'ಪ್ರತಿ ದಿನ ಬೆಳಗ್ಗೆ 6 ರಿಂದ ಸಂಜೆ 7ರ ತನಕ ರೈಡಿಂಗ್‌, ರಾತ್ರಿ ವಿಶ್ರಾಂತಿ ಪಡೆದು, ರಸ್ತೆ ಪಕ್ಕದ ಸಣ್ಣ ಹೋಟೆಲ್‌ಗಳಲ್ಲಿ ಊಟ, ತಿಂಡಿ ಮಾಡುತ್ತಿದ್ದೆ. ಮಾರ್ಗ ಮಧ್ಯೆ ಯಾವುದೇ ಕೆಟ್ಟ ಅನುಭವವೂ ಆಗಲಿಲ್ಲ. ಜಮ್ಮು ಕಾಶ್ಮೀರದ ಜನರು ನಾವು ಅಂದುಕೊಂಡಂತಿಲ್ಲ. ಅವರಲ್ಲಿರುವಷ್ಟು ಮಾನವೀಯತೆ ಬೇರೆಲ್ಲೂ ಕಂಡಿಲ್ಲ. ಇದಲ್ಲದೆ ನನ್ನ ಪ್ರವಾಸಕ್ಕೆ ತಾಯಿ ಕವಿತಾರಾವ್ ನಡೆಸುತ್ತಿರುವ ದಾರಿದೀಪ ವೃದ್ಧಾಶ್ರಮವೇ ಜಾಗೃತಿ ಅಭಿಯಾನಕ್ಕೆ ಪ್ರೇರಣೆಯಾಗಿದೆ. ವೃದ್ಧಾಶ್ರಮದಲ್ಲಿನ ವೃದ್ಧರ ಬವಣೆ ನನ್ನ ಮನಕಲುಕಿದೆ. ತಂದೆ ತಾಯಿಯರನ್ನು ಕಡೆಗಣಿಸಬೇಡಿ, ವೃದ್ಧಾಶ್ರಮಗಳ ಸಂಖ್ಯೆ ಕಡಿಮೆಯಾಗಬೇಕು ಎಂಬ ಸಂದೇಶವನ್ನು ಯುವ ಸಮುದಾಯದಲ್ಲಿ ಸಾರುವ ಉದ್ದೇಶ ಹೊತ್ತು ತಾನು ಕೈಲಾದಷ್ಟರ ಮಟ್ಟಿಗೆ ಜಾಗೃತಿ ಮೂಡಿಸಿದ್ದೇನೆ ಎಂದು ಚಿತ್ರಾರಾವ್ ತಿಳಿಸಿದ್ಧಾರೆ.

ಸರ್ಕಾರಿ ಶಾಲೆ ದತ್ತು ಅಭಿವೃದ್ಧಿ: ರಾಮನಗರ ತಾಲೂಕಿನ ಕೃಷ್ಣಾಪುರದೊಡ್ಡಿ ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಚಿತ್ರಾರಾವ್ ದತ್ತು ತೆಗೆದುಕೊಂಡು ಅಭಿವೃದ್ಧಿ ಪಡಿಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆಗಳ ಪರಿಸ್ಥಿತಿ ತೀರಾ ಹದಗೆಟ್ಟಿದೆ ಈ ನಡುವೆ ಸರ್ಕಾರಿ ಶಾಲೆಯನ್ನು ‌ದತ್ತು ತೆಗೆದುಕೊಂಡು ಅಭಿವೃದ್ಧಿ ಪಡಿಸಿದ್ದಾರೆ. ಶಾಲೆಯ ಮುಂಭಾಗ ಬೃಹತ್‌ ವೇದಿಕೆ, ಶಾಲೆಗೆ ಹೊಸ ಬಣ್ಣ ಸೇರಿದಂತೆ ಶಾಲೆಯ ಸುತ್ತಲೂ ಗಿಡ ನೆಡುವ ಮೂಲಕ‌ ಮಾದರಿ ಶಾಲೆಯನ್ನಾಗಿ ಮಾಡಿದ ಕೀರ್ತಿ ಚಿತ್ರಾರಾವ್​ರವರಿಗೆ ಸಲ್ಲಲಿದೆ.

ಇದನ್ನೂ ಓದಿ: ಅಂಜನಾದ್ರಿಗೆ ಬಂದಿದ್ದ ಉತ್ತರ ಪ್ರದೇಶ ಯಾತ್ರಾರ್ಥಿಗಳ ಮೇಲೆ ಹಲ್ಲೆ ಆರೋಪ: ಠಾಣೆಗೆ ಮುತ್ತಿಗೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.