ರಾಮನಗರ : ಅಧಿಕಾರವಿದ್ದಾಗ ಯಾವುದೇ ಅಭಿವೃದ್ದಿ ಕೆಲಸ ಮಾಡದೆ ಇದೀಗ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾನೆ. ಅವನಿಗೆ ಮತಿಭ್ರಮಣೆಯಾಗಿದೆ ಎಂದು ಮಾಗಡಿ ಶಾಸಕ ಎ. ಮಂಜುನಾಥ್ ಏಕವಚನದಲ್ಲೇ ಮಾಜಿ ಶಾಸಕ ಬಾಲಕೃಷ್ಣ ಅವರ ವಿರುದ್ಧ ಹರಿಹಾಯ್ದರು.
ತಾಲೂಕಿನ ಕಂಚುಗಾರನಹಳ್ಳಿಯಲ್ಲಿ ಮಾತನಾಡಿದ ಅವರು, ಅವನು.. ಇವನು.. ಅಂತಾ ಏಕವಚನದಲ್ಲಿ ವಾಗ್ದಾಳಿ ನಡೆಸುತ್ತಲೇ, ಮಾಗಡಿ ಅಭಿವೃದ್ಧಿ ವಿಚಾರದಲ್ಲಿ ನಿನ್ನ ಕೊಡುಗೆ ಏನು ಎಂಬುದರ ಬಗ್ಗೆ ಪ್ರಶ್ನೆ ಮಾಡಿದ ಶಾಸಕ ಮಂಜುನಾಥ್, ಬಹಿರಂಗ ಚರ್ಚೆಗೆ ಬರುವಂತೆ ಬಾಲಕೃಷ್ಣ ಅವರಿಗೆ ಆಹ್ವಾನ ನೀಡಿದರು.
ಜೆಡಿಎಸ್ ಶಾಸಕ ಮಂಜುನಾಥ್ ಕಾಂಗ್ರೆಸ್ ಸೇರುತ್ತಾರೆ ಡಿ.ಕೆ.ಶಿವಕುಮಾರ್ ಜತೆಗೆ ಮಾತುಕತೆ ಮಾಡಿದ್ದಾರೆ, ಎಂಬ ಬಾಲಕೃಷ್ಣ ಹೇಳಿಕೆಗೆ ಕೆಂಡಾಮಂಡಲವಾಗಿ ಪ್ರತಿಕ್ರಿಯಿಸಿದರು. ಬಾಲಕೃಷ್ಣನಿಗೆ ಮತಿ ಭ್ರಮಣೆಯಾಗಿದೆ, ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ನಾನು ಯಾವ ನಾಯಕರನ್ನ ಭೇಟಿ ಮಾಡಿಲ್ಲ. ಅದಕ್ಕೆ ಸಾಕ್ಷಿ ಇದ್ದರೆ ಬಿಡುಗಡೆ ಮಾಡಲಿ. ನಾನು ಡಿ ಕೆ ಶಿವಕುಮಾರ್ ಅವರ ಬಳಿ ಪಕ್ಷಕ್ಕೆ ಸೇರುವ ಸಂಬಂಧ ಭೇಟಿ ಮಾಡಿ ಮಾತುಕತೆ ಮಾಡಿರುವ ಸಾಕ್ಷಿ ಇದ್ರೆ, ಬಿಡುಗಡೆ ಮಾಡಿಲಿ ಎಂದು ಸವಾಲು ಹಾಕಿದರು.
ಸಾಕ್ಷಿ ಬಿಡುಗಡೆ ಮಾಡಿದ್ರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದರು. ಮಾಗಡಿ ಕ್ಷೇತ್ರದಿಂದ ಶಾಸಕರಾಗಿ ಹತ್ತು ವರ್ಷ ಇದ್ದೀರಿ, ಎಲ್ಲಿ ನೀವು ಒಬ್ಬ ರೈತರಿಗೆ ಉಳುಮೆ ಚೀಟಿ ಕೊಡಿಸಿದ್ದೀರಾ, ಹಕ್ಕುಪತ್ರ ಕೊಡೊಸಿದ್ದೀರಾ, ದಾಖಲೆ ಇದ್ರೆ ಹೇಳಿ ಎಂದು ಸವಾಲು ಹಾಕಿದರು.