ETV Bharat / state

2022ರ ರಾಮನಗರ ಜಿಲ್ಲೆಯಲ್ಲಿ ನಡೆದ ಘಟನಾವಳಿಗಳ ಸಂಕ್ಷಿಪ್ತ ಹಿನ್ನೋಟ..

author img

By

Published : Dec 31, 2022, 8:30 PM IST

2022ರಲ್ಲಿ ರಾಮನಗರ ಜಿಲ್ಲೆಯಲ್ಲಿ ನಡೆದ ಪ್ರಮುಖ ಘಟನೆಗಳ ಮೆಲಕು-ಹಲವು ಯಾತ್ರೆ ಮತ್ತು ಸಮಾವೇಶಗಳು ಇಲ್ಲಿಂದಲೇ ಆರಂಭ.

a-brief-overview-of-events-in-ramanagara-district-in-2022
2022ರ ರಾಮನಗರ ಜಿಲ್ಲೆಯಲ್ಲಿ ನಡೆದ ಘಟನಾವಳಿಗಳ ಸಂಕ್ಷಿಪ್ತ ಹಿನ್ನೋಟ..

ರಾಮನಗರ: ರಾಜ್ಯ ಮಟ್ಟದಲ್ಲಿ ರಾಮನಗರ ಜಿಲ್ಲೆ 2022ರಲ್ಲಿ ಹಲವು ವಿಚಾರಗಳಿಗೆ ಸುದ್ದಿಯಾಗಿದೆ. ಹಾಗಾಗಿ ಒಂದು ಬಾರಿ ಅವೆಲ್ಲವುಗಳನ್ನು ರಿವೈಂಡ್​ ಮಾಡಿಕೊಂಡು ಬರೋಣ.

ಮೇಕೆದಾಟು–ಪಂಚರತ್ನ ಯಾತ್ರೆ ಅಬ್ಬರ: ಈ ವರ್ಷ ಕಾಂಗ್ರೆಸ್‌ ಪಕ್ಷದ ವತಿಯಿಂದ ಎರಡು ಹಂತದ ಪಾದಯಾತ್ರೆಯು ರಾಮನಗರ ಮಾತ್ರವಲ್ಲ, ರಾಜ್ಯದ ಗಮನವನ್ನೇ ಸೆಳೆಯಿತು. ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೆ ಒತ್ತಾಯಿಸಿ ಜನವರಿ 9 ರಂದು ಕನಕಪುರ ತಾಲ್ಲೂಕಿನ ಸಂಗಮದಲ್ಲಿ ಎಂಬಲ್ಲಿ ಆರಂಭಗೊಂಡ ಪಾದಯಾತ್ರೆ ಜನವರಿ 13 ರಂದು ರಾಮನಗರದವರೆಗೂ ತಲುಪಿತು.

ಕೋವಿಡ್ ಕಾರಣಕ್ಕೆ ಸರ್ಕಾರ ಮತ್ತು ಹೈಕೋರ್ಟ್‌ ಎರಡೂ ನಿರ್ಬಂಧ ಹೇರಿದ್ದರಿಂದ ಕೋರ್ಟ್​ ಆದೇಶಕ್ಕೆ ತಲೆ ಬಾಗಿದ ಕಾಂಗ್ರೆಸ್‌ ಪಕ್ಷವು ಪಾದಯಾತ್ರೆಯನ್ನು ಅರ್ಧಕ್ಕೆ ಮೊಟಕುಗೊಳಿಸಬೇಕಾಯಿತು. ಈ ಸಂದರ್ಭದಲ್ಲಿ ಕಾಂಗ್ರೆಸ್ ಕೆಲವು ನಾಯಕರ ಮೇಲೆ ಕೋವಿಡ್​ ನಿಯಮ ಉಲ್ಲಂಘನೆ ಪ್ರಕರಣಗಳೂ ದಾಖಲಾಗಿದ್ದು, ಸರ್ಕಾರದ ಜೊತೆಗಿನ ಸಂಘರ್ಷಕ್ಕೆ ದಾರಿ ಮಾಡಿಕೊಟ್ಟಿತು.

ಫೆಬ್ರವರಿ 27 ರಂದು ಎರಡನೇ ಹಂತದ ಪಾದಯಾತ್ರೆ ರಾಮನಗರದಿಂದ ಆರಂಭಗೊಂಡು ರಾಜಧಾನಿ ಬೆಂಗಳೂರಿನವರಗೂ ತಲುಪಿತು. ಹಾಗೆಯೇ ತವರು ನೆಲದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಶಕ್ತಿ ಪ್ರದರ್ಶನವೂ ನಡೆಯಿತು.

ಕಾಂಗ್ರೆಸ್ ಯಾತ್ರೆಗೆ ಪ್ರತಿಯಾಗಿ ಮಾರ್ಚ್‌ನಲ್ಲಿ ಜೆಡಿಎಸ್ ಪಕ್ಷವು ಜನತಾ ಜಲಧಾರೆ ಯಾತ್ರೆಯನ್ನು ಹಮ್ಮಿಕೊಂಡಿತು. ಅದಕ್ಕೆ ಪೂರ್ವಭಾವಿಯಾಗಿ ರಾಮನಗರದಲ್ಲಿ ಏಪ್ರಿಲ್ 12 ರಂದು ಬೃಹತ್‌ ಸಮಾವೇಶ ಜರುಗಿತು. 16 ರಂದು ರಾಜ್ಯಾದ್ಯಂತ ಏಕಕಾಲಕ್ಕೆ ಜಲಧಾರೆ ಕಳಸ ಹೊತ್ತು ಸಂಚರಿಸಿದ್ದು, ಜಿಲ್ಲೆಯ ವಿವಿಧ ಕಡೆಗಳಿಂದ ಪವಿತ್ರ ಜಲ ಸಂಗ್ರಹಿಸಿ ಒಯ್ಯಲಾಯಿತು.

ರಾಮನಗರ ಜಿಲ್ಲೆಯ 2021-22ರಲ್ಲಿ ನಡೆದ ಪ್ರಮುಖ ಘಟನಾವಳಿಗಳು

  • ಜನವರಿ 3: ಜಿಲ್ಲಾ ಕಚೇರಿಗಳ ಸಂಕೀರ್ಣದ ಆವರಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್‌, ಕೆಂಪೇಗೌಡರ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎದುರೇ ಸಚಿವ ಸಿ.ಎನ್. ಅಶ್ವತ್ಥನಾರಾಯಣ ಮತ್ತು ಸಂಸದ ಡಿ.ಕೆ. ಸುರೇಶ್‌ ಜಟಾಪಟಿ ನಡೆಯಿತು.
  • ಜನವರಿ 9: ಕನಕಪುರ ತಾಲ್ಲೂಕಿನ ಸಂಗಮದಿಂದ ಮೇಕೆದಾಟು ಪಾದಯಾತ್ರೆ ಆರಂಭ, ಪಾದಯಾತ್ರೆಯಲ್ಲಿ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವು ಕಾಂಗ್ರೆಸ್‌ ಹಿರಿಯ ನಾಯಕರು ಭಾಗಿಯಾಗಿದ್ದರು.
  • ಜನವರಿ 13: ಜಿಲ್ಲೆಯಲ್ಲಿ ಕೋವಿಡ್ ಸೋಂಕು ಹೆಚ್ಚಳ ಹಿನ್ನೆಲೆ; ರಾಮನಗರದಲ್ಲೇ ಮೇಕೆದಾಟು ಪಾದಯಾತ್ರೆ ಮೊಟಕು.
  • ಫೆಬ್ರವರಿ 27: ಮೇಕೆದಾಟು ಎರಡನೇ ಹಂತದ ಪಾದಯಾತ್ರೆ ಆರಂಭ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್‌ಸಿಂಗ್‌ ಸುರ್ಜೇವಾಲ ಹಾಗೂ ರಾಜ್ಯದ ಹಿರಿಯ ಕಾಂಗ್ರೆಸ್ ನಾಯಕರು ಪಾದಯಾತ್ರೆಯಲ್ಲಿ ಭಾಗಿ.
  • ಮಾರ್ಚ್‌ 4: ಸರ್ಕಾರದ ರಾಜ್ಯ ಬಜೆಟ್‌ನಲ್ಲಿ ಮೇಕೆದಾಟು ಯೋಜನೆಗೆ ₹1 ಸಾವಿರ ಕೋಟಿ ಅನುದಾನ, ಆರೋಗ್ಯ ವಿಶ್ವವಿದ್ಯಾನಿಲಯಕ್ಕೆ ₹600 ಕೋಟಿ ಘೋಷಣೆ.
  • ಏಪ್ರಿಲ್‌ 12: ಜೆಡಿಎಸ್​ ಪಕ್ಷದ ವತಿಯಿಂದ ರಾಮನಗರದಲ್ಲಿ ಜನತಾ ಜಲಧಾರೆ ಅಂಗವಾಗಿ ಬೃಹತ್‌ ಸಮಾವೇಶ; ಎಚ್‌.ಡಿ. ದೇವೇಗೌಡ, ಕುಮಾರಸ್ವಾಮಿ ಭಾಗಿ.
  • ಏಪ್ರಿಲ್‌ 16: ಜಿಲ್ಲೆಯ ವಿವಿಧೆಡೆ ಜನತಾ ಜಲಧಾರೆ ಸಮಾವೇಶಕ್ಕೆ ಚಾಲನೆ.
  • ಆಗಸ್ಟ್‌ 1: ರಾಮನಗರ ಜಿಲ್ಲೆಯಾದ್ಯಂತ ಭಾರಿ ಮಳೆ: ಜನಜೀವನ ಅಸ್ತವ್ಯಸ್ತ.
  • ಆಗಸ್ಟ್​ 29: ರಾಮನಗರ ಜಿಲ್ಲೆಯಲ್ಲಿ ಕುಂಭದ್ರೋಣ ಮಳೆ ಆರಂಭ: ಭಾರಿ ಮಳೆಯಿಂದ ಅಪಾರ ಪ್ರಮಾಣದ ಬೆಳೆ ಹಾನಿ, ನೀರಿನ ರಭಸಕ್ಕೆ ಕೊಚ್ಚಿ ಹೋದ ಹೆದ್ದಾರಿ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಅತಿವೃಷ್ಟಿ ಹಾನಿ ವೀಕ್ಷಣೆ.
  • ಅಕ್ಟೋಬರ್​ 24: ಕಂಚುಗಲ್‌ ಬಂಡೆಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ.
  • ಡಿಸೆಂಬರ್​ 15: ಮಾಗಡಿಯಲ್ಲಿ ಜೆಡಿಎಸ್ ಪಂಚರತ್ನ ಯಾತ್ರೆ ಆರಂಭ.
  • ಡಿಸೆಂಬರ್​. 16: ರಾಮನಗರದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ.

ಇದನ್ನೂ ಓದಿ: ಬೆಂಗಳೂರು ಮೈಸೂರು ದಶಪಥ ಹೆದ್ದಾರಿಯಲ್ಲಿ ಹೆಚ್ಚುತ್ತಿರುವ ಅಪಘಾತಗಳು...

ETV Bharat Logo

Copyright © 2024 Ushodaya Enterprises Pvt. Ltd., All Rights Reserved.