ರಾಮನಗರ: ಜಿಲ್ಲೆಯಲ್ಲಿ ಚನ್ನಪಟ್ಟಣ 14, ಕನಕಪುರ 17 ಮಾಗಡಿ 11 ಮತ್ತು ರಾಮನಗರ 26 ಪ್ರಕರಣಗಳು ಸೇರಿ ಇಂದು ಒಟ್ಟು 68 ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದೆ. ಇವರನ್ನು ರಾಮನಗರ ಜಿಲ್ಲೆಯ ವ್ಯಾಪ್ತಿಗೆ ಒಳಪಡುವ ವಿವಿಧ ಕೋವಿಡ್-19 ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಇದುವರೆಗೆ 5,796 ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಚನ್ನಪಟ್ಟಣ 1,394, ಕನಕಪುರ 1,215, ಮಾಗಡಿ 903 ಮತ್ತು ರಾಮನಗರ 2,284 ಪ್ರಕರಣಗಳು ಸೇರಿವೆ. ಜಿಲ್ಲೆಯಾದ್ಯಂತ ಇದುವರೆಗೆ ಚನ್ನಪಟ್ಟಣ ತಾಲ್ಲೂಕಿನಲ್ಲಿ 12, ಕನಕಪುರ ತಾಲ್ಲೂಕಿನಲ್ಲಿ 12, ಮಾಗಡಿ ತಾಲ್ಲೂಕಿನಲ್ಲಿ 16 ಜನ ಹಾಗೂ ರಾಮನಗರ ತಾಲ್ಲೂಕಿನಲ್ಲಿ 15 ಜನ ಸಾವನ್ನಪ್ಪಿದ್ದಾರೆ. ಒಟ್ಟಾರೆಯಾಗಿ ಜಿಲ್ಲೆಯಲ್ಲಿ 55 ಮಂದಿ ನಿಧನರಾಗಿದ್ದಾರೆ.
ಇಂದು ಚನ್ನಪಟ್ಟಣ ತಾಲ್ಲೂಕಿನಲ್ಲಿ 28, ಕನಕಪುರ ತಾಲ್ಲೂಕಿನಲ್ಲಿ 23, ಮಾಗಡಿ ತಾಲ್ಲೂಕಿನಲ್ಲಿ 19 ಹಾಗೂ ರಾಮನಗರ ತಾಲ್ಲೂಕಿನಲ್ಲಿ 32 ಜನ ಸೇರಿ ಒಟ್ಟಾರೆ 102 ಜನರು ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು 4,968 ಜನರು ಗುಣಮುಖರಾಗಿದ್ದಾರೆ. ಈ ಪೈಕಿ ಚನ್ನಪಟ್ಟಣ 1,224 ಕನಕಪುರ 1,033, ಮಾಗಡಿ 733 ಮತ್ತು ರಾಮನಗರ 1,978 ಜನರು ಸೇರಿದ್ದಾರೆ.
ಜಿಲ್ಲೆಯಲ್ಲಿ ದಾಖಲಾಗಿರುವ 5,796 ಪ್ರಕರಣಗಳ ಪೈಕಿ 4,968 ಜನರು ಗುಣಮುಖರಾಗಿದ್ದಾರೆ, ಇನ್ನೂ 773 ಜನರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಒಟ್ಟು 773 ಸಕ್ರಿಯ ಪ್ರಕರಣಗಳ ಪೈಕಿ ಚನ್ನಪಟ್ಟಣ 158 ಕನಕಪುರ 170 ಮಾಗಡಿ 154 ಮತ್ತು ರಾಮನಗರ 291 ಪ್ರಕರಣಗಳು ಸೇರಿವೆ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದ್ದಾರೆ.