ರಾಮನಗರ: ಜಿಲ್ಲೆಯಲ್ಲಿ ಚನ್ನಪಟ್ಟಣ 21, ಕನಕಪುರ 17, ಮಾಗಡಿ 11 ಮತ್ತು ರಾಮನಗರ 18 ಪ್ರಕರಣಗಳು ಸೇರಿ ಇಂದು ಒಟ್ಟು 67 ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದೆ. ಇವರನ್ನು ರಾಮನಗರ ಜಿಲ್ಲೆಯ ವ್ಯಾಪ್ತಿಗೆ ಒಳಪಡುವ ವಿವಿಧ ಕೋವಿಡ್-19 ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ ತಿಳಿಸಿದ್ದಾರೆ.
ಈವರೆಗೆ ಜಿಲ್ಲೆಯಲ್ಲಿ 5,543 ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಚನ್ನಪಟ್ಟಣ 1,337, ಕನಕಪುರ 1,150, ಮಾಗಡಿ 865 ಮತ್ತು ರಾಮನಗರ 2,191 ಪ್ರಕರಣಗಳು ಸೇರಿವೆ. ಮಾಗಡಿ ತಾಲ್ಲೂಕಿನಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೆ ಚನ್ನಪಟ್ಟಣ ತಾಲ್ಲೂಕಿನಲ್ಲಿ 12, ಕನಕಪುರ ತಾಲ್ಲೂಕಿನಲ್ಲಿ 12, ಮಾಗಡಿ ತಾಲ್ಲೂಕಿನಲ್ಲಿ 16 ಜನ ಹಾಗೂ ರಾಮನಗರ ತಾಲ್ಲೂಕಿನಲ್ಲಿ 15 ಜನ ಸಾವನ್ನಪ್ಪಿದ್ದಾರೆ. ಒಟ್ಟಾರೆಯಾಗಿ ಜಿಲ್ಲೆಯಲ್ಲಿ 55 ಮಂದಿ ನಿಧನರಾಗಿದ್ದಾರೆ.
ಇಂದು ಚನ್ನಪಟ್ಟಣ ತಾಲ್ಲೂಕಿನಲ್ಲಿ 32, ಕನಕಪುರ ತಾಲ್ಲೂಕಿನಲ್ಲಿ 17, ಮಾಗಡಿ ತಾಲ್ಲೂಕಿನಲ್ಲಿ 21 ಹಾಗೂ ರಾಮನಗರ ತಾಲ್ಲೂಕಿನಲ್ಲಿ 19 ಜನ ಸೇರಿ ಒಟ್ಟಾರೆ 89 ಜನರು ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು 4,656 ಜನರು ಗುಣಮುಖರಾಗಿದ್ದಾರೆ. ಈ ಪೈಕಿ ಚನ್ನಪಟ್ಟಣ 1,155, ಕನಕಪುರ 957, ಮಾಗಡಿ 677 ಮತ್ತು ರಾಮನಗರ 1,867 ಜನರು ಸೇರಿದ್ದಾರೆ.
ಜಿಲ್ಲೆಯಲ್ಲಿ ದಾಖಲಾಗಿರುವ 5,543 ಪ್ರಕರಣಗಳ ಪೈಕಿ 4,656 ಜನರು ಗುಣಮುಖರಾಗಿದ್ದಾರೆ, ಇನ್ನೂ 832 ಜನರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಒಟ್ಟು 832 ಸಕ್ರಿಯ ಪ್ರಕರಣಗಳ ಪೈಕಿ ಚನ್ನಪಟ್ಟಣ 170, ಕನಕಪುರ 181, ಮಾಗಡಿ 172 ಮತ್ತು ರಾಮನಗರ 309 ಪ್ರಕರಣಗಳು ಸೇರಿವೆ ಎಂದು ತಿಳಿಸಿದ್ದಾರೆ.