ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲೂಕಿನ ಗೌಡೂರು ಕ್ರಾಸ್ನಲ್ಲಿ ಆಗಸ್ಟ್ 18 ರಂದು ನಡೆದ ಯರಜಂತಿ ಹನುಮಂತ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಡಿವೈಎಸ್ ಪಿ ಎಸ್.ಎಸ್.ಹುಲ್ಲೂರು ಮಾರ್ಗದರ್ಶನದಲ್ಲಿ ಸಿಪಿಐ ಯಶವಂತ ಬಿಸನಳ್ಳಿ, ಹಟ್ಟಿ ಪಿಎಸ್ಐ ಮುದ್ದುರಂಗಸ್ವಾಮಿ ನೇತೃತ್ವದ ತಂಡ ಕಾರ್ಯಚರಣೆ ನಡೆಸಿ ದುರುಗಪ್ಪ (37), ಮೌನೇಶ (25), ತಿಮ್ಮಣ್ಣ (36), ಶಿವರಾಜ (35), ಬಸಯ್ಯ (62) ಇವರನ್ನು ಬಂಧಿಸಿ, ಉಳಿದವರ ಬಂಧನಕ್ಕೆ ಬಲೆ ಬೀಸಲಾಗಿದೆ.
ಹಳೆ ವೈಷಮ್ಯದ ಹಿನ್ನೆಲೆ ದುರುಗಪ್ಪ ನೇತೃತ್ವದ ಹನ್ನೊಂದು ಜನರ ತಂಡ ಕೊಲೆ ಮಾಡಲು ಪೂರ್ವನಿಯೋಜಿತ ಸಂಚು ರೂಪಿಸಿದ್ದರು ಎಂಬುದು ವಿಚಾರಣೆಯಲ್ಲಿ ತಿಳಿದು ಬಂದಿದೆ. ಈ ಕುರಿತು ಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.