ರಾಯಚೂರು: ಹೊಟ್ಟೆನೋವು ತಾಳಲಾರದೆ ಗೃಹಿಣಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಿಂಧನೂರು ತಾಲೂಕಿನ ತುರ್ವಿಹಾಳ ಗ್ರಾಮದಲ್ಲಿ ನಡೆದಿದೆ. 21 ವರ್ಷದ ಮಲ್ಲಮ್ಮ(ಅಯ್ಯಮ್ಮ) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಎರಡು ವರ್ಷಗಳ ಹಿಂದೆ ತುರ್ವಿಹಾಳ ಗ್ರಾಮದ ವ್ಯಾಪ್ತಿಯಲ್ಲಿ ಬರುವ ಮಾರುತಿನಗರ(ಎಸ್ ಕ್ಯಾಂಪ್) ನಿವಾಸಿ ಮಲ್ಲಪ್ಪ ಎಂಬ ವ್ಯಕ್ತಿಯನ್ನು ಮದುವೆಯಾಗಿದ್ದರು.
ಎಂಟು ತಿಂಗಳ ಹಿಂದೆ 8 ತಿಂಗಳ ಹೆಣ್ಣು ಮಗುವಿಗೆ ಮಲ್ಲಮ್ಮ ಜನ್ಮ ನೀಡಿದ್ದಳು. ಇದಾದ ಬಳಿಕ ಹೊಟ್ಟೆನೋವು ಜಾಸ್ತಿಯಾಗಿದ್ದು, ಮಾನಸಿಕ ಖಿನ್ನತೆಗೆ ಒಳಗಾಗಿದ್ದಳು. ನಿನ್ನೆ ಮತ್ತೆ ಹೊಟ್ಟೆನೋವು ಕಾಣಿಸಿಕೊಂಡಿದ್ದು, ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗುತ್ತಿದೆ. ಈ ಕುರಿತು ತುರ್ವಿಹಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.