ರಾಯಚೂರು: ರಸ್ತೆ ಬದಿಯ ಕಲ್ಲಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಓರ್ವ ತೀವ್ರ ಗಾಯಗೊಂಡಿರುವ ಘಟನೆ ರಾಯಚೂರು ಜಿಲ್ಲೆಯ ನಡೆದಿದೆ.
ಜಿಲ್ಲೆಯ ಲಿಂಗಸೂಗೂರು ಆನೆಹೊಸೂರು ಗ್ರಾಮದ ಬಳಿ ಈ ದುರ್ಘಟನೆ ಸಂಭವಿಸಿದೆ. ನೀರಲಕೇರಿ ಗ್ರಾಮದ ಬಸಲಿಂಗಪ್ಪ ಹನುಮಂತ(35), ಯಲ್ಲಪ್ಪ ಹನುಮಪ್ಪ(34) ಮೃತರು. ಚೆನ್ನಪ್ಪ ಈರಪ್ಪ ಗಾಣಿಗೇರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಲಿಂಗಸೂಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:4 ತಿಂಗಳ ಹಿಂದೆ ಪ್ರೇಮ ವಿವಾಹ: ಬೆಂಗಳೂರಿನಲ್ಲಿ ಯುವತಿ ಆತ್ಮಹತ್ಯೆ