ETV Bharat / state

ಮಸ್ಕಿ ಕ್ಷೇತ್ರಕ್ಕೆ ಉಪಚುನಾವಣೆ ಸಾಧ್ಯತೆ: ಪ್ರಬಲ ಅಭ್ಯರ್ಥಿಗಾಗಿ 'ಕೈ' ಹುಡುಕಾಟ

author img

By

Published : Sep 6, 2019, 9:41 AM IST

ಜೆಡಿಎಸ್-ಕಾಂಗ್ರೆಸ್ ಸಮಿಶ್ರ ಸರ್ಕಾರದ ವಿರುದ್ಧ ತಿರುಗಿ ಬಿದ್ದ ಕಾಂಗ್ರೆಸ್ ಶಾಸಕರನ್ನ ಪಕ್ಷಾಂತರ ನಿಷೇಧ ಕಾಯ್ದೆಯಡಿ ಅನರ್ಹಗೊಳಿಸಲಾಗಿದೆ. ಪಕ್ಷದ ನಡೆ ಪ್ರಶ್ನಿಸಿ ಶಾಸಕರು ನ್ಯಾಯಾಲಯದ ಮೊರೆ ಹೋಗಿದ್ದು, ಪ್ರಕರಣ ಇತ್ಯರ್ಥದ ಬಳಿಕ ರಾಜ್ಯದಲ್ಲಿ ಮತ್ತೆ ಉಪಚುನಾವಣೆ ಎದುರಾಗುವ ಸಾಧ್ಯತೆಯಿದೆ. ಹೀಗಾಗಿ ಮಸ್ಕಿ ಕ್ಷೇತ್ರದ ಬೈ ಎಲೆಕ್ಷನ್​ಗೆ ಕೈ ಪಡೆ ಸನ್ನದ್ದವಾಗುತ್ತಿದೆ.

ನಾಯಕನ ಹುಡುಕಾಟದಲ್ಲಿ ಕಾಂಗ್ರೆಸ್​​​

ರಾಯಚೂರು: ರಾಜ್ಯದಲ್ಲಿ ನಡೆದ 'ಆಪರೇಷನ್ ಕಮಲ'ದ ನಂತರ ಇಲ್ಲಿನ 7 ವಿಧಾನಸಭಾ ಕ್ಷೇತ್ರಗಳ ಪೈಕಿ ಮಸ್ಕಿ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ಎದುರಾಗುವ ಸಾಧ್ಯತೆಯಿದೆ. ಹೀಗಾಗಿ ಕಾಂಗ್ರೆಸ್, ಕ್ಷೇತ್ರದಲ್ಲಿ ಗೆಲುವು ಸಾಧಿಸಲು ಭರ್ಜರಿ ತಯಾರಿ ನಡೆಸುತ್ತಿದ್ದು, ಪ್ರಬಲ ಅಭ್ಯರ್ಥಿಯನ್ನ ಕಣಕ್ಕಿಳಿಸಲು ಕಾರ್ಯತಂತ್ರ ರೂಪಿಸುತ್ತಿದೆ.

ಪ್ರಬಲ ನಾಯಕನ ಹುಡುಕಾಟದಲ್ಲಿ ಕಾಂಗ್ರೆಸ್​​​

ಪರಿಶಿಷ್ಟ ಪಂಗಡ (ಎಸ್ ಟಿ) ಮೀಸಲು ಕ್ಷೇತ್ರದಲ್ಲಿ ಕಳೆದ ಎರಡು ಅವಧಿಗೆ ಕಾಂಗ್ರೆಸ್​​ ಅಭ್ಯರ್ಥಿಯಾಗಿದ್ದ ಪ್ರತಾಪ್ ಗೌಡ ಪಾಟೀಲ್ ಎರಡು ಬಾರಿ ಗೆಲುವು ಸಾಧಿಸಿದ್ರು. ಆದ್ರೆ ಪಕ್ಷದಲ್ಲಿ ಹಿರಿಯರನ್ನು ಕಡೆಗಣಿಸಲಾಗುತ್ತಿದೆ ಎಂದು ಮೈತ್ರಿ ಸರ್ಕಾರದ ವಿರುದ್ಧ ಅವರು ತಿರುಗಿ ಬಿದ್ದಿದ್ದರು. ಆಗ ಕಾಂಗ್ರೆಸ್​​ನ ಪ್ರತಾಪ್ ಗೌಡ ಪಾಟೀಲ್​​​ರನ್ನ ಶಾಸಕ ಸ್ಥಾನದಿಂದ ಅನರ್ಹಗೊಳಿಸಿದ್ದು, ಇದನ್ನು ಪ್ರಶ್ನಿಸಿ ಪ್ರತಾಪ್ ಗೌಡ ಪಾಟೀಲ್ ನ್ಯಾಯಲಯದ ಮೋರೆ ಹೋಗಿದ್ದಾರೆ. ಆದ್ರೆ ಇತ್ತ ಮಸ್ಕಿಯಲ್ಲಿ ಉಪಚುನಾವಣೆ ನಡೆಯುವ ಸಾಧ್ಯತೆ ಇರುವುದರಿಂದ ಮಾಜಿ ಸಂಸದ ಬಿ.ವಿ. ನಾಯಕರನ್ನ ಉಪಚುನಾವಣೆಯಲ್ಲಿ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲು ಚರ್ಚೆ ನಡೆದಿದೆ ಎಂದು ಹೇಳಲಾಗುತ್ತಿದೆ.

ಮಸ್ಕಿ ವಿಧಾನಸಭೆ ಕ್ಷೇತ್ರದ ಉಪಚುನಾವಣೆ ನಡೆದರೆ, ಎರಡು ಪಕ್ಷಗಳು ಪ್ರತಿಷ್ಠೆ ಪಣವಾಗಿಟ್ಟು ಚುನಾವಣೆ ಎದುರಿಸುವ ದೃಷ್ಠಿಯಿಂದ ಕೈ ಪಡೆ ಈಗಾಗಲೇ ಜಿಲ್ಲೆಯ ಶಾಸಕರು, ಪ್ರಮುಖ ಮುಖಂಡರೊಳಗೊಂಡ ಸಭೆಯನ್ನು ಮಸ್ಕಿಯಲ್ಲಿ ನಡೆಸಿದೆ.

Intro:ಸ್ಲಗ್: ಉಪಚುನಾಚವಣೆಗೆ ಕೈ ರಣತಂತ್ರ
ಫಾರ್ಮೇಟ್: ಪ್ಯಾಕೇಜ್
ರಿಪೋರ್ಟ್ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: 06-೦9-2019
ಸ್ಥಳ: ರಾಯಚೂರು
ಆಂಕರ್: ಜೆಡಿಎಸ್-ಕಾಂಗ್ರೆಸ್ ಸಮಿಶ್ರ ಸರಕಾರ ವಿರುದ್ದ ತಿರುಗಿ ಬಿದ್ದ ಕಾಂಗ್ರೆಸ್ ಶಾಸಕರನ್ನ ಪಕ್ಷಾಂತರ ಕಾಯಿದೆಯಡಿಯಲ್ಲಿ ಅನರ್ಹಗೊಳಿಸಲಾಗಿದೆ. ಪಕ್ಷದ ಈ ನಡೆಯನ್ನ ಪ್ರಶ್ನಿಸಿ ಶಾಸಕರು ನ್ಯಾಯಲಯದ ಮೋರೆ ಹೋಗಿದ್ದು, ಪ್ರಕರಣ ಇತ್ಯರ್ಥದ ಬಳಿಕ ರಾಜ್ಯದಲ್ಲಿ ಮತ್ತೆ ಉಪಚುನಾವಣೆ ಎದುರಾಗುವ ಸಾಧ್ಯತೆಯಿದ್ದು, ಮಸ್ಕಿ ಕ್ಷೇತ್ರದ ಬೈ ಎಲೆಕ್ಷನ್ ಗೆ ಕೈ ಪಡೆ ಸನ್ನದವಾಗುತ್ತಿದೆ ಪ್ರಬಲ ಅಭ್ಯರ್ಥಿಯನ್ನ ಕಣಕ್ಕೆ ಇಳಿಸಲು ತಯಾರಿ ನಡೆಸಿದೆ. ಈ ಕುರಿತು ಒಂದು ರಿಪೋರ್ಟ್ ಇಲ್ಲಿದೆ ನೋಡಿ.
Body:ವಾಯ್ಸ್ ಓವರ್.1: ಬಿಸಿಲೂರು ರಾಯಚೂರು ಜಿಲ್ಲೆಯ ರಾಜ್ಯದಲ್ಲಿ ನಡೆಯುವ ಅಪರೇಷನ್ ಕಮಲದಿಂದ ಜಿಲ್ಲೆಯ ಹೆಸರು ಖ್ಯಾತಿ ಮತ್ತು ಅಪಖ್ಯಾತಿ ಗುರಿಯಾಗಿದೆ. ಇದೀಗ ಮತ್ತೆ ಅಪರೇಷನ್ ಕಮಲದಿಂದ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳ ಪೈಕಿ ರಾಯಚೂರು ಜಿಲ್ಲೆಯ ಮಸ್ಕಿ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ಎದುರಾಗುವ ಸಾಧ್ಯತೆಯಿದೆ. ಹೀಗಾಗಿ ಕಾಂಗ್ರೆಸ್ ಕ್ಷೇತ್ರದಲ್ಲಿ ಗೆಲುವು ಸಾಧಿಸಲು ಭರ್ಜರಿ ತಯಾರಿ ನಡೆಸಿ, ಪ್ರಬಲ ಅಭ್ಯರ್ಥಿಯನ್ನ ಕಣಕ್ಕೆ ಇಳಿಸಲು ಕಾರ್ಯತಂತ್ರ ರೂಪಿಸುತ್ತಿದ್ದು, ಒಂದು ಹಂತದಲ್ಲಿ ಸಭೆಯನ್ನ ಮಾಡಿದೆ.
ವಾಯ್ಸ್ ಓವರ್.2: ಪರಿಶಿಷ್ಟ ಪಂಗಡ(ಎಸ್ ಟಿ) ಮೀಸಲು ಇರುವ ಕ್ಷೇತ್ರದಲ್ಲಿ ಕಳೆದ ಎರಡು ಅವಧಿಗೆ ಕಾಂಗ್ರೆಸ್ ನ ಅಭ್ಯರ್ಥಿಯಾಗಿದ್ದ ಪ್ರತಾಪ್ ಗೌಡ ಪಾಟೀಲ್ ಎರಡು ಬಾರಿ ಗೆಲುವು ಸಾಧಿಸಿದ್ರು. ಆದ್ರೆ ಪಕ್ಷದಲ್ಲಿ ಹಿರಿತನವನ್ನ ಕಡೆಗಣಿಸಲಾಗುತ್ತಿದೆ ಎಂದು ಮೈತ್ರಿ ಸರಕಾರ ವಿರುದ್ದ ತಿರುಗಿ ಬಿದ್ದರು. ಆಗ ಕಾಂಗ್ರೆಸ್ ಪ್ರತಾಪ್ ಗೌಡ ಪಾಟೀಲ್ ರನ್ನ ಶಾಸಕ ಸ್ಥಾನದಿಂದ ಅನರ್ಹಗೊಳಿಸಿದ್ದು, ಇದನ್ನು ಪ್ರಶ್ನಿಸಿ ಪ್ರತಾಪ್ ಗೌಡ ಪಾಟೀಲ್ ನ್ಯಾಯಲಯದ ಮೋರೆ ಹೋಗಿದ್ದಾರೆ. ಆದ್ರೆ ಇತ್ತ ಮಸ್ಕಿಯಲ್ಲಿ ಉಪಚುನಾವಣೆ ನಡೆಯುವ ಸಾಧ್ಯತೆ ಇರುವುದರಿಂದ ಮಾಜಿ ಸಂಸದ ಬಿ.ವಿ.ನಾಯಕರನ್ನ ಉಪಚುನಾವಣೆ ಅಭ್ಯರ್ಥಿಯನ್ನಾಗಿ ಕಣಕ್ಕೆ ಇಳಿಸಲು ಚರ್ಚೆ ನಡೆಸಿದೆ ಎಂದು ಹೇಳಲಾಗುತ್ತಿದೆ. ಆದ್ರೆ ಬಗ್ಗೆ ಬಿ.ವಿ.ನಾಯಕ ಈ ಬಗ್ಗೆ ಯಾವುದೇ ತಿರ್ಮಾನ ಕೈಗೊಂಡಿಲ್ಲ ಎಂದು ಹೇಳುತ್ತಿದ್ದಾರೆ.
ವಾಯ್ಸ್ ಓವರ್.3: ಇನ್ನು ಮಸ್ಕಿ ವಿಧಾನಸಭೆ ಕ್ಷೇತ್ರದ ಉಪಚುನಾವಣೆ ನಡೆದರೆ, ಎರಡು ಪಕ್ಷಗಳು ಪ್ರತಿಷ್ಠೆ ಪಣವಾಗಿಟ್ಟು ಚುನಾವಣೆ ಎದುರಿಸುವ ದೃಷ್ಠಿಯಿಂದ ಕೈ ಪಡೆ ಈಗಾಗಲೇ ಜಿಲ್ಲೆಯ ಶಾಸಕರು, ಪ್ರಮುಖ ಮುಖಂಡರೊಳಗೊಂಡ ಸಭೆಯನ್ನ ಮಸ್ಕಿಯಲ್ಲಿ ಮಾಡಿದೆ. ಬೈ ಎಲೆಕ್ಷನ್ ಸಹ ಕಾಂಗ್ರೆಸ್ ನ ಅಧಿಪತ್ಯವನ್ನ ಉಳಿಸಿಕೊಳ್ಳಲು ಭರ್ಜರಿ ತಯಾರಿ ನಡೆಸಿದ್ದು, ಪಕ್ಷಕ್ಕೆ ದೋಹ್ರ ಎಸೆಗಿದವರಿಗೆ ಹಾಗೂ ಬಿಜೆಪಿಗೆ ತಕ್ಕ ಪಾಠ ಕಲಿಸಲು ಹಾಗೂ ಪ್ರಬಲ ಸ್ಪರ್ಧೆ ನೀಡಲು ಮಾಜಿ ಸಂಸದ ಬಿ.ವಿ.ನಾಯಕರನ್ನ ಹೆಸರು ಕಾಂಗ್ರೆಸ್ ವಲಯದಲ್ಲಿ ಕೇಳಿ ಬರುತ್ತಿದೆ. ಆದ್ರೆ ಅಂತಿಮವಾಗಿ ಕಾಂಗ್ರೆಸ್ ಯಾವ ನಡೆ ಅನುಸರಿಸುತ್ತದೆ ಎನ್ನುವುದು ಸಾಧ್ಯ ಕುತೂಹಾಲ ಕೆರಳಿಸಿದೆ.
Conclusion:ಬೈಟ್.1: ಬಿ.ವಿ.ನಾಯಕ, ಮಾಜಿ ಸಂಸದ(ದಪ್ಪವಾಗಿರುವವರು)
ಬೈಟ್.2: ಎನ್.ಎಸ್.ಬೋಸರಾಜ್, ವಿಧಾನಪರಿಷತ್ ಸದಸ್ಯ(ತಲೆಯಲ್ಲಿ ಬಿಳಿ ಕೂದಲು ಇರುವವರು)
ETV Bharat Logo

Copyright © 2024 Ushodaya Enterprises Pvt. Ltd., All Rights Reserved.