ರಾಯಚೂರು: ಜಿಲ್ಲೆಯ ದೇವದುರ್ಗ ತಾಲೂಕಿನ ಗಬ್ಬೂರು ಗ್ರಾಮದ ವಿಜ್ಞಾನ ಲೋಕಕ್ಕೆ ಅಚ್ಚರಿಯಾಗಿರುವ ಲಕ್ಷ್ಮೀವೆಂಕಟೇಶ್ವರ ದೇವಾಲಯಕ್ಕೆ ಇನ್ಫೋಸಿಸ್ ಮಾಜಿ ಮುಖ್ಯಸ್ಥೆ ಸುಧಾಮೂರ್ತಿ ಅವರು ಇಂದು ಭೇಟಿ ನೀಡಿ, ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದರು.
12ನೇ ಶತಮಾನದಲ್ಲಿ ನಿರ್ಮಿಸಲಾಗಿರುವ ಐತಿಹಾಸಿಕ ದೇವಸ್ಥಾನದಲ್ಲಿ ನೆಲೆಸಿರುವ ಲಕ್ಷ್ಮೀ ವೆಂಕಟೇಶ್ವರ ಮೂರ್ತಿಯ ತಲೆಯ ಮೇಲೆ ಬಿಸಿ ನೀರು ಸುರಿದರೆ, ಪಾದಕ್ಕೆ ಬರುವಷ್ಟರಲ್ಲಿ ನೀರು ತಣ್ಣಗಾಗುತ್ತದೆ. ಇದು ಈ ಕ್ಷೇತ್ರದ ವೈಶಿಷ್ಯವಾಗಿದ್ದು, ಸುಧಾಮೂರ್ತಿ ಅವರು ಈ ಅಚ್ಚರಿಯನ್ನು ಕಣ್ತುಂಬಿಕೊಂಡರು.
ಲಕ್ಷ್ಮೀ ವೆಂಕಟೇಶ್ವರನಿಗೆ ಪೂಜೆ ಸಲ್ಲಿಸಿದ ಸುಧಾಮೂರ್ತಿ ಅವರಿಗೆ ಅಲ್ಲಿನ ಅರ್ಚಕರು ದೇವಸ್ಥಾನದ ಹಿನ್ನೆಲೆಯನ್ನು ವಿವರಿಸಿದರು. ಬಳಿಕ ಮಹಿಳೆಯರು ಉಡಿತುಂಬಿ, ದೇವರ ಚಿತ್ರವನ್ನು ಉಡುಗೊರೆಯಾಗಿ ನೀಡಿ ಗೌರವಿಸಿದರು. ಇದಾದ ಬಳಿಕ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಬೇಕಿರುವ ಅಗತ್ಯ ನೆರವು ನೀಡುವುದಾಗಿ ಭರವಸೆ ನೀಡಿದರು.
ಓದಿ: ವಿಜಯಪುರ ನಗರ ಕ್ಷೇತ್ರದಲ್ಲಿ ಧೈರ್ಯ ಇದ್ದವರು ನಿಲ್ಲಲಿ : ಯತ್ನಾಳ್ ಸವಾಲ್