ETV Bharat / state

Mantralaya: ಆಗಸ್ಟ್ 29ರಿಂದ ಶ್ರೀಗುರು ರಾಯರ 352ನೇ ಆರಾಧನಾ ಮಹೋತ್ಸವ

Sri Raghavendra Swamy Aaradhana Mahotsava: ಶ್ರೀಗುರು ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ ಆ.29ರಿಂದ ಆರಂಭವಾಗಲಿದೆ.

ಶ್ರೀಸುಬುಧೇಂದ್ರ ತೀರ್ಥರು
ಶ್ರೀಸುಬುಧೇಂದ್ರ ತೀರ್ಥರು
author img

By

Published : Aug 16, 2023, 6:28 PM IST

Updated : Aug 16, 2023, 9:14 PM IST

ಶ್ರೀಸುಬುಧೇಂದ್ರ ತೀರ್ಥರಿಂದ ಮಾಹಿತಿ

ರಾಯಚೂರು: ಮಂತ್ರಾಲಯದ ಶ್ರೀಗುರು ಶ್ರೀರಾಘವೇಂದ್ರ ಸ್ವಾಮಿಗಳ 352ನೇ ಆರಾಧನಾ ಮಹೋತ್ಸವವು‌ ವೈಭವದಿಂದ ನಡೆಯಲಿದೆ ಎಂದು ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥರು ತಿಳಿಸಿದ್ದಾರೆ. ಶ್ರೀಮಠದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆ.29ರಿಂದ ಸೆ.4ರವರೆಗೆ ಏಳು ದಿನ ಮಹೋತ್ಸವ ನಡೆಸಲಾಗುತ್ತದೆ ಎಂದರು.

ಏಳು ದಿನಗಳ ಕಾಲ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಸಮಾರಂಭಗಳು ನಡೆಯಲಿವೆ. ಗ್ರಂಥಗಳ ಲೋಕಾರ್ಪಣೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹನೀಯರಿಗೆ ಶ್ರೀರಾಘವೇಂದ್ರ ಅನುಗ್ರಹ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಆ.29ರಂದು ಧ್ವಜಾರೋಹಣ, ಗೋ, ಧಾನ್ಯ, ಲಕ್ಷ್ಮಿ ಪೂಜೆ ಮೂಲಕ ಮಹೋತ್ಸವಕ್ಕೆ ವಿಜೃಂಭಣೆಯ ಚಾಲನೆ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.

ಪೂರ್ವಾರಾಧನೆ: ಆ.31ರಂದು ಪೂರ್ವಾರಾಧನೆಯ ನಿಮಿತ್ತ ರಾಯರ ಮೂಲ ಬೃಂದಾವನಕ್ಕೆ ಪಂಚಾಮೃತ ಅಭಿಷೇಕ, ಮೂಲ ರಾಮದೇವರ ಪೂಜೆ ನಡೆಯಲಿದೆ. ಸಾಯಂಕಾಲ ಮಠದ ಮುಂಭಾಗದ ಯೋಗೀಂದ್ರ ಸಭಾ ಮಂಟಪದಲ್ಲಿ ಕರ್ನಾಟಕದ ವಿದ್ವಾನ್ ರಾಮ ವಿಠ್ಠಲಾಚಾರ್ಯ, ಆಂಧ್ರದ ವಿದ್ವಾನ್ ಗರಕಿಪಾಟಿ ನರಸಿಂಹರಾವ್, ಮುಂಬೈನ ಉದ್ಯಮಿ ಎನ್.ಚಂದ್ರಶೇಖರನ್, ಪುಣೆಯ ಎಂಐಟಿ ವರ್ಲ್ಡ್ ಪೀಸ್ ವಿವಿಯ ಅಧ್ಯಕ್ಷ ಡಾ.ವಿಶ್ವನಾಥ ಕರಾಡ್‌ಗೆ ಶ್ರೀ ರಾಘವೇಂದ್ರ ಅನುಗ್ರಹ ಪ್ರಶಸ್ತಿ ಪ್ರದಾನ ನೀಡಿ ಸನ್ಮಾನಿಸಿ, ಗೌರವಿಸಲಾಗುವುದು ಎಂದು ತಿಳಿಸಿದರು.

ಮಧ್ಯಾರಾಧನೆ: ಸೆ.1ರಂದು ಮಧ್ಯಾರಾಧನೆ ನಿಮಿತ್ತ ತಿರುಪತಿ ತಿರುಮಲ ದೇವಸ್ಥಾನದಿಂದ ತರುವ ಶೇಷ ವಸ್ತ್ರವನ್ನು ರಾಘವೇಂದ್ರ ಸ್ವಾಮಿಗೆ ಸಮರ್ಪಣೆ ಮಾಡಲಾಗುತ್ತದೆ.

ಉತ್ತರಾರಾಧನೆ: ಸೆ.2ರಂದು ಉತ್ತರಾರಾಧನೆ ದಿನ ಮಹಾರಥೋತ್ಸವ ನೆರವೇರಿಸಲಾಗುವುದು. ಸಂಜೆ ಪ್ರಭಾತ್ ಕಲಾವಿದರಿಂದ ಸಾಂಸ್ಕೃತಿಕ ಪ್ರದರ್ಶನ ಜರುಗಲಿದೆ. ಸೆ.3ರಂದು ಸುಜ್ಞಾನೇಂದ್ರ ತೀರ್ಥರ ಆರಾಧನೆ ಹಾಗೂ ಸೆ.4ರಂದು ಸರ್ವ ಸಮರ್ಪಣೋತ್ಸವ ನಡೆಯಲಿದೆ ಎಂದು ಹೇಳಿದರು.

ಮಳೆ ಕುಂಠಿತವಾದ ಕಾರಣ ನದಿಯಲ್ಲಿ ನೀರಿನ ಕೊರತೆಯಿದ್ದು, ಮಹೋತ್ಸವಕ್ಕೆ ಬರುವ ಭಕ್ತರಿಗಾಗಿ ನದಿ ದಡದಲ್ಲಿ ಸ್ನಾನ ಮಾಡಲು ಷವರ್ ವ್ಯವಸ್ಥೆ ಮಾಡಲಾಗುತ್ತಿದೆ. ನದಿಗೆ ನೀರು ಹರಿಸುವಂತೆ ತುಂಗಭದ್ರಾ ಜಲಾಶಯದ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ ಎಂದು ತಿಳಿಸಿದರು.

ಅಯೋಧ್ಯೆಯಲ್ಲಿ ಶಾಖಾ ಮಠದ ಸ್ಥಾಪನೆಗಾಗಿ ಸ್ಥಳ ನೀಡುವಂತೆ ಕೇಳಲಾಗಿತ್ತು. ರಾಮ ಮಂದಿರದಿಂದ ಬಹುದೂರದ ಸ್ಥಳ ಗುರುತಿಸಲಾಗಿದೆ. ಅಲ್ಲಿಗೆ ಸಮರ್ಪಕ ಸ್ಪಂದನೆ ಸಿಗದ ಕಾರಣಕ್ಕೆ ಶ್ರೀಮಠದಿಂದಲೇ ಸ್ಥಳ ಖರೀದಿಸಿ ಮಠ ನಿರ್ಮಾಣ ಮಾಡಲಾಗುವುದು ಎಂದು ಇದೇ ವೇಳೆ ಶ್ರೀಗಳು ಹೇಳಿದರು. ಆರಾಧನೆಗೆ ಇನ್ನು ಕೆಲವೇ ದಿನಗಳು ಮಾತ್ರ ಬಾಕಿ ಇರುವ ಕಾರಣ ದೇವಸ್ಥಾನದ ಪ್ರಾಂಗಣದಲ್ಲಿ ಪೇಂಟಿಂಗ್​ ಕಾರ್ಯಗಳು ಭರದಿಂದ ಸಾಗಿವೆ.

ಇದನ್ನೂ ಓದಿ: Tirumala Temple: ತಿರುಮಲ ಪಾದಚಾರಿ ಮಾರ್ಗದಲ್ಲಿ ಮಧ್ಯಾಹ್ನ 2 ಗಂಟೆ ನಂತರ ಮಕ್ಕಳಿಗೆ ಪ್ರವೇಶವಿಲ್ಲ

Last Updated : Aug 16, 2023, 9:14 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.