ರಾಯಚೂರು: ರಾಯಚೂರು ಎಸ್ಪಿ ಡಾ.ಸಿ.ಬಿ. ವೇದ ಮೂರ್ತಿ ಅವರು ಇಂದು ನಗರದ ಸರಕಾರಿ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಚರ್ಚಿಸಿ ಕೆಲ ಸಮಯ ಮಕ್ಕಳೊಂದಿಗೆ ಕಳೆದರು.
ಮಕ್ಕಳೊಂದಿಗೆ ಮಕ್ಕಳಂತೆ ಬೆರೆತು ಅವರ ಕುಶಲೋಪರಿ ವಿಚಾರಿಸಿ, ಮಕ್ಕಳೊಂದಿಗೆ ಊಟ ಮಾಡಿ ಸರಳತೆ ಮೆರೆದರು. ನಿಲಯದ ಪಾಲಕರಿಗೆ ಮಕ್ಕಳಿಗೆ ಯೋಗ್ಯವಾದ ಊಟೋಪಚಾರ ಮಾಡಬೇಕು. ಮಕ್ಕಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕೆಂದು ಸೂಚನೆ ನೀಡಿ, ಇಲಾಖೆಯಿಂದ ಅಗತ್ಯ ಸಂದರ್ಭದಲ್ಲಿ ರಕ್ಷಣೆಗೆ ಸಹಾಯ ಪಡೆಯಲು ತಿಳಿಸಿದರು.
ಇನ್ನು ಎಸ್ಪಿ ಅವರ ಆಗಮನದಿಂದ ಸಂತಸಗೊಂಡ ಮಕ್ಕಳು ಖುಷಿಯಿಂದಲೇ ಅವರೊಂದಿಗೆ ಕೆಲ ಸಮಯ ಕಳೆದರು.