ರಾಯಚೂರು: ಜಿಲ್ಲೆಯ ಅಂಗನವಾಡಿ ಕೇಂದ್ರಗಳು ಸರ್ಕಾರದ ವಿವಿಧ ಅನುದಾನದಲ್ಲಿ ಸ್ಮಾರ್ಟ್ ಆಗಿದ್ದು, ಈಗ ಕೇಂದ್ರಗಳ ಹಾಗೆ ಅಲ್ಲಿನ ಶಿಕ್ಷಕರು ರಾಷ್ಟ್ರೀಯ ಪೋಷಣೆ ಅಭಿಯಾನದ ಮೂಲಕ ಸ್ಮಾರ್ಟ್ ಆಗಿ ಕಾರ್ಯ ನಿರ್ವಹಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಸ್ಮಾರ್ಟ್ ಫೋನ್ಗಳನ್ನು ನೀಡಲು ಮುಂದಾಗಿದೆ.
ರಕ್ತ ಹೀನತೆಯಿಂದ ಬಳತ್ತಿರುವ ಮಕ್ಕಳು, ಕಿಶೋರಿಯರು, ಗರ್ಭಿಣಿಯರು, ಹಾಲುಣಿಸುವ ತಾಯಂದಿರು ಹಾಗೂ ನವಜಾತ ಶಿಸ್ತುಗಳ ಪೋಷಣೆ ಮತ್ತು ನಿರಂತರ ಅನುಪಾಲನೆ ಉದ್ದೇಶದಿಂದ ಅಂಗನವಾಡಿ ಶಿಕ್ಷಕರು ಹಾಗೂ ಮೇಲ್ವಿಚಾರಕರಿಗೆ ರಾಷ್ಟ್ರೀಯ ಪೋಷಣೆ ಅಭಿಯಾನದ ಮೂಲಕ ಸ್ಮಾರ್ಟ್ ಪೋನ್ಗಳ ವಿತರಣೆ ಮಾಡಲಾಗುತ್ತಿದೆ.
ಸ್ಮಾರ್ಟ್ಫೋನ್ ವಿತರಣೆಯಿಂದ ಅಂಗನವಾಡಿ ಶಿಕ್ಷಕರು ಸ್ಮಾರ್ಟ್ ಆಗಲಿದ್ದು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವಿವಿಧ ಯೋಜನೆಗಳ ವರದಿಗಳ ಸಲ್ಲಿಕೆಗೆ ಬಹಳಷ್ಟು ಅನುಕೂಲವಾಗಲಿದ್ದು, ನಿಖರತೆಯ ವರದಿ ಸಲ್ಲಿಕೆಗೆ ಬಹಳಷ್ಟು ಸಹಾಯಕವಾಗಿದ್ದು, ಇನ್ನೂ ಮುಂದೆ ಅಂಗನವಾಡಿ ಶಿಕ್ಷಕರ ಕಾರ್ಯವು ಚುರುಕಾಗಲಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಅಭಿವೃದ್ಧಿಪಡಿಸಿರುವ ಆ್ಯಪ್ಗಳಲ್ಲಿ ಒಂದಾಗಿದ್ದು, ಅಂಗನವಾಡಿ ವ್ಯಾಪ್ತಿಯಲ್ಲಿ ಗರ್ಭಿಣಿ ಮಹಿಳೆಯರು, ಮಕ್ಕಳ ಕುರಿತು ಮಾಹಿತಿ ಹಾಗೂ ಅವರ ಹಾಜರಾತಿ ಸೇರಿದಂತೆ ಫಲಾನುಭವಿಗಳ ಮಾಹಿತಿ ದಾಖಲು ಶ್ರೀಘ್ರವಾಗಲಿದ್ದು, ನಿಖರತೆಯೊಂದಿಗೆ ರಾಜ್ಯ ಹಾಗೂ ದೇಶದ ಮಾಹಿತಿ ಪಡೆಯಲು ಸಹಕಾರಿಯಾಗಲಿದೆ.
ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರ್ದೇಶಕ ವೀರಣ್ಣಗೌಡ ಮಾತನಾಡಿ, ರಾಷ್ಟ್ರೀಯ ಪೋಷಣೆ ಅಭಿಯಾನದಡಿ ಜಿಲ್ಲೆಯ 2,662 ಅಂಗನವಾಡಿ ಶಿಕ್ಷಕರು ಹಾಗೂ 92 ಅಂಗನವಾಡಿ ಮೇಲ್ವಿಚಾರಕರಿಗೆ ಸ್ಮಾರ್ಟ್ಪೋನ್ನ್ನು ಇಲಾಖೆಯಿಂದ ನೀಡಲಾಗಿದ್ದು, ಅಂಗನವಾಡಿ ವ್ಯಾಪ್ತಿಯ ಚಿಕ್ಕ ಮಕ್ಕಳು, ಗರ್ಭಿಣಿಯರ ಹಾಜರಾತಿ ಸೇರಿದಂತೆ ಇಲಾಖೆ ಇತರೆ ಮಾಹಿತಿ ದಾಖಲು ಮಾಡಲು ಸಹಕಾರಿಯಾಗಿದ್ದು, ನಿಖರವಾದ ವಿವರಣೆ ಹಾಗೂ ಮಾಹಿತಿಯನ್ನು ರಾಜ್ಯ ಮತ್ತು ದೇಶದಲ್ಲಿ ಪಡೆಯಲು ಸಹಕಾರಿಯಾಗಲಿದೆ ಎಂದರು.