ETV Bharat / state

ಸಿಂಧನೂರು ಸಬ್ ರಿಜಿಸ್ಟ್ರಾರ್​ರಿಂದ ಬಹಿರಂಗವಾಗಿ ಲಂಚಕ್ಕೆ ಬೇಡಿಕೆ ಆರೋಪ - Sindhonoor Sub-registrar openly demanding bribe

ಸಿಂಧನೂರು ತಾಲೂಕಿನ ಸಬ್ ರಿಜಿಸ್ಟ್ರಾರ್ ಲಕ್ಷ್ಮಿ ತುಳಸಿ ಬಹಿರಂಗವಾಗಿ ಲಂಚ ಪಡೆಯುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

Raichur
ಸಬ್ ರಿಜಿಸ್ಟ್ರಾರ್​ರಿಂದ ಬಹಿರಂಗವಾಗಿ ಲಂಚಕ್ಕೆ ಬೇಡಿಕೆ ಆರೋಪ
author img

By

Published : Jul 12, 2021, 7:38 AM IST

ರಾಯಚೂರು: ನಾವು ಕಳ್ಳರು, ನೀವೂ ಕಳ್ಳರು. ದುಡ್ಡು ಕೊಟ್ಟರೆ ಮಾತ್ರ ಕೆಲಸ ಆಗೋದು. ಹೀಗಂತ ಜವಾಬ್ದಾರಿಯುತ ಸ್ಥಾನದಲ್ಲಿರುವ ಜಿಲ್ಲೆಯ ಸಿಂಧನೂರು ತಾಲೂಕಿನ ಸಬ್ ರಿಜಿಸ್ಟ್ರಾರ್ ಲಕ್ಷ್ಮಿ ತುಳಸಿ ಬಹಿರಂಗವಾಗಿ ಲಂಚ ಪಡೆಯುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಸಬ್ ರಿಜಿಸ್ಟ್ರಾರ್​ರಿಂದ ಬಹಿರಂಗವಾಗಿ ಲಂಚಕ್ಕೆ ಬೇಡಿಕೆ ಆರೋಪ

ವಕೀಲ ಸಂತೋಷ್​ ಪಾಟೀಲ್‌‌ ಎಂಬುವವರು ಮನೆ ಕಟ್ಟುವುದಕ್ಕಾಗಿ ಸಾಲ ಪಡೆಯಲು ಬ್ಯಾಂಕ್​ಗೆ ತೆರಳಿದ್ದ ವೇಳೆ ಬ್ಯಾಂಕ್​ ಸಿಬ್ಬಂದಿ ದಾಖಲೆಗಳನ್ನು ಸಬ್ ರಿಜಿಸ್ಟ್ರಾರ್ ಆಫೀಸ್‌ನಲ್ಲಿ ಮಾರ್ಟ್‌‌ಗೇಜ್ ಮಾಡಿಸಲು ಸೂಚಿಸಿದ್ದರು. ಹೀಗಾಗಿ, ಸಬ್ ರಿಜಿಸ್ಟ್ರಾರ್ ಕಚೇರಿಗೆ ತೆರಳಿದ್ದ ವೇಳೆ ಸಬ್ ರಿಜಿಸ್ಟ್ರಾರ್ ಲಕ್ಷ್ಮಿ ತುಳಸಿ, ಮಾರ್ಟ್‌‌ಗೇಜ್ ಮಾಡಲು 2,000 ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ.

ಆಗ ವಕೀಲ ಸಂತೋಷ್​ ಪಾಟೀಲ್‌‌, ನಾನು ಅಡ್ವೋಕೇಟ್. ನನ್ನ ಬಳಿಯೇ ಲಂಚ ಕೇಳ್ತೀರಾ ಅಂದಿದಕ್ಕೆ ನಾವು ಕಳ್ಳರು, ನೀವೂ ಕಳ್ಳರು. ದುಡ್ಡು ಕೊಟ್ಟರೆ ಮಾತ್ರ ಕೆಲಸ ಆಗೋದು ಎಂದ ಸಬ್ ರಿಜಿಸ್ಟ್ರಾರ್ ಮಾತು ಕೇಳಿ ವಕೀಲರು ಕೆರಳಿದರು. ಬಳಿಕ ವಕೀಲರೆಲ್ಲರೂ ಕೇಳಲು ಹೋದಾಗಲೂ ಲಕ್ಷ್ಮಿ ತುಳಸಿ ಅವರು ತಮ್ಮ ಮಾತನ್ನ ಸಮರ್ಥಿಸಿಕೊಂಡಿದ್ದಾರೆ ಎಂದು ವಕೀಲರು ಆರೋಪಿಸಿದ್ದಾರೆ.

ಇದನ್ನೂ ಓದಿ: ನಾನು ಯಾವುದಕ್ಕೂ ಯಾವ ವಿಷಯಕ್ಕೂ ತಲೆಕೆಡಿಸಿಕೊಂಡಿಲ್ಲ: ನಟ ರಕ್ಷಿತ್ ಶೆಟ್ಟಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.