ರಾಯಚೂರು: "ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ ನಾಲ್ಕು ಶಂಕರಚಾರ್ಯರು ಮೂಲ ಕಾರಣೀಭೂತರು. ಈಗ ಅವರು ಆಕ್ಷೇಪ ಎತ್ತಿರುವುದು ಸರಿ ಎನ್ನಿಸುತ್ತಿದೆ" ಎಂದು ತಿಂಥಿಣಿ ಬ್ರಿಡ್ಜ್ ಕಾಗಿನೆಲೆ ಕನಕಗುರು ಪೀಠದ ಸಿದ್ದರಾಮಾನಂದ ಸ್ವಾಮೀಜಿ ಹೇಳಿದ್ದಾರೆ. ಕನಕಗುರು ಪೀಠದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಹಮ್ಮಿಕೊಂಡಿರುವ ಹಾಲುಮತ ಸಂಸ್ಕೃತಿ ವೈಭವ ಕಾರ್ಯಕ್ರಮದ ವೇಳೆ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ತರಾತುರಿಯ ಉದ್ಘಾಟನೆಯಿಂದ ಭಕ್ತರಿಗೆ ನೋವು: "ಯಾವುದೇ ದೇವಸ್ಥಾನದ ನಿರ್ಮಾಣ ಪರಿಪೂರ್ಣವಾದ ನಂತರ ಉದ್ಘಾಟನೆ ಮಾಡಬೇಕು. ತರಾತುರಿಯ ಉದ್ಘಾಟನೆ ಎಲ್ಲೋ ಬೇರೇ ರೀತಿಯ ಉದ್ದೇಶ ಇಟ್ಟುಕೊಂಡಿರುವಂತೆ ಕಾಣುತ್ತಿದೆ. ಇದು ರಾಮನ ಭಕ್ತರಿಗೆ ನೋವು ತಂದಿದೆ. ಮಂದಿರ ಉದ್ಘಾಟನೆಗೆ ನಮ್ಮ ಕನಕಗುರು ಪೀಠಕ್ಕೂ ಆಹ್ವಾನ ಬಂದಿದೆ" ಎಂದು ಸ್ವಾಮೀಜಿ ತಿಳಿಸಿದರು.
ಇದನ್ನೂ ಓದಿ: ರಾಮಮಂದಿರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದಿರುವ ಕಾಂಗ್ರೆಸ್ ತೀರ್ಮಾನ ದುರ್ದೈವದ ಸಂಗತಿ: ಯಡಿಯೂರಪ್ಪ