ETV Bharat / state

ರೋಷನ್‌ ಬೇಗ್​ಗೂ ನಮಗೂ ಯಾವುದೇ ಸಂಬಂಧವಿಲ್ಲ: ಸಿದ್ದರಾಮಯ್ಯ

ಬರುವ ಮಸ್ಕಿ ಬೈ ಎಲೆಕ್ಷನ್‌‌ನಲ್ಲಿ ಜನ ಪ್ರತಾಪಗೌಡ ಪಾಟೀಲ್​ಗೆ ತಕ್ಕ ಪಾಠ ಕಲಿಸಲಿದ್ದಾರೆಂಬ ವಿಶ್ವಾವಿದೆ. ಕಾಂಗ್ರೆಸ್ ಪಕ್ಷ ಗೆಲ್ಲುವುದು ನಿಶ್ಚಿತ. ನಾನು ಸಿಎಂ ಆಗಿದ್ದಾಗ ನಡೆದ ಬೈ ಎಲೆಕ್ಷನ್​ನಲ್ಲಿ ನಾವು ಗೆದ್ದಿದ್ದೆವು ಎಂದು ಮಾಜಿ ಸಚಿವ ಸಿದ್ದರಾಮಯ್ಯ ಹೇಳಿದರು.

ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ
ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ
author img

By

Published : Nov 23, 2020, 3:08 PM IST

ರಾಯಚೂರು: ರೋಷನ್‌ ಬೇಗ್​ಗೂ ನಮಗೂ ಯಾವುದೇ ಸಂಬಂಧವಿಲ್ಲ. ರೋಷನ್ ಬೇಗ್​ ನಮ್ಮ ಪಕ್ಷದಲ್ಲಿಲ್ಲ. ಅವರಿಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಮಾಜಿ ಸಚಿವ ಸಿದ್ದರಾಮಯ್ಯ ಹೇಳಿದರು.

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ

ಐಎಂಎ ಪ್ರಕರಣದಲ್ಲಿ ಜಮೀರ್ ಅಹ್ಮದ್​​ ಭಾಗಿ ಆರೋಪವಿದೆ ಎಂಬ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಜಮೀರ್ ಅಹ್ಮದ್ ಅವರನ್ನು ಈಗಾಗಲೇ ಕರೆಸಿ ಸಿಐಟಿ ವಿಚಾರಣೆ ಮಾಡಿದೆ. 2-3 ಬಾರಿ ಜಮೀರ್ ವಿಚಾರಣೆ ವೇಳೆಯಲ್ಲಿ ಅವರದೇನೂ ಪಾತ್ರವಿಲ್ಲವೆಂದು ಹೇಳಿದ್ದಾರೆ ಎಂದರು.

ಬರುವ ಮಸ್ಕಿ ಬೈ ಎಲೆಕ್ಷನ್‌‌ನಲ್ಲಿ ಜನ ಪ್ರತಾಪಗೌಡ ಪಾಟೀಲ್​ಗೆ ತಕ್ಕ ಪಾಠ ಕಲಿಸಲಿದ್ದಾರೆಂಬ ವಿಶ್ವಾವಿದೆ. ಕಾಂಗ್ರೆಸ್ ಪಕ್ಷ ಗೆಲ್ಲುವುದು ನಿಶ್ಚಿತ. ನಾನು ಸಿಎಂ ಆಗಿದ್ದಾಗ ನಡೆದ ಬೈ ಎಲೆಕ್ಷನ್​ನಲ್ಲಿ ನಾವು ಗೆದ್ದಿದ್ದೆವು. ಬಿಜೆಪಿ ಅಧಿಕಾರ ದುರಪಯೋಗಪಡಿಸಿಕೊಂಡು ಚುನಾವಣೆ ಮಾಡುತ್ತಿದೆ. ಕಾಂಗ್ರೆಸ್‌ನಲ್ಲಿ ಯಾವುದೇ ಗೊಂದಲವಿಲ್ಲ. ನಾಯಕತ್ವದ ಬಗ್ಗೆ ಗೊಂದಲ ಇದೆ ಎನ್ನುವುದು ಸುಳ್ಳು. ನಾವು ಒಗ್ಗಟ್ಟಾಗಿದ್ದೇವೆ. ಜೆಡಿಎಸ್ ಬೈ ಎಲೆಕ್ಷನ್​ಗೆ ಸ್ಪರ್ಧಿಸುವುದಿಲ್ಲ ಎಂದು ಹೇಳುತ್ತೆ. ಚುನಾವಣೆ ಘೋಷಣೆಯ ಬಳಿಕ ಗೊತ್ತಾಗುತ್ತದೆ. ಅವರು ಹೇಳಿದಂತೆ ಎಂದಾದರೂ ನಡೆದುಕೊಂಡಿದ್ದಾರಾ ಎಂದು ಪ್ರಶ್ನಿಸಿದರು.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.