ರಾಯಚೂರು: ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠಕ್ಕೆ ಆರ್ಟ್ ಆಫ್ ಲಿವಿಂಗ್‌ನ ಸಂಸ್ಥಾಪಕ ರವಿಶಂಕರ್ ಗುರೂಜಿ ಭೇಟಿ ನೀಡಿದರು. ಇಂದು ಬೆಳಗ್ಗೆ ಮಂತ್ರಾಲಯಕ್ಕೆ ತೆರಳಿದ ಗುರೂಜಿ ಆರಂಭದಲ್ಲಿ, ಗ್ರಾಮದ ಆದಿದೇವತೆ ಮಂಚಾಲಮ್ಮ ದೇವಿ ದರ್ಶನ ಪಡೆದು ವಿಶೇಷ ಪೂಜೆ ನೇರವೇರಿಸಿದರು.
![Shri Ravishankar Guruji visited mantralaya](https://etvbharatimages.akamaized.net/etvbharat/prod-images/5979979_thum.png)
ಬಳಿಕ ಕಲಿಯುಗದ ಕಾಮಧೇನು ಶ್ರೀರಾಘವೇಂದ್ರ ಸ್ವಾಮಿಗಳ ಮೂಲ ಬೃಂದವನ ದರ್ಶನ ಪಡೆದು, ವಿಶೇಷ ಪೂಜೆ ನೆರವೇರಿಸಿದರು. ಬಳಿಕ ಶ್ರೀಮಠದಿಂದ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಮಠದ ಪರವಾಗಿ ಸನ್ಮಾನಿಸುವ ಮೂಲಕ ನೆನಪಿನ ಕಾಣಿಕೆ ನೀಡಿದ್ರು. ಈ ವೇಳೆ ಶ್ರೀಮಠದ ಸಿಬ್ಬಂದಿ ಹಾಗೂ ಅಧಿಕಾರಿಗಳು ಇದ್ದರು.
![Shri Ravishankar Guruji visited mantralaya](https://etvbharatimages.akamaized.net/etvbharat/prod-images/5979979_thumbn.png)