ETV Bharat / state

ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಆರೋಪ: ರಾಯಚೂರಿನಲ್ಲಿ ಪ್ರಾಂಶುಪಾಲ ಅರೆಸ್ಟ್‌

ಎಸ್​ಎಸ್​ಎಲ್​ಸಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪ ಪ್ರಕರಣದಲ್ಲಿ ಪ್ರಾಂಶುಪಾಲರನ್ನು ಪೊಲೀಸರು ಬಂಧಿಸಿದ್ದಾರೆ.

School Principal arrested  arrested over Allegation of sexual harassment  School Principal arrested in rape case  ವಿದ್ಯಾರ್ಥಿನಿ ಜೊತೆ ಅನುಚಿತ ವರ್ತನೆ  ಲೈಂಗಿಕ ಕಿರುಕುಳ ಆರೋಪ  ಶಕ್ತಿನಗರದ ಶಾಲೆಯೊಂದರ ಪ್ರಾಂಶುಪಾಲ ವಿಜಯಕುಮಾರ ಅಂಗಡಿ  ಪೊಲೀಸ್​ ಠಾಣೆಗೆ ದೂರು  ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ
ಜೊತೆ ಅನುಚಿತ ವರ್ತನೆ, ಲೈಂಗಿಕ ಕಿರುಕುಳ ಆರೋ
author img

By

Published : Mar 30, 2023, 1:02 PM IST

ರಾಯಚೂರು: ಎಸ್​ಎಸ್​ಎಲ್​ಸಿ ವಿದ್ಯಾರ್ಥಿನಿಗೆ ಅಂಕ ಮತ್ತು ಉಚಿತ ದಾಖಲಾತಿಯ ಆಸೆ ತೋರಿಸಿ ಅನುಚಿತವಾಗಿ ವರ್ತಿಸಿ, ಲೈಂಗಿಕ ಕಿರುಕುಳ ನೀಡಿರುವ ಗಂಭೀರ ಆರೋಪದಡಿ ಪ್ರಾಂಶುಪಾಲ ವಿಜಯಕುಮಾರ ಅಂಗಡಿ ಎಂಬವರನ್ನು ಇಲ್ಲಿನ ಶಕ್ತಿನಗರ ಪೊಲೀಸರು ಬಂಧಿಸಿದ್ದಾರೆ.

ಪ್ರಕರಣದ ವಿವರ: ಶಕ್ತಿನಗರದ ಶಾಲೆಯೊಂದರಲ್ಲಿ ಪ್ರಾಂಶುಪಾಲರಾಗಿರುವ ವಿಜಯಕುಮಾರ ಅಂಗಡಿ ವಿರುದ್ಧ ಎಸ್​ಎಸ್​ಎಲ್​ಸಿ ವಿದ್ಯಾರ್ಥಿನಿ, "ನನ್ನ ಜೊತೆ ಅನುಚಿತವಾಗಿ ವರ್ತಿಸಿ, ಲೈಂಗಿಕ ಕಿರುಕುಳ ನೀಡಿದ್ದಾರೆ" ಎಂದು ಆರೋಪಿಸಿ ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ.

ದೂರಿನ ವಿವರ: "ವಿಜಯಕುಮಾರ ಅಂಗಡಿ ನಮ್ಮ ಸರ್​. ಕಳೆದ 6 ತಿಂಗಳಿನಿಂದ ಆಗಾಗ್ಗೆ ತಮ್ಮ ಕೊಠಡಿಗೆ ಕರೆದು ಅಸಭ್ಯವಾಗಿ ವರ್ತಿಸುವುದು, ಕರೆ ಮಾಡಿ ಅಸಭ್ಯವಾಗಿ ಮಾತನಾಡುವುದು, ವಾಟ್ಸ್‌ಆ್ಯಪ್​ನಲ್ಲಿ ಅಸಭ್ಯ ಪದಗಳಿಂದ ಚಾಟಿಂಗ್ ಮಾಡುತ್ತಿದ್ದಾರೆ. 2023ರ ಮಾರ್ಚ್​16ರಂದು ಮಧ್ಯಾಹ್ನ 1 ಗಂಟೆಗೆ ಶಾಲೆಯ ಚೇಂಬರ್​ಗೆ ನನ್ನನ್ನು ಕರೆಸಿದ್ದರು. ನೀನು ನನಗೆ ಸಹಕರಿಸು, ಒಳ್ಳೆಯ ಅಂಕ ನೀಡುತ್ತೇನೆ. ರಾಯಚೂರಿನಲ್ಲಿ ಮುಂದಿನ ವಿದ್ಯಾಭ್ಯಾಸಕ್ಕೆ ಒಳ್ಳೆಯ ಕಾಲೇಜಿಗೆ ಯಾವುದೇ ಫೀಸ್ ಇಲ್ಲದೇ ಅಡ್ಮಿಶನ್ ಕೊಡಿಸಿ ಸೇರಿಸುತ್ತೇನೆ ಎಂದು ಹೇಳಿದ್ದಾರೆ. ನಾನು ಭಯಗೊಂಡು ಕೊಠಡಿಯಿಂದ ಹೊರಬಂದು ಮನೆಗೆ ತೆರಳಿದೆ. ವಿದ್ಯಾಭ್ಯಾಸಕ್ಕೆ ಸಮಸ್ಯೆ ಎದುರಾಗಬಹುದೆಂದು ವಿಷಯವನ್ನು ಯಾರಿಗೂ ತಿಳಸದೆ ಸುಮ್ಮನಿದ್ದೆ. ಆದರೆ ಪ್ರಾಂಶುಪಾಲರ ದುರ್ವರ್ತನೆ ಅತಿಯಾಯಿತು. ಇದರಿಂದ ಮನನೊಂದು ನಡೆದ ವಿಷಯವನ್ನೆಲ್ಲ ತಾಯಿಗೆ ತಿಳಿಸಿದೆ" ಎಂದು ವಿವರಿಸಿದ್ದಾರೆ.

ವಿಷಯ ತಿಳಿದ ವಿದ್ಯಾರ್ಥಿನಿಯ ಪೋಷಕರಿಗೆ ಶಾಲೆಗೆ ತೆರಳಿ ಪ್ರಾಂಶುಪಾಲರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳೀಯರು, ವಿವಿಧ ಸಂಘಟನೆ ಸದಸ್ಯರು ಆರೋಪಿ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸಿದ್ದಾರೆ. ಬಳಿಕ ಪೊಲೀಸರು ಸ್ಥಳಕ್ಕಾಗಮಿಸಿ ಆರೋಪಿಯನ್ನು ವಶಕ್ಕೆ ಪಡೆದು ನಂತರ ಬಂಧಿಸಿದ್ದಾರೆ.

ಶಕ್ತಿನಗರ ಪೊಲೀಸರು ರಾಯಚೂರು ಮಹಿಳಾ ಪೊಲೀಸ್ ಠಾಣೆಗೆ ಆರೋಪಿಯನ್ನು ಒಪ್ಪಿಸಿದ್ದಾರೆ. ವಿದ್ಯಾರ್ಥಿನಿ ನೀಡಿದ ದೂರಿನ ಆಧಾರದ ಮೇಲೆ ಆರೋಪಿಯ ವಿರುದ್ಧ 20/2023 ಕಲಂ 354 (ಎ), (ಸಿ) ಐಪಿಸಿ ಮತ್ತು 8, 12, ಪೋಕ್ಸೋ ಕಾಯ್ದೆ ಹಾಗೂ 3(1)(ಆರ್​)(ಯು)(ವಿ) ಎಸಿ/ಎಸ್ ಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.

ಇದನ್ನೂ ಓದಿ: ವಿದ್ಯಾರ್ಥಿಗಳೊಂದಿಗೆ ಅಸಭ್ಯ ವರ್ತನೆ ಆರೋಪ: ಶಿಕ್ಷಕ ಅಮಾನತು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.