ETV Bharat / state

ರಸ್ತೆ ಪಕ್ಕದಲ್ಲಿ‌ದ್ದ ಸಿಮೆಂಟ್‌ ಕಲ್ಲಿಗೆ ಬೈಕ್ ಡಿಕ್ಕಿ: ರಾಯಚೂರಿನಲ್ಲಿ ಇಬ್ಬರು ಸಾವು - Road accident in Raichuru news

ರಾಯಚೂರು ತಾಲೂಕಿನ ನಲ್ಲಬಂಡಾ ಕ್ರಾಸ್ ಬಳಿ ರಸ್ತೆ ಪಕ್ಕದಲ್ಲಿ‌ ಸಿಮೆಂಟ್‌ ಕಲ್ಲಿಗೆ ಬೈಕ್ ಡಿಕ್ಕಿ ಹೊಡೆದಿದ್ದು ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ರಸ್ತೆ ಪಕ್ಕದಲ್ಲಿ‌ ಸಿಮೆಂಟ್‌ ಕಲ್ಲಿಗೆ ಬೈಕ್ ಡಿಕ್ಕಿ

author img

By

Published : Oct 15, 2021, 12:39 PM IST

Updated : Oct 15, 2021, 12:48 PM IST

ರಾಯಚೂರು: ರಸ್ತೆ ಪಕ್ಕದಲ್ಲಿ‌ ಸಿಮೆಂಟ್‌ ಕಲ್ಲಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟರೆ, ಓರ್ವ ಯುವಕ ಗಂಭೀರವಾಗಿ ಗಾಯಗೊಂಡಿದ್ದಾನೆ. ಈ ಘಟನೆ ರಾಯಚೂರು ತಾಲೂಕಿನ ನಲ್ಲಬಂಡಾ ಕ್ರಾಸ್ ಬಳಿ ನಡೆದಿದೆ.

ರಸ್ತೆ ಪಕ್ಕದಲ್ಲಿ‌ದ್ದ ಸಿಮೆಂಟ್‌ ಕಲ್ಲಿಗೆ ಬೈಕ್ ಡಿಕ್ಕಿ

ತಿಮ್ಮಾಪುರ ಬಡಾವಣೆಯ ನಿವಾಸಿಗಳಾದ ದೀಪಕ್ (22), ಹುಸೇನ್(23) ಮೃತಪಟ್ಟವರೆಂದು ಗುರುತಿಸಲಾಗಿದೆ. ಪವನ್ ಎಂಬುವವರ ತಲೆಗೆ ಬಲವಾದ ಪೆಟ್ಟು ಬಿದ್ದಿದೆ. ಇಂದು ಬೆಳಗ್ಗೆ ತುಂಟಾಪುರ ಗ್ರಾಮದಿಂದ ಬೈಕ್ ಮೇಲೆ ಬರುವಾಗ ಓವರ್ ಸ್ಪೀಡ್ ಚಾಲನೆಯಿಂದ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಗಾಯಗೊಂಡ ಯುವಕನನ್ನು ಖಾಸಗಿ‌ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನಾ ಸ್ಥಳಕ್ಕೆ ಯರಗೇರಾ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: ರಾಮನಗರ: ಕಾರು ಡಿಕ್ಕಿಯಾಗಿ ಹೂ ಮಾರುತ್ತಿದ್ದ ವ್ಯಕ್ತಿ ಸಾವು, ಇಬ್ಬರಿಗೆ ಗಾಯ

Last Updated : Oct 15, 2021, 12:48 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.