ರಾಯಚೂರು: ಸ್ಥಳೀಯ ಸಂಸ್ಥೆ ಚುನಾವಣೆಯ ಫಲಿತಾಂಶ ಪ್ರಕಟಗೊಂಡು ಎರೆಡು ವರ್ಷಗಳೇ ಕಳೆದು ಚುನಾಯಿತ ಪ್ರತಿನಿಧಿಗಳು ಆಯ್ಕೆಗೊಂಡರೂ ಅವರಿಂದ ಜನ ಸೆವೆ ಇಲ್ಲದಂತಾಗಿದೆ. ರಾಜ್ಯ ಸೇರಿದಂತೆ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಗೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಸರ್ಕಾರ ಮೀಸಲಾತಿ ಅಂತಿಮಗೊಳಿಸದ ಹಿನ್ನೆಲೆ ಸಾರ್ವಜನಿಕರು ಸೇವಾ ಹೀನರಾಹಿದ್ದಾರೆ.
ಈ ಬಗ್ಗೆ ನಗರಸಭೆ ಹಿರಿಯ ಸದಸ್ಯ ಜಯಣ್ಣ ಮಾತನಾಡಿ, ನಗರಸಭೆ ಸೇರಿದಂತೆ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆದು ಎರೆಡು ವರ್ಷಗಳೆ ಕಳೆದಿದ್ದು, ಚುನಾಯಿತ ಬಹುತೇಕ ಸ್ಥಳೀಯ ಸಂಸ್ಥೆಗಳ ವಿವಿಧ ಸ್ಥಾನಗಳಿಗೆ ರಾಜ್ಯಸರ್ಕಾವು ಮೀಸಲಾತಿ ಅಂತಿಮಗೊಳಿಸದ ಹಿನ್ನೆಲೆ ಜನ ಸಾಮಾನ್ಯರಿಗೆ ತೊಂದರೆಯಾಗುತ್ತಿದೆ. ನಾವು ಸಣ್ಣಪುಟ್ಟ ಕೆಲಸ ಕಾರ್ಯಗಳಿಗೂ ಅಧೀಕಾರಿಗಳಿಗೆ ದುಂಬಾಲು ಬಿಳುವಂತಾಗಿದೆ. ಸರ್ಕಾರದ ಯಾವುದೇ ಸೌಲಭ್ಯ ದೊರೆಯಬೇಕಾದರೂ ಪ್ರತಿನಿಧಿಗಳ ಮೂಲಕ ಹೋಗಬೇಕಾಗಿದ್ದು, ಸರ್ಕಾರದ ನಿರ್ಲಕ್ಷ್ಯ ನಮ್ಮನ್ನು ಸಂಕಷ್ಟಕ್ಕೆ ಸಿಲುಕಿಸಿದೆ ಎಂದರು.
2018 ರ ಅಗಸ್ಟ್ ನಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆದಿದ್ದು, ಸೆಪ್ಟೆಂಬರ್ 3 ರಂದೇ ಚುನಾವಣೆ ಫಲಿತಾಂಶವೂ ಬಂದಿದೆ ಅಂದಿನಿಂದ ಎರೆಡು ವರ್ಷಗಳೇ ಕಳೆದಿದ್ದು, ಇಲ್ಲಿಯವರೆಗೂ ಮೀಸಲಾತಿ ಕುರಿತು ಯಾವುದೇ ಅಂತಿಮ ನಿರ್ಧಾರ ಸರ್ಕಾರ ಕೈಗೊಂಡಿಲ್ಲ ಈ ಹಿನ್ನೆಲೆ ನೇಮಕಾತಿ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ.