ಲಿಂಗಸುಗೂರು: ನಿವೃತ್ತ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಕೈಗೆತ್ತಿಕೊಂಡು ಈ ಬಾರಿ ಅಧಿವೇಶನದಲ್ಲಿ ಚರ್ಚಿಸಲು ಆಗ್ರಹಿಸಿ ಮಾದಿಗ ದಂಡೋರ ಸಮಿತಿ ಸದಸ್ಯರು ಮನವಿ ಸಲ್ಲಿಸಿದರು.
ರಾಜ್ಯ ಸಮಿತಿ ಕರೆ ಮೇರೆಗೆ ಲಿಂಗಸುಗೂರು ಕ್ಷೇತ್ರದ ಶಾಸಕ ಡಿ.ಎಸ್.ಹೂಲಗೇರಿ ನಿವಾಸದ ಮುಂದೆ ಧರಣಿ ನಡೆಸಿದ ಸದಸ್ಯರು, ಆಪ್ತ ಸಹಾಯಕರಾದ ಶರಣಬಸವ ಮತ್ತು ಪರಶುರಾಮ ಅವರ ಮೂಲಕ ಮನವಿ ಸಲ್ಲಿಸಿ ಹೋರಾಟಕ್ಕೆ ಬೆಂಬಲಿಸುವಂತೆ ಕೋರಿದರು. ಎರಡು ದಶಕಗಳಿಂದ ಅವಿರತ ಹೋರಾಟದ ಫಲವಾಗಿ ಆಯೋಗ ರಚನೆಗೊಂಡು ವರದಿ ಕೂಡ ಸಲ್ಲಿಕೆ ಆಗಿದೆ. ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ಒಳ ಮೀಸಲಾತಿ ಅನುಷ್ಠಾನ ವಿಳಂಬವಾಗುತ್ತಿದ್ದು ಶಾಸಕರು ಪಕ್ಷಾತೀತ, ಜಾತಿ ರಹಿತವಾಗಿ ಬೆಂಬಲಿಸುವಂತೆ ಆಗ್ರಹಪಡಿಸಿದರು.
ಮೋಹನ್ ಗೋಸ್ಲೆ ನೇತೃತ್ವದಲ್ಲಿ ಮನವಿ ಸಲ್ಲಿಸಿ ಈ ಬಾರಿ ಅಧಿವೇಶನದಲ್ಲಿ ಸದಾಶಿವ ಆಯೋಗದ ವರದಿ ಚರ್ಚೆಗೆ ತರಲು ಶ್ರಮಿಸಬೇಕು. ಅಧಿವೇಶನದಲ್ಲಿ ಚರ್ಚಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂದು ಒತ್ತಾಯಿಸಿದರು.