ರಾಯಚೂರು: ಬಾಂಗ್ಲಾದ ಇಬ್ಬರು ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರವೆಸಗಿದ ಆರೋಪಿಯನ್ನ ಸೆರೆ ಹಿಡಿಯುವಲ್ಲಿ ಸಿಂಧನೂರು ಗ್ರಾಮೀಣ ಠಾಣೆ ಪೊಲೀಸರು ಯಶ್ವಸಿಯಾಗಿದ್ದಾರೆ.
ಜಿಲ್ಲೆಯ ಸಿಂಧನೂರು ತಾಲೂಕಿನ ಆರ್.ಎಚ್. ಕ್ಯಾಂಪ್- 2ರಲ್ಲಿ 2020 ಫೆ.25ರಂದು ಇಬ್ಬರು ಅಪ್ರಾಪ್ತ ಬಾಲಕಿಯರನ್ನ, ಅದೇ ಕ್ಯಾಂಪ್ನಲ್ಲಿದ್ದ ಅರುಣರಾಯ್ ಠಾಕೂರ್ (50) ಅತ್ಯಾಚಾರ ಎಸಗಿದ್ದ. ಆರೋಪಿ ತನ್ನ ಜನರಲ್ ಸ್ಟೋರ್ನ ಅಂಗಡಿಯೊಳಗೆ ಕರೆದುಕೊಂಡು ಹೋಗಿ ಇಬ್ಬರು ಬಾಲಕಿಯರ ಬಾಯಿಗೆ ಬಟ್ಟೆ ಕಟ್ಟಿ ಅತ್ಯಾಚಾರ ಮಾಡಿದ್ದ. ಬಳಿಕ ಆ ಬಾಲಕಿಯರಿಗೆ ಪ್ಲಾಸ್ಟಿಕ್ ಸರ, ಕಿವಿಯ ಓಲೆ, ಮೇಕಪ್ ಸಾಮಗ್ರಿಗಳನ್ನ ನೀಡಿ ಈ ವಿಷಯವನ್ನ ಯಾರಿಗೂ ಹೇಳದಂತೆ ಬಾಲಕಿಯರಿಗೆ ಬೆದರಿಕೆ ಹಾಕಿದ್ದಾನೆ.
ಘಟನೆ ನಡೆದ 11 ದಿನಗಳ ಬಳಿಕ ಬಾಲಕಿರ ಮನೆಗೆ ಈ ವಿಷಯ ತಿಳಿದಿದೆ. ಬಾಲಕಿಯರ ಪೋಷಕರು 2020 ಮಾ.7ರಂದು ಸಿಂಧನೂರು ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನ ಆಧಾರದ ಮೇಲೆ ಪ್ರಕರಣ ಬೇಧಿಸಿದ ಪೊಲೀಸರು ಆರೋಪಿಯನ್ನ ಬಳ್ಳಾರಿಯಲ್ಲಿ ಬಂಧನ ಮಾಡಿದ್ದಾರೆ. ಅಲ್ಲದೇ ತನ್ನನ್ನು ಯಾರೂ ಗುರುತು ಹಿಡಿಯಬಾರದೆಂದು ಕಾವಿ ಬಟ್ಟೆ ಧರಿಸಿ ಓಡಾಡುತ್ತಿದ್ದ. ಪೊಲೀಸರು ಆರೋಪಿಯನ್ನ ಸೆರೆ ಹಿಡಿದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಸಿಂಧನೂರು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.