ರಾಯಚೂರು : ಜಿಲ್ಲೆಯ ಲಿಂಗಸುಗೂರಿನ ರಾಜ್ಯಸಭಾ ಸದಸ್ಯ ಅಶೋಕಗಸ್ತಿ ಅವರ ತಾಯಿ ವೆಂಕಮ್ಮ ಕೃಷ್ಣಯ್ಯ (75) ಇಂದು ಹೃದಯಘಾತದಿಂದ ನಿಧನರಾಗಿದ್ದಾರೆ.
ಮೃತರಿಗೆ ಅಶೋಕ ಗಸ್ತಿ ಸೇರಿದಂತೆ ಮೂವರು ಪುತ್ರರು ಹಾಗೂ ಓರ್ವ ಪುತ್ರಿ ಇದ್ದಾರೆ. ಸೋಮವಾರ ಮಧ್ಯಾಹ್ನ ಲಿಂಗಸುಗೂರಲ್ಲಿ ಇವರ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.