ETV Bharat / state

Job Alert: ರಾಯಚೂರು ಜಿಲ್ಲಾ ಪಂಚಾಯತಿಯಲ್ಲಿದೆ ಉದ್ಯೋಗ; 35 ಸಾವಿರ ರೂಪಾಯಿ ವೇತನ

author img

By

Published : Jul 19, 2023, 12:21 PM IST

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಈ ಹುದ್ದೆಗಳ ಭರ್ತಿ ನಡೆಯಲಿದೆ.

Raichur Zilla panchayat job recruitment For mgnrega scheme

ರಾಯಚೂರು ಜಿಲ್ಲಾ ಪಂಚಾಯತ್​ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಮೆರಿಟ್‌ ಆಧಾರದ ಮೇಲೆ ನೇಮಕಾತಿಗೆ ಅರ್ಜಿ ಕರೆಯಲಾಗಿದೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಈ ಹುದ್ದೆಗಳ ಭರ್ತಿ ನಡೆಯುತ್ತದೆ. ಹುದ್ದೆಗಳು ತಾತ್ಕಾಲಿಕವಾಗಿದ್ದು ಹೊರಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಲಾಗುತ್ತದೆ.

ಹುದ್ದೆಗಳ ವಿವರ : ರಾಯಚೂರು ಜಿಲ್ಲಾ ಪಂಚಾಯತ್​ನಿಂದ ಮನರೇಗಾ ಅಡಿಯಲ್ಲಿ ಬ್ಲಾಕ್​ ಲೈವ್ಲಿಹುಡ್​​ ಎಕ್ಸ್​ಪರ್ಟ್​​, ಬ್ಲಾಕ್​ ಎನ್​ಆರ್​ಎಂ ಎಕ್ಸ್​​ಪರ್ಟ್ ಸೇರಿದಂತೆ ಒಟ್ಟು 8​​ ಹುದ್ದೆಗಳು.

ವಿದ್ಯಾರ್ಹತೆ : ಮಾಹಿತಿ ವಿಜ್ಞಾನ, ರಿಮೋಟ್​ ಸೆನ್ಸಿಂಗ್​ ಮತ್ತು ಜಿಐಎಸ್​/ಜಿಇಒ ಸ್ಪೇಷಿಯಲ್​ ಟೆಕ್ನಾಲಜಿ ಸೇರಿದಂತೆ ಇನ್ನಿತರ ವಿಷಯದಲ್ಲಿ ಬಿಇ, ಬಿಟೆಕ್​ ಪದವಿ. ಬ್ಲಾಕ್​ ಲೈವ್ಲಿಹುಡ್​​ ಎಕ್ಸ್​ಪರ್ಟ್​​ ಹುದ್ದೆಗೆ ಕೃಷಿ ಆರ್ಥಿಕತೆ, ತೋಟಗಾರಿಕೆ, ಅರಣ್ಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ. ಅಭ್ಯರ್ಥಿಗಳು ಸಂಬಂಧಿಸಿದ ಕ್ಷೇತ್ರದಲ್ಲಿ ಒಂದು/ ಎರಡು ವರ್ಷದ ಅನುಭವ ಹೊಂದಿರಬೇಕು.

ವೇತನ : ಬ್ಲಾಕ್​ ಜಿಐಎಸ್​ ಎಕ್ಸ್‌ಪರ್ಟ್​ ಹುದ್ದೆಗೆ 35 ಸಾವಿರ ರೂ ಮತ್ತು ಬ್ಲಾಕ್ ಲೈವ್ಲಿಹುಡ್​ ಎಕ್ಸ್​ಪರ್ಟ್​​ ಹುದ್ದೆಗೆ 30 ಸಾವಿರ ರೂ ವೇತನವಿದೆ.

ವಯೋಮಿತಿ: 21ರಿಂದ 40 ವರ್ಷ.

ಅಭ್ಯರ್ಥಿಗಳನ್ನು ಮೆರಿಟ್​ ಲಿಸ್ಟ್​ ಮತ್ತು ಅನುಭವದ ಮೇಲೆ ಆಯ್ಕೆ ಮಾಡಲಾತ್ತದೆ. ಅರ್ಜಿ ಸಲ್ಲಿಕೆಗೆ ಯಾವುದೇ ಶುಲ್ಕ ಇಲ್ಲ. ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸುವ ವಿಧಾನ: ಜಿಲ್ಲಾ ಪಂಚಾಯತ್​​ ಹುದ್ದೆಗಳ ಭರ್ತಿಗೆ ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದು. ಇಲ್ಲಿ ಯಾವ ಜಿಲ್ಲಾ ಪಂಚಾಯತ್​ ಹುದ್ದೆಗೆ ಅರ್ಜಿ ಸಲ್ಲಿಸಲಾಗುತ್ತಿದೆ ಎಂಬುದನ್ನು ಸ್ಪಷ್ಟವಾಗಿ ನಮೂದಿಸಬೇಕು. ಬಳಿಕ ಕೇಳಲಾದ ಮತ್ತಿತರ ವಿವರಗಳನ್ನು ತುಂಬುವುದು ಕಡ್ಡಾಯ.

ಅರ್ಜಿ ಸಲ್ಲಿಕೆ ಜುಲೈ 15ರಿಂದ ಆರಂಭವಾಗಲಿದೆ. ಅಂತಿಮ ದಿನ ಜುಲೈ 24 ಆಗಿದೆ. ಆಯ್ಕೆಯ ಮೆರಿಟ್​ ಪಟ್ಟಿಯನ್ನು ಆಗಸ್ಟ್​​ 10ರಂದು ಬಿಡುಗಡೆ ಮಾಡುವ ಸಾಧ್ಯತೆ ಇದೆ. ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ ಅಭ್ಯರ್ಥಿಗಳು zpraichur.kar.nic.in ಜಾಲತಾಣಕ್ಕೆ ಭೇಟಿ ನೀಡಬಹುದು.

ಇದನ್ನೂ ಓದಿ: KEA Recruitment: ಎಫ್​ಡಿಎ, ಸಹಾಯಕರ ಹುದ್ದೆ ನೇಮಕಾತಿ.. ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಿಸಿದ ಕೆಇಎ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.