ರಾಯಚೂರು: ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಿಂದ ನೂರಾರು ಮಕ್ಕಳು ಸೇರಿದಂತೆ ಜನರು ನೀರುಪಾಲಾಗುತ್ತಿರುವ ಪ್ರಕರಣಗಳು ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದು, ಬೆಳಕಿಗೆ ಬಂದಿದೆ.
ಈ ಕುರಿತಂತೆ ಈಟಿವಿ ಭಾರತದೊಂದಿಗೆ ಮಾತನಾಡಿದ ಎಸ್ಪಿ ಡಾ.ಸಿ.ಬಿ.ವೇದಮೂರ್ತಿ ಅವರು, ಕೃಷಿ ಹೊಂಡ, ಕೆರೆ, ಬಾವಿ, ಕಾಲುವೆಯಲ್ಲಿ ಈಜಲು, ನೀರು ತರಲು ಹೋಗಿ ನೂರಾರು ಜನರು ಜೀವ ಕಳೆದುಕೊಂಡಿದ್ದು, ಇದರಲ್ಲಿ ಮಕ್ಕಳ ಸಂಖ್ಯೆಯೇ ಹೆಚ್ಚಾಗಿದೆ.
ವರ್ಷವಾರು ಮೃತಪಟ್ಟವರ ಮಾಹಿತಿ:
- 2018-2019ರ ಸಾಲಿನಲ್ಲಿ 41 ಜನ
- 2019-2020ರ ಸಾಲಿನಲ್ಲಿ 50 ಜನ
- 2020 ಪ್ರಸಕ್ತ ಸಾಲಿನಲ್ಲಿ 30 ಜನ ಸಾವನ್ನಪ್ಪಿದ್ದಾರೆ
ಈ ಮೇಲಿನ ವರದಿಯಲ್ಲಿ ಮೃತಪಟ್ಟವರಲ್ಲಿ ಮಕ್ಕಳ ಸಂಖ್ಯೆಯೇ ಹೆಚ್ಚಾಗಿದೆ. ಪುಟ್ಟ ಮಕ್ಕಳು ನೀರು ತರಲೆಂದು ಹೋದಾಗ ಆಕಸ್ಮಿಕವಾಗಿ ನೀರಿನಲ್ಲಿ ಬಿದ್ದು, ಈಜಲು ಬಾರದೇ ಸಾವನ್ನಪ್ಪಿರುವ ಉದಾಹರಣೆಗಳು ಕೂಡ ಇವೆ. ಲಾಕ್ಡೌನ್ನಿಂದಾಗಿ ಮಕ್ಕಳು ಮನೆಯಲ್ಲಿದ್ದು, ಈಜಲು ತೆರಳಿದಾಗ ನೀರುಪಾಲು ಆಗಿರುವುದು ದುರ್ಘಟನೆ ಕಾರಣವಾಗಿದೆ.
ಆದರೆ, ಕಳೆದ ಎರಡು ವರ್ಷಗಳ ಅವಧಿಯಲ್ಲಿ 91 ಜನ ಮೃತಪಟ್ಟಿದ್ದಾರೆ. ಪ್ರಸಕ್ತ ಸಾಲಿನ 5 ತಿಂಗಳಲ್ಲಿ 30 ಜನ ನೀರುಪಾಲಾಗಿದ್ದಾರೆ. ಹಾಗಾಗಿ ಪೋಷಕರು ಮಕ್ಕಳನ್ನು ಕೆರೆ, ಬಾವಿ, ಕಾಲುವೆ, ಹಳ್ಳ-ಕೊಳ್ಳಗಳಿಗೆ ತೆರಳದಂತೆ ನೋಡಿಕೊಳ್ಳಬೇಕೆಂದು ಮನವಿ ಮಾಡಿದರು.