ETV Bharat / state

ರಾಯಚೂರು ನಗರಸಭೆ ಚುನಾವಣೆ: ಅಧಿಕಾರ ಗದ್ದುಗೆ ಏರಲು ಭಾರಿ ಕಸರತ್ತು

ಸಂಸದ ಹಾಗೂ ಶಾಸಕರ ಮತಗಳು ಸೇರಿದಂತೆ ಅಧಿಕಾರ ಹಿಡಿಯಲು ಮ್ಯಾಜಿಕ್ ನಂಬರ್ 18. ಅಧ್ಯಕ್ಷ ಸ್ಥಾನ ಬಿಸಿಎಗೆ, ಉಪಾಧ್ಯಕ್ಷ ಸ್ಥಾನ ಎಸ್ಸಿ ಮಹಿಳೆಗೆ ಮೀಸಲಾಗಿದೆ. ಪಕ್ಷೇತರರಲ್ಲಿ ಬಹುತೇಕರು ಕಾಂಗ್ರೆಸ್ ಮೂಲದವರಾಗಿದ್ದರಿಂದ ಪಕ್ಷದ ಜಿಲ್ಲಾಧ್ಯಕ್ಷ ಬಿ.ವಿ.ನಾಯಕ ಅವರಲ್ಲಿ 8 ಸದಸ್ಯರ ಮನವೊಲಿಸಿ ಬೆಂಬಲ ನೀಡುವಂತೆ ಮಾಡಿದ್ದಾರೆ.

Raichur
ರಾಯಚೂರು ನಗರಸಭೆ
author img

By

Published : Oct 22, 2020, 8:15 PM IST

ರಾಯಚೂರು: ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಚುನಾವಣೆಗೆ ತಡೆ ನೀಡಿದ ನ್ಯಾಯಾಲಯದಿಂದ ಇದೀಗ ಚುನಾವಣೆಗೆ ಗ್ರೀನ್ ಸಿಗ್ನಲ್ ದೊರೆತಿದೆ. ಇದರ ಬೆನ್ನಲ್ಲೇ ರಾಜಕೀಯ ವಲಯದ ಚಟುವಟಿಕೆ ಚುರುಕುಗೊಂಡಿದೆ. ರಾಯಚೂರು ನಗರಸಭೆಯ ಅಧಿಕಾರ ಗದ್ದುಗೆ ಏರಲು ಭಾರಿ ಪೈಪೋಟಿ ನಡೆದಿದೆ.

ರಾಯಚೂರು ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯ ಕಾವು ಜೋರಾಗಿದೆ. ಅದರಲ್ಲಿ ಜಿಲ್ಲಾ ಕೇಂದ್ರ ಸ್ಥಾನದಲ್ಲಿ ರಾಯಚೂರು ನಗರಸಭೆ ಚುನಾವಣೆಯ ಅಧಿಕಾರ ಚುಕ್ಕಾಣಿ ಹಿಡಿಯಲು ಬಿಜೆಪಿ - ಕಾಂಗ್ರೆಸ್ ಮಧ್ಯೆ ಭಾರಿ ಪೈಪೋಟಿ ನಡೆದಿದ್ದು, ಇದಕ್ಕಾಗಿ ಪಕ್ಷದ ಮುಖಂಡರು ಕಸರತ್ತು ನಡೆಸುತ್ತಿದ್ದಾರೆ. ಒಟ್ಟು ಮೂವತ್ತೈದು ಸದಸ್ಯ ಬಲದ ನಗರಸಭೆಯಲ್ಲಿ ಕಾಂಗ್ರೆಸ್ 12, ಬಿಜೆಪಿ 11, ಪಕ್ಷೇತರ 9 ಹಾಗೂ ಜೆಡಿಎಸ್​ನ 3 ಸದಸ್ಯ ಬಲವಿದೆ. ಇದರಲ್ಲಿ ಜೆಡಿಎಸ್​ನ ಒಬ್ಬ ಸದಸ್ಯರು ಮೃತಪಟ್ಟಿದ್ದಾರೆ.

ಸಂಸದ ಹಾಗೂ ಶಾಸಕರ ಮತಗಳು ಸೇರಿದಂತೆ ಅಧಿಕಾರ ಹಿಡಿಯಲು ಮ್ಯಾಜಿಕ್ ನಂಬರ್ 18 ಆಗಿದ್ದು, ಅಧ್ಯಕ್ಷ ಸ್ಥಾನ ಬಿಸಿಎಗೆ, ಉಪಾಧ್ಯಕ್ಷ ಸ್ಥಾನ ಎಸ್ಸಿ ಮಹಿಳೆಗೆ ಮೀಸಲಾಗಿದೆ. ಪಕ್ಷೇತರರಲ್ಲಿ ಬಹುತೇಕರು ಕಾಂಗ್ರೆಸ್ ಮೂಲದವರಾಗಿದ್ದರಿಂದ ಪಕ್ಷದ ಜಿಲ್ಲಾಧ್ಯಕ್ಷ ಬಿ.ವಿ.ನಾಯಕ ಅವರಲ್ಲಿ 8 ಸದಸ್ಯರ ಮನವೊಲಿಸಿ ಬೆಂಬಲ ನೀಡುವಂತೆ ಮಾಡಿದ್ದಾರೆ. ಆದರೆ ಪಕ್ಷದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಮೂವರು ಆಕಾಂಕ್ಷಿಗಳಾಗಿರುವುದು ಕೈ ನಾಯಕರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಈ ಮೊದಲು ಕಾಂಗ್ರೆಸ್​ನ ಈ. ವಿನಯಕುಮಾರ ಅಧ್ಯಕ್ಷರಾಗಲು ಪಕ್ಷೇತರರನ್ನು ಸೆಳೆದುಕೊಂಡಿದ್ರು. ಆದ್ರೆ ಬರುವ ಸಾರ್ವತ್ರಿಕ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಪಕ್ಷದ ಮುಖಂಡ ರವಿ ಬೋಸರಾಜು ಪಕ್ಷೇತರ ಸದಸ್ಯ ಸಾಜೀದ್ ಸಮೀರ್ನನ್ನು ಅಧ್ಯಕ್ಷರನ್ನಾಗಿ ಮಾಡಲು ಮುಂದಾಗಿರುವುದು ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಜತೆಗೆ ಕಾಂಗ್ರೆಸ್​ನ ಜಿಂದಪ್ಪ ಕೂಡಾ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿರುವುದು ಪಕ್ಷದ ಮುಖಂಡರಿಗೆ ಕಗ್ಗಂಟಾಗಿದೆ.

ಈ. ವಿನಯ ಕುಮಾರ್​ನನ್ನು ಅಧ್ಯಕ್ಷನನ್ನಾಗಿ ಮಾಡದಿದ್ದರೆ ಬಂಡಾಯ ಏಳುವ ಸಾಧ್ಯತೆಗಳು ಕಂಡು ಬರುತ್ತಿದ್ದು, ಐವರು ಪಕ್ಷೇತರ ಹಾಗೂ ಬಿಜೆಪಿ ಸದಸ್ಯರ ಬೆಂಬಲದೊಂದಿಗೆ ಅಧ್ಯಕ್ಷರಾಗುವುದಕ್ಕೆ ಪ್ರಯತ್ನಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ನಾಯಕರು ಉಳಿದಿರುವ ಅಧಿಕಾರಾವಧಿಯಲ್ಲಿ ಅರ್ಧ ಸಾಜೀದ್ ಸಮೀರ್ ಮತ್ತು ಇನ್ನರ್ಧ ಈ.ವಿಜಯಕುಮಾರ ಅಧ್ಯಕ್ಷರಾಗುವಂತೆ ಮನವೊಲಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಇದಕ್ಕೆ ಇಬ್ಬರು ಒಪ್ಪುತ್ತಾರಾ ಎನ್ನುವುದೇ ಈಗಿರುವ ಕುತೂಹಲ.

ಬಿಜೆಪಿಯಲ್ಲಿ ಬಿಸಿಎಗೆ ಸೇರಿದ ಇ. ಶಶಿರಾಜ ಮತ್ತು ಲಲಿತಾ ಕಡಗೋಲ ಇದ್ದರೂ ಪಕ್ಷೇತರರನ್ನು ಸೆಳೆಯುವಷ್ಟು ಆರ್ಥಿಕವಾಗ ಪ್ರಬಲವಿಲ್ಲ ಎಂಬ ಮಾತುಗಳು ಕೇಳಿಬರುತ್ತಿದೆ. ಹೀಗಾಗಿ ಬಿಜೆಪಿ ಉಪಾಧ್ಯಕ್ಷ ಸ್ಥಾನ ದೊರೆತರೆ ಸಾಕು ಎನ್ನುವ ಮಾತುಗಳು ಸಹ ರಾಜಕೀಯದಲ್ಲಿ ಕೇಳಿ ಬರುತ್ತಿವೆ. ಎಸ್ಸಿ ಮಹಿಳೆಗೆ ಮೀಸಲಾಗಿರುವ ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್​ನ ನರಸಮ್ಮ ಮಾಡಗಿರಿ ಹಾಗೂ ಪಕ್ಷೇತರರಾದ ಹೇಮಲತಾ ಬೂದೆಪ್ಪ ಇದ್ದಾರೆ. ಬಿಜೆಪಿಯಲ್ಲಿ ಉಮಾ ಜಲ್ದಾರ್ ಪ್ರಬಲ ಆಕಾಂಕ್ಷಿಯಾಗಿದ್ದು, ಯಾರಿಗೆ ಅದೃಷ್ಠ ಒಲಿಯಲಿದೆ ಎನ್ನುವುದು ಸಾಧ್ಯ ಕುತೂಹಲ ಕೆರಳಿಸಿದೆ ಜತೆಗೆ ಈಗಾಗಲೇ ನಗರಸಭೆಯ ಸದ್ಯಸರು ಬೆಂಗಳೂರಿಗೆ ತೆರಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.