ETV Bharat / state

ರಾಯಚೂರು ನಗರಸಭೆಯಿಂದ ಸಾರ್ವಜನಿಕರ ತೆರಿಗೆ ಹಣ ದುರುಪಯೋಗ ಆರೋಪ

ಸಾರ್ವಜನಿಕರ ತೆರಿಗೆ ಕಟ್ಟುವ ಹಣವನ್ನ ಕಾಮಗಾರಿ ಹೆಸರಿನಲ್ಲಿ ನಕಲಿ ಕಡತಗಳನ್ನ ಸೃಷ್ಟಿಸಿ ಅಧಿಕಾರಿಗಳು, ನೌಕರರ ಅಡ್ವಾನ್ಸ್ ಹಣ ತೆಗೆದುಕೊಂಡು ವೋಚರ್ ಸಲ್ಲಿಸದೇ ಕರ್ತವ್ಯ ನಿರ್ವಹಿಸಿ ನಗರಸಭೆಗೆ ವಂಚನೆ ಮಾಡಿದ್ದಾರೆ. ಪೌರಾಯುಕ್ತರುಗಳು ಮುಂಚಿತವಾಗಿ ಹಣವನ್ನ ನೀಡಿದ್ದು, ಅಧಿಕಾರಿಗಳು, ನೌಕರರು ಮುಂಗಡ ಹಣ ಪಡೆದು ಸ್ವಂತ ಖರ್ಚಿಗೆ ಬಳಸಿಕೊಂಡಿದ್ದಾರೆ. ಯಾರಾರು ಎಷ್ಟು ಹಣ ಪಡೆದಿದ್ದಾರೆ ಎಂಬ ಪ್ರತಿಯೊಂದಿಗೆ ವರದಿಯನ್ನ ಸಲ್ಲಿಸಲಾಗಿದೆ..

raichur
ರಾಯಚೂರು ನಗರಸಭೆ
author img

By

Published : Jul 9, 2021, 11:14 AM IST

ರಾಯಚೂರು : ಸ್ಥಳೀಯ ಸಂಸ್ಥೆಗಳು ಸಾರ್ವಜನಿಕ ಸೇವೆಯ ಮೂಲ ಸೌಕರ್ಯ ಕಲ್ಪಿಸುವ ಜತೆಯಲ್ಲಿ ಆರ್ಥಿಕವಾಗಿ ಸಂಕಷ್ಟದ ಸುಳಿಗೆ ಸಿಲುಕದಂತೆ ಆಡಳಿತವನ್ನ ಮುಂದುವರಿಸಿಕೊಂಡು ಹೋಗಬೇಕು. ಆದ್ರೆ, ರಾಯಚೂರು ನಗರಸಭೆಯ ಅಧಿಕಾರಿ ವರ್ಗ ಹಾಗೂ ಸಿಬ್ಬಂದಿ 2 ಕೋಟಿ 30 ಲಕ್ಷ ರೂಪಾಯಿನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಜಿಲ್ಲಾ ನಗರಾಭಿವೃದ್ದಿ ಕೋಶ ಯೋಜನಾ ನಿರ್ದೇಶಕರು ಬೆಂಗಳೂರು ಪೌರಾಡಳಿ ನಿರ್ದೇಶಾನಲಯಕ್ಕೆ ವರದಿ ಸಲ್ಲಿಸಿದ್ದಾರೆ.

ರಾಯಚೂರು ನಗರಸಭೆಯಲ್ಲಿ ಕಳೆದ 4 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿರುವ ವ್ಯವಸ್ಥಾಪಕರು, ಕಿರಿಯ ಅಭಿಯಂತರರು, ನೈಮಲ್ಯ ಅಧಿಕಾರಿ, ಪರಿಸರ ಅಭಿಯಂತರರು, ಡಿದರ್ಜೆ ನೌಕರರು, ದಿನಗೂಲಿ ನೌಕರರು, ಸಮಾನ ವೇತನದಲ್ಲಿ ಕೆಲಸ ಮಾಡುವ ಸಿಬ್ಬಂದಿ ಮತ್ತು ಕಾನೂನು ಸಲಹೆಗಾರರು ಸೇರಿದಂತೆ ಹಲವರು 2006ರ ಜಾರಿಗೆ ಬಂದ ಕರ್ನಾಟಕ ಮುನಿಸಿಪಾಲ್ ಅಕೌಂಟಿಂಗ್ ಮತ್ತು ಬಜ್ಡಜೆಟಿಂಗ್ ರೂಲ್ಸ್ ( ಕೆಎಂಎಬಿಆರ್), ಕರ್ನಾಟಕ ಪಾರದರ್ಶಕ ಕಾಯಿದೆ 1999 ಮತ್ತು ನಿಯಮ 2000ರ ವಿರುದ್ಧವಾಗಿ ಲಕ್ಷಾಂತರ ರೂ. ಸಾರ್ವಜನಿಕರ ತೆರಿಗೆ ಹಣವನ್ನ ಮುಂಗಡವಾಗಿ ಪಡೆಯುವ ಮೂಲಕ ನಗರಸಭೆಗೆ ತೀವ್ರ ಆರ್ಥಿಕ ನಷ್ಟ ಉಂಟು ಮಾಡಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಸಾರ್ವಜನಿಕರ ತೆರಿಗೆ ಕಟ್ಟುವ ಹಣವನ್ನ ಕಾಮಗಾರಿ ಹೆಸರಿನಲ್ಲಿ ನಕಲಿ ಕಡತಗಳನ್ನ ಸೃಷ್ಟಿಸಿ ಅಧಿಕಾರಿಗಳು, ನೌಕರರ ಅಡ್ವಾನ್ಸ್ ಹಣ ತೆಗೆದುಕೊಂಡು ವೋಚರ್ ಸಲ್ಲಿಸದೇ ಕರ್ತವ್ಯ ನಿರ್ವಹಿಸಿ ನಗರಸಭೆಗೆ ವಂಚನೆ ಮಾಡಿದ್ದಾರೆ. ಪೌರಾಯುಕ್ತರುಗಳು ಮುಂಚಿತವಾಗಿ ಹಣವನ್ನ ನೀಡಿದ್ದು, ಅಧಿಕಾರಿಗಳು, ನೌಕರರು ಮುಂಗಡ ಹಣ ಪಡೆದು ಸ್ವಂತ ಖರ್ಚಿಗೆ ಬಳಸಿಕೊಂಡಿದ್ದಾರೆ. ಯಾರಾರು ಎಷ್ಟು ಹಣ ಪಡೆದಿದ್ದಾರೆ ಎಂಬ ಪ್ರತಿಯೊಂದಿಗೆ ವರದಿಯನ್ನ ಸಲ್ಲಿಸಲಾಗಿದೆ.

ನಗರಸಭೆಯ ಅನುದಾನದಲ್ಲಿ ನಗರದ ಜನತೆ ಮೂಲಸೌಲಭ್ಯ ಸೇರಿದಂತೆ ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುವ ಮೆಚ್ಚುಗೆ ಪಾತ್ರವಾಗಬೇಕಾದ ನಗರಸಭೆ ನೌಕರರು, ಇದೀಗ ಸಾರ್ವಜನಿಕರ ಕಟ್ಟುವ ತೆರಿಗೆ ಹಣ ಹಾಗೂ ಸರ್ಕಾರ ಅನುದಾನವನ್ನ ಕೊಳ್ಳೆ ಹೊಡೆದಿದ್ದು, ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ ಎನ್ನುವಂತೆ ಹಣವನ್ನ ಸ್ವಂತ ಜೇಬಿಗೆ ಇಳಿಸಿಕೊಂಡಿದ್ದಾರೆ. ಇನ್ನೂ ಹಣವನ್ನ ಮುಂಚಿತವಾಗಿ ಬಿಡುಗಡೆ ಮಾಡಿದ ಪೌರಾಯುಕ್ತ ಮತ್ತು ಅಧಿಕಾರಿಗಳು ನಿವೃತ್ತಿ ಹೊಂದಿದ್ದರೆ, ಇನ್ನೂ ಕೆಲವರು ಬೇರೆ ಕಡೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ.

ಇದನ್ನೂ ಓದಿ : ಗಣಿನಾಡಿನಲಿ ಮಣ್ಣೆತ್ತಿನ ಅಮವಾಸ್ಯೆ ಸಂಭ್ರಮ : ಮಣ್ಣಿನಿಂದ ತಯಾರಿಸಿದ ಜೋಡೆತ್ತುಗಳಿಗೆ ವಿಶೇಷ ಪೂಜೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.