ETV Bharat / state

ಆಯೋಗಕ್ಕೆ ಚುನಾವಣಾ ಖರ್ಚಿನ ವಿವರ ಸಲ್ಲಿಕೆ... ಯಾವ ಅಭ್ಯರ್ಥಿಯಿಂದ ಎಷ್ಟು ಖರ್ಚು!? - undefined

ಲೋಕಸಭಾ ಚುನಾವಣೆಯಲ್ಲಿ ರಾಯಚೂರು ಜಿಲ್ಲೆಯ ಅಭ್ಯರ್ಥಿಗಳು ಖರ್ಚಿನ ಮಾಹಿತಿಯನ್ನ ಚುನಾವಣಾ ಆಯೋಗಕ್ಕೆ ನೀಡಿದ್ದಾರೆ.

ಎಂ.ಪಿ ಅಭ್ಯರ್ಥಿಗಳು
author img

By

Published : Jul 11, 2019, 7:31 AM IST

Updated : Jul 11, 2019, 8:03 AM IST

ರಾಯಚೂರು: 2019ರ ಮೇ ತಿಂಗಳಲ್ಲಿ ನಡೆದ ಲೋಕ ಸಮರದಲ್ಲಿ ಅಭ್ಯರ್ಥಿಗಳು ಇಂತಿಷ್ಟೇ ಹಣ ಖರ್ಚು ಮಾಡಬೇಕೆಂದು ಆಯೋಗ ನಿಗದಿ ಮಾಡಿತ್ತು. ಆದ್ರೆ ಆಯೋಗ ನಿಗದಿ ಪಡಿಸಿದಷ್ಟೇ ಹಣವನ್ನು ಅಭ್ಯರ್ಥಿಗಳು ವ್ಯಯಿಸಿದ್ದಾರಾ ಎಂಬುದರ ಬಗ್ಗೆ ವಿವರ ಲಭ್ಯವಾಗಿದೆ. ಈ ಕುರಿತ ಡಿಟೇಲ್ ರಿಪೋರ್ಟ್ ಇಲ್ಲಿದೆ.

ರಾಯಚೂರು ಚುನಾವಣಾ ವಿಭಾಗ

ಪರಿಶಿಷ್ಟ ಪಂಗಡಕ್ಕೆ ಮೀಸಲು ಆಗಿದ್ದ ರಾಯಚೂರು ಲೋಕಸಭೆ ಕ್ಷೇತ್ರದ ಚುನಾವಣೆಗೆ ಐವರು ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಕಣದಲ್ಲಿನ ಐವರ ಪೈಕಿ ಬಿಜೆಪಿ ರಾಜಾ ಅಮರೇಶ್ವರ ನಾಯಕ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಬಿ.ವಿ.ನಾಯಕ ಮಧ್ಯೆ ತೀವ್ರ ಪೈಪೂಟಿ ನಡೆದಿತ್ತು. ಗೆಲುವಿಗಾಗಿ ಇಬ್ಬರೂ ಕ್ಷೇತ್ರದಲ್ಲಿ ಅಬ್ಬರದ ಪ್ರಚಾರ ಕೈಗೊಂಡಿದ್ದರು.

ಅಭ್ಯರ್ಥಿಗಳ ಖರ್ಚಿನ ವಿವರ:

ಚುನಾವಣೆ ಆಯೋಗ ಒಬ್ಬ ಅಭ್ಯರ್ಥಿಗೆ ಚುನಾವಣಾ ಖರ್ಚಿಗೆ 70 ಲಕ್ಷ ರೂ. ನಿಗದಿ ಮಾಡಿತ್ತು. ಆದ್ರೆ ಅಭ್ಯರ್ಥಿಗಳು ಭರ್ಜರಿ ಪ್ರಚಾರ ಕೈಗೊಂಡರೂ 70 ಲಕ್ಷ ರೂ.ನ ಗಡಿ ದಾಟಿಲ್ಲ ಎಂಬುದು ಅಚ್ಚರಿಯ ಸಂಗತಿ.

ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ 58,72,668 ರೂ., ಕಾಂಗ್ರೆಸ್ ಅಭ್ಯರ್ಥಿ ಬಿ.ವಿ.ನಾಯಕ 45,94,512 ರೂ. ಖರ್ಚು ಮಾಡಿದ್ದಾಗಿ ಮಾಹಿತಿ ನೀಡಿದ್ದಾರೆ. ಎಸ್ಯುಸಿಐ ಅಭ್ಯರ್ಥಿ ಸೋಮಶೇಖರ 2.24 ಲಕ್ಷ ರೂ, ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿ ನಿರಂಜನ ನಾಯಕ 25,026 ರೂ, ಬಿಎಸ್ಪಿ ಅಭ್ಯರ್ಥಿ ವೆಂಕನಗೌಡ ಕೇವಲ 12,600 ಖರ್ಚು ರೂ. ಮಾಡಿರೋದಾಗಿ ಮಾಹಿತಿ ನೀಡಿದ್ದಾರೆ.

ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ, ರ್ಯಾಲಿ, ಪ್ರಚಾರ ಸಭೆಗಳಿಗಾಗಿ ಸ್ವಂತವಾಗಿ 27.32 ಲಕ್ಷ ರೂ., ಪಕ್ಷದಿಂದ 57,350 ರೂ. ಸೇರಿದಂತೆ ಒಟ್ಟು 27.89 ಲಕ್ಷ ರೂ.ಗಳನ್ನು ವೆಚ್ಚ ಮಾಡಿರುವುದಾಗಿ ಘೋಷಿಸಿದ್ದಾರೆ. ಗಂಗಾವತಿಯಲ್ಲಿ ಜರುಗಿದ ಪ್ರಧಾನಿ ಮೋದಿ ಪ್ರಚಾರ ಸಭೆಗೆ 16.02 ಲಕ್ಷ ರೂ. ಹಾಗೂ ಅಭ್ಯರ್ಥಿಯಿಂದ ಸೇರಿ ಒಟ್ಟು 18.10 ಲಕ್ಷ ರೂ. ವೆಚ್ಚ ಮಾಡಿದ್ದಾರೆ. ಚುನಾವಣೆ ಪ್ರಚಾರ ಸಾಮಗ್ರಿಗಳಿಗೆ ಪಕ್ಷದಿಂದ 2.89 ಲಕ್ಷ ರೂ. ವೆಚ್ಚ ತೋರಿಸಲಾಗಿದ್ದು, ವಾಹನಗಳಿಗಾಗಿ 9.82 ಲಕ್ಷ ರೂ. ವ್ಯಯ ಮಾಡಿದ್ದಾರೆ. ಒಟ್ಟು ವೆಚ್ಚದಲ್ಲಿ ಅಭ್ಯರ್ಥಿ ಸ್ವಂತವಾಗಿ 9.47 ಲಕ್ಷ ರೂ. ವೆಚ್ಚ ಮಾಡಿರುವ ಜತೆಗೆ 6.65 ಲಕ್ಷ ರೂ.ಗಳನ್ನು ಸಾಲವಾಗಿ ಪಡೆದಿದ್ದಾರೆ. ಪಕ್ಷದಿಂದ ಒಟ್ಟಾರೆ 40 ಲಕ್ಷ ರೂ. ಪಡೆದಿರುವುದಾಗಿ ಮಾಹಿತಿ ನೀಡಿದ್ದಾರೆ.

ಇನ್ನು ಕಾಂಗ್ರೆಸ್ ಅಭ್ಯರ್ಥಿ ಬಿ.ವಿ.ನಾಯಕ ರ್ಯಾಲಿ, ಪ್ರಚಾರ ಸಭೆಗಾಗಿ ಸ್ವಂತವಾಗಿ 13.50 ಲಕ್ಷ ರೂ. ಹಾಗೂ ಪಕ್ಷದ ವತಿಯಿಂದ 11.92 ಲಕ್ಷ ರೂ. ಖರ್ಚು ಮಾಡಿದ್ದು, ಒಟ್ಟು 25.43 ಲಕ್ಷ ರೂ.ಗಳ ವೆಚ್ಚ ತೋರಿಸಿದ್ದಾರೆ. ಪ್ರಚಾರ ಸಾಮಗ್ರಿಗಾಗಿ ಸ್ವಂತವಾಗಿ 17,900 ರೂ. ಹಾಗೂ ಪಕ್ಷದ ವತಿಯಿಂದ 1.48 ಲಕ್ಷ ರೂ. ಸೇರಿದಂತೆ ಒಟ್ಟು 1.65 ಲಕ್ಷ ರೂ. ಖರ್ಚು ವೆಚ್ಚ ತೋರಿಸಲಾಗಿದೆ. ವಾಹನಗಳಿಗೆ 12.84 ಲಕ್ಷ ರೂ. ವೆಚ್ಚ ತೋರಿಸಿದ್ದು, ಪ್ರಚಾರ ಕಾರ್ಯಕರ್ತರಿಗಾಗಿ 4.80 ಲಕ್ಷ ರೂ., ಮಾಧ್ಯಮಗಳಲ್ಲಿ ಪ್ರಚಾರ ಕಾರ್ಯಕ್ಕಾಗಿ 1.20 ಲಕ್ಷ ರೂ.ಗಳ ವೆಚ್ಚ ಭರಿಸಿರುವುದಾಗಿ ತೋರಿಸಿದ್ದಾರೆ. ಒಟ್ಟಾರೆ ಸ್ವಂತವಾಗಿ 32.53 ಲಕ್ಷ ರೂ. ಹಾಗೂ 13.40 ಲಕ್ಷ ರೂ. ಸೇರಿದಂತೆ ಒಟ್ಟು 45.94 ಲಕ್ಷ ರೂ. ಖರ್ಚು ವೆಚ್ಚಗಳನ್ನು ತೋರಿಸಿದ್ದಾರೆ. ಸ್ವಂತವಾಗಿ ಖರ್ಚು ಮಾಡಲಾದ ಹಣದಲ್ಲಿ 15 ಲಕ್ಷ ರೂ.ಗಳನ್ನು ಮತ್ತೊಬ್ಬರಿಂದ ಸಾಲ ಮಾಡಿರುವುದಾಗಿ ತಿಳಿಸಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ಅತ್ಯಧಿಕ ಮತಗಳ ಪಡೆಯುವ ಮೂಲಕ ಮುಂಚೂಣಿಯಲ್ಲಿರುವ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ, ಚುನಾವಣೆ ಖರ್ಚಿನಲ್ಲಿಯೂ ಕಾಂಗ್ರೆಸ್ ಅಭ್ಯರ್ಥಿಗಿಂತ ಮುಂದಿದ್ದಾರೆ.

Intro:ಸ್ಲಗ್: ಲೋಕಸಭೆ ಚುನಾವಣೆಯ ಅಭ್ಯರ್ಥಿಗಳ ಚುನಾವಣೆ ವಿವರ
ಫಾರ್ಮೇಟ್: ಪ್ಯಾಕೇಜ್
ರಿಪೋರ್ಟ್ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: 10-೦7-2019
ಸ್ಥಳ: ರಾಯಚೂರು
ಆಂಕರ್: 2019ರ ಮೇ ತಿಂಗಳಲ್ಲಿ ನಡೆದ ಲೋಕ ಸಮರದಲ್ಲಿ ಅಭ್ಯರ್ಥಿಗಳ ಖರ್ಚು-ವೆಚ್ಚದ ಮೇಲೆ ನಿಗಾ ಇರಿಸಿತ್ತು. ಚುನಾವಣೆಗೆ ಸ್ಪರ್ಧಿಸಿದ ಅಭ್ಯರ್ಥಿಗಳು ಚುನಾವಣೆ ಆಯೋಗ ನಿಗದಿ ಮಾಡಿದ್ದು, ರಾಯಚೂರು ಲೋಕಸಭೆ ಬಿಜೆಪಿ ಅಭ್ಯರ್ಥಿ ಅಧಿಕ ಹಣ ಖರ್ಚು ಮಾಡುವ ಮೂಲಕ ಮೊದಲ ಸ್ಥಾನದಲ್ಲಿದ್ದಾರೆ, ಅತಿ ಕಡಿಮೆ ಖರ್ಚು ಮಾಡುವ ಬಿಎಸ್ ಪಿ ಅಭ್ಯರ್ಥಿ ಕೊನೆಯ ಸ್ಥಾನದಲ್ಲಿದ್ದಾರೆ. ಈ ಕುರಿತು ಡಿಟೇಲ್ ರಿಪೋರ್ಟ್ ಇಲ್ಲಿದೆ ನೋಡಿ.
Body:ವಾಯ್ಸ್ ಓವರ್.1: ಪರಿಶಿಷ್ಟ ಪಂಗಡಕ್ಕೆ ಮೀಸಲು ಆಗಿದ್ದ ರಾಯಚೂರು ಲೋಕಸಭೆ ಕ್ಷೇತ್ರದ ಚುನಾವಣೆಗೆ ಐವರು ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ರು. ಕಣದಲ್ಲಿನ ಐವರ ಪೈಕಿ ಬಿಜೆಪಿ ರಾಜಾ ಅಮರೇಶ್ವರ ನಾಯಕ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಬಿ.ವಿ.ನಾಯಕ ಮಧ್ಯ ತೀವ್ರ ಪೈಪೂಟಿ ನಡೆದಿತ್ತು. ಗೆಲುವಿಗಾಗಿ ಇಬ್ಬರು ಕ್ಷೇತ್ರದಲ್ಲಿ ಅಬ್ಬರ ಪ್ರಚಾರ ಕೈಗೊಂಡಿದರು. ಪ್ರಚಾರ ಕೈಗೊಂಡ ಅಭ್ಯರ್ಥಿಗಳು ಐವರು ಅಭ್ಯರ್ಥಿಗಳಲ್ಲಿ ಬಿಜೆಪಿ, ಕಾಂಗ್ರೆಸ್, ಎಸ್ ಯುಸಿಐ ಅಭ್ಯರ್ಥಿಗಳು ಲಕ್ಷಾಂತರ ರೂಪಾಯಿ ಮಾಡಿರುವುದಾಗಿ ಲೆಕ್ಕವನ್ನ ತೋರಿಸಿದ್ದಾರೆ, ಉಳಿದ ಅಭ್ಯರ್ಥಿಗಳು ಲಕ್ಷ ರೂಪಾಯಿ ಒಳಗೆ ಖರ್ಚು ಮಾಡಿರುವುದಾಗಿ ಆಯೋಗಕ್ಕೆ ತಿಳಿಸಿದ್ದಾರೆ.
ವಾಯ್ಸ್ ಓವರ್.2: ಚುನಾವಣೆ ಆಯೋಗ ಒಬ್ಬ ಅಭ್ಯರ್ಥಿಗೆ 70 ಲಕ್ಷ ರೂಪಾಯಿ ಖರ್ಚಿಗೆ ನಿಗದಿ ಮಾಡಿತ್ತು. ನಿಗದಿ ಪಡಿಸಿದ್ದ 70 ಲಕ್ಷ ರೂಪಾಯಿ ಯಾವ ವೆಚ್ಚದ ಗಡಿಯನ್ನು ದಾಟಿಲ್ಲ. ಆದ್ರೆ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ಒಟ್ಟು 58,72,668 ರೂ.ಗಳ ಖರ್ಚು ವೆಚ್ಚ ಮಾಡಿದ್ದಾರೆ, ಕಾಂಗ್ರೆಸ್ ಅಭ್ಯರ್ಥಿ ಬಿ.ವಿ.ನಾಯಕ 45,94,512 ರೂ.ಗಳ ವ್ಯಯ ಮಾಡಿರುವ ವಿವರವನ್ನು ನೀಡಿದ್ದಾರೆ. ಎಸ್ಯುಸಿಐ ಅಭ್ಯರ್ಥಿ ಸೋಮಶೇಖರ ಒಟ್ಟು 2.24 ಲಕ್ಷ ರೂ. ಪ್ರಚಾರಕ್ಕಾಗಿ ಖರ್ಚು ಮಾಡಿದ್ದು, ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿ ನಿರಂಜನ ನಾಯಕ 25,026 ರೂ. ವೆಚ್ಚ ಮಾಡಿದ್ದಾರೆ, ಬಿಎಸ್ಪಿ ಅಭ್ಯರ್ಥಿ ವೆಂಕನಗೌಡ ಕೇವಲ 12,600 ಖರ್ಚು ಮಾಡಿದ್ದಾರೆ ಎಂದು ತೋರಿಸಿದ್ದಾರೆ.
ವಾಯ್ಸ್ ಓವರ್.3: ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ, ರ್ಯಾಲಿ, ಪ್ರಚಾರ ಸಭೆಗಳಿಗಾಗಿ ಸ್ವಂತವಾಗಿ 27.32 ಲಕ್ಷ ರೂ., ಪಕ್ಷದಿಂದ 57,350 ರೂ. ಸೇರಿದಂತೆ ಒಟ್ಟು 27.89 ಲಕ್ಷ ರೂ.ಗಳನ್ನು ವೆಚ್ಚ ಮಾಡಿರುವುದಾಗಿ ಘೋಷಿಸಿದ್ದಾರೆ. ಗಂಗಾವತಿಯಲ್ಲಿ ಜರುಗಿದ ಪ್ರಧಾನಿ ಮೋದಿ ಪ್ರಚಾರ ಸಭೆಯ 16.02 ಲಕ್ಷ ರೂ. ಹಾಗೂ ಅಭ್ಯರ್ಥಿಯಿಂದ ಸೇರಿ ಒಟ್ಟು 18.10 ಲಕ್ಷ ರೂ. ವೆಚ್ಚ ಮಾಡಿದ್ದಾರೆ. ಚುನಾವಣೆ ಪ್ರಚಾರ ಸಾಮಗ್ರಿಗಳಿಗೆ ಪಕ್ಷದಿಂದ 2.89 ಲಕ್ಷ ರೂ. ವೆಚ್ಚ ತೋರಿಸಲಾಗಿದ್ದು, ವಾಹನಗಳಿಗಾಗಿ 9.82 ಲಕ್ಷ ರೂ. ವ್ಯಯ ಮಾಡಿದ್ದಾರೆ. ಒಟ್ಟು ವೆಚ್ಚದಲ್ಲಿ ಅಭ್ಯರ್ಥಿ ಸ್ವಂತವಾಗಿ 9.47 ಲಕ್ಷ ರೂ. ವೆಚ್ಚ ಮಾಡಿರುವ ಜತೆಗೆ 6.65 ಲಕ್ಷ ರೂ.ಗಳನ್ನು ಸಾಲವಾಗಿ ಪಡೆದಿದ್ದಾರೆ. ಪಕ್ಷದಿಂದ ಒಟ್ಟಾರೆ 40 ಲಕ್ಷ ರೂ. ಪಡೆದಿರುವುದಾಗಿ ಮಾಹಿತಿ ನೀಡಿದ್ದಾರೆ.
ವಾಯ್ಸ್ ಓವರ್.4: ಇನ್ನು ಕಾಂಗ್ರೆಸ್ ಅಭ್ಯರ್ಥಿ ಬಿ.ವಿ.ನಾಯಕ ರ್ಯಾಲಿ, ಪ್ರಚಾರ ಸಭೆಗಾಗಿ ಸ್ವಂತವಾಗಿ 13.50 ಲಕ್ಷ ರೂ. ಹಾಗೂ ಪಕ್ಷದ ವತಿಯಿಂದ 11.92 ಲಕ್ಷ ರೂ. ಖರ್ಚು ಮಾಡಿದ್ದು, ಒಟ್ಟು 25.43 ಲಕ್ಷ ರೂ.ಗಳ ವೆಚ್ಚ ತೋರಿಸಿದ್ದಾರೆ. ಪ್ರಚಾರ ಸಾಮಗ್ರಿಗಾಗಿ ಸ್ವಂತವಾಗಿ 17,900 ರೂ. ಹಾಗೂ ಪಕ್ಷದ ವತಿಯಿಂದ 1.48 ಲಕ್ಷ ರೂ. ಸೇರಿದಂತೆ ಒಟ್ಟು 1.65 ಲಕ್ಷ ರೂ. ಖರ್ಚು ವೆಚ್ಚ ತೋರಿಸಲಾಗಿದೆ. ವಾಹನಗಳಿಗೆ 12.84 ಲಕ್ಷ ರೂ. ವೆಚ್ಚ ತೋರಿಸಿದ್ದು, ಪ್ರಚಾರ ಕಾರ್ಯಕರ್ತರಿಗಾಗಿ 4.80 ಲಕ್ಷ ರೂ., ಮಾಧ್ಯಮಗಳಲ್ಲಿ ಪ್ರಚಾರ ಕಾರ್ಯಕ್ಕಾಗಿ 1.20 ಲಕ್ಷ ರೂ.ಗಳ ವೆಚ್ಚ ಭರಿಸಿರುವುದಾಗಿ ತೋರಿಸಿದ್ದಾರೆ. ಒಟ್ಟಾರೆ ಸ್ವಂತವಾಗಿ 32.53 ಲಕ್ಷ ರೂ. ಹಾಗೂ 13.40 ಲಕ್ಷ ರೂ. ಸೇರಿದಂತೆ ಒಟ್ಟು 45.94 ಲಕ್ಷ ರೂ. ಖರ್ಚು ವೆಚ್ಚಗಳನ್ನು ತೋರಿಸಿದ್ದಾರೆ. ಸ್ವಂತವಾಗಿ ಖರ್ಚು ಮಾಡಲಾದ ಹಣದಲ್ಲಿ 15 ಲಕ್ಷ ರೂ.ಗಳನ್ನು ಮತ್ತೊಬ್ಬರಿಂದ ಸಾಲವಾಗಿ ಮಾಡಿರುವುದಾಗಿ ತಿಳಿಸಿದ್ದಾರೆ.
Conclusion:ವಾಯ್ಸ್ ಓವರ್.5: ಒಟ್ನಿಲ್ಲಿ, ಲೋಕಸಭೆ ಚುನಾವಣೆಯಲ್ಲಿ ಅತ್ಯಾಧಿಕ ಮತಗಳ ಪಡೆಯುವ ಮೂಲಕ ಮುಂಚೂಣಿಯಲ್ಲಿರುವ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ, ಚುನಾವಣೆ ವೆಚ್ಚದಲ್ಲಿ ಅಧಿಕವಾಗಿ ಮಾಡಿ ಮುಂಚೂಣಿಯಲ್ಲಿದ್ದಾರೆ , ಕಾಂಗ್ರೆಸ್ ಅಭ್ಯರ್ಥಿ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ ಎಂದು ಚುನಾವಣೆ ಆಯೋಗಕ್ಕೆ ತೋರಿಸಿದ ಸಲ್ಲಿಸಿದ ಲೆಕ್ಕ ವಿವರದಿಂದ ತಿಳಿದು ಬಂದಿದೆ.
Last Updated : Jul 11, 2019, 8:03 AM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.