ETV Bharat / state

ರಾಯಚೂರು: ಮತ್ತೆ ಬೆಂಗಳೂರತ್ತ ಮುಖ ಮಾಡಿದ ಕೂಲಿ ಕಾರ್ಮಿಕರು - Lingasuguru in Raichur

ಲಿಂಗಸುಗೂರು ತಾಲೂಕು ಕೇಂದ್ರದಿಂದ ಬೆಂಗಳೂರು ಸೇರಿದಂತೆ ವಿವಿಧ ನಗರ ಪ್ರದೇಶಗಳತ್ತ ಕೂಲಿ ಕಾರ್ಮಿಕರು ಮತ್ತೆ ಕೆಲಸ ಅರಸಿ ಪ್ರಯಾಣ ಆರಂಭಿಸಿದ್ದಾರೆ.

Raichur: Labors return banglore in search of work
ರಾಯಚೂರು: ಮತ್ತೆ ಬೆಂಗಳೂರತ್ತ ಮುಖ ಮಾಡಿದ ಕೂಲಿ ಕಾರ್ಮಿಕರು
author img

By

Published : May 20, 2020, 4:00 PM IST

ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲೂಕು ಕೇಂದ್ರದಿಂದ ಬೆಂಗಳೂರು ಸೇರಿದಂತೆ ವಿವಿಧ ನಗರ ಪ್ರದೇಶಗಳತ್ತ ಕೂಲಿ ಕಾರ್ಮಿಕರು ಮತ್ತೆ ಕೆಲಸ ಅರಸಿ ಪ್ರಯಾಣ ಆರಂಭಿಸಿದ್ದು ಕಂಡು ಬಂತು.

ರಾಯಚೂರು: ಮತ್ತೆ ಬೆಂಗಳೂರತ್ತ ಮುಖ ಮಾಡಿದ ಕೂಲಿ ಕಾರ್ಮಿಕರು

ಕೆಲ ದಿನಗಳಿಂದ ಆರಂಭಗೊಂಡಿರುವ ಸಾರಿಗೆ ಸಂಚಾರ ಮಂಗಳವಾರದಿಂದ ಹಂತ ಹಂತವಾಗಿ ಹೆಚ್ಚುತ್ತಾ ಸಾಗಿದೆ. ಇಂದು ಬೆಂಗಳೂರು, ಶಿವಮೊಗ್ಗ, ಹಾವೇರಿ ಸೇರಿದಂತೆ ಜಿಲ್ಲಾ ಮತ್ತು ಕೆಲ ತಾಲೂಕು ಕೇಂದ್ರಗಳಿಗೆ ವಿವಿಧ ಘಟಕಗಳಿಂದ ಬಸ್ ಆರಂಭಗೊಂಡಿವೆ. ಹಾಗೇ ಬಸ್ ಸೀಟುಗಳನ್ನು ಕಾಯ್ದಿರಿಸುವ ಕೇಂದ್ರವೂ ಆರಂಭಗೊಂಡಿದೆ.

ಬಸ್​​ನಲ್ಲಿ ಪ್ರಯಾಣಿಸುವವರ ಆರೋಗ್ಯ ತಪಾಸಣೆ, ಸಾನಿಟೈಸರ್ ಬಳಕೆ, ಮಾಸ್ಕ್​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಂಡು ಪ್ರಯಾಣಿಸುವ ವ್ಯವಸ್ಥೆ ಅಚ್ಚುಕಟ್ಟಾಗಿ ನಡೆದಿದೆ.

ಈ ಬಗ್ಗೆ ಸಾರಿಗೆ ಘಟಕ ವ್ಯವಸ್ಥಾಪಕ ಪ್ರಕಾಶ ದೊಡ್ಡಮನಿ ಮಾತನಾಡಿ, ಸಾರಿಗೆ ಸಂಸ್ಥೆಗಳ ಹಿರಿಯ ಅಧಿಕಾರಿಗಳ ನಿರ್ದೇಶನದ ಮೇರೆಗೆ ಹಂತ ಹಂತವಾಗಿ ಬಸ್ ಆರಂಭ ಮಾಡುತ್ತಿದ್ದೇವೆ. ರಾಜಧಾನಿ ಸೇರಿದಂತೆ ಮಹಾನಗರಗಳು, ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಿಗೆ ಪ್ರಯಾಣಿಸುವ ಪ್ರಯಾಣಿಕರ ಬೇಡಿಕೆ ಆಧರಿಸಿ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.