ETV Bharat / state

ಶೌಚಾಲಯದ ಕೊರತೆ ಎದುರಿಸುತ್ತಿರುವ ರಾಯಚೂರು ಸರ್ಕಾರಿ ಶಾಲೆಗಳು - ರಾಯಚೂರು ಸರ್ಕಾರಿ ಶಾಲೆ ಸಮಸ್ಯೆ

ಯಾವುದೇ ಒಂದು ಜಿಲ್ಲೆ ಸಾಮಾಜಿಕ, ಆರ್ಥಿಕವಾಗಿ ಅಭಿವೃದ್ಧಿಯಾಗಬೇಕಾದ್ರೆ ಶಿಕ್ಷಣ ತುಂಬ‌ ಮುಖ್ಯ. ಈ ನಿಟ್ಟಿನಲ್ಲಿ ರಾಯಚೂರು ಜಿಲ್ಲೆಯ ಮಕ್ಕಳು ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗುತಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

ರಾಯಚೂರು ಸರ್ಕಾರಿ ಶಾಲೆಗಳ ಸಮಸ್ಯೆಗಳು
ರಾಯಚೂರು ಸರ್ಕಾರಿ ಶಾಲೆಗಳ ಸಮಸ್ಯೆಗಳು
author img

By

Published : Dec 5, 2019, 8:59 AM IST

ರಾಯಚೂರು: ರಾಯಚೂರು ಜಿಲ್ಲೆಯ ಮಕ್ಕಳು ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗುತಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

ರಾಯಚೂರು ಸರ್ಕಾರಿ ಶಾಲೆಗಳ ಸಮಸ್ಯೆಗಳು

ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಶಿಕ್ಷಕರ ಕೊರತೆ ಒಂದೆಡೆಯಾದ್ರೆ, ಸರ್ಕಾರಿ ಶಾಲೆಗಳಲ್ಲಿ ಶೌಚಾಲಯ, ಕುಡಿಯುವ ನೀರಿನ‌ ಸಮಸ್ಯೆ, ಕೊಠಡಿಗಳ ಸಂಖ್ಯೆ ಸಹ ಕಡಿಮೆಯಿದ್ದು, ಅನೇಕ ಶಾಲೆಗಳಲ್ಲಿ ಮಕ್ಕಳು ಗುಣಾತ್ಮಕ ಶಿಕ್ಷಣದಿಂದ ವಂಚಿತರಾಗಿದ್ದಾರೆ ಎನ್ನಲಾಗುತ್ತಿದೆ.

ಇನ್ನು ಜಿಲ್ಲೆಯಲ್ಲಿನ ಪ್ರಾಥಮಿಕ ಶಾಲೆಗಳಲ್ಲಿನ‌ ಶೌಚಾಲಯದ ಸ್ಥಿತಿ ನೋಡುವುದಾದ್ರೆ, ಒಟ್ಟು 2,900 ಶೌಚಾಲಯಗಳಿವೆ. 1,293 ಗಂಡು ಮಕ್ಕಳ ಶೌಚಾಲಯಗಳಿದ್ದು,‌ 1,323 ಹೆಣ್ಣು ಮಕ್ಕಳ ಶೌಚಾಲಯಗಳಿವೆ. 125 ಹೆಣ್ಣು‌ ಮಕ್ಕಳ‌ ಶೌಚಾಲಯದ ಕೊರತೆ ಕಂಡು ಬಂದಿದೆ. ಇನ್ನು ತಾಲೂಕುವಾರು ನೋಡುವುದಾದ್ರೆ ದೇಶದಲ್ಲಿಯೇ ‌ಶೈಕ್ಷಣಿಕವಾಗಿ ಅತಿ ಹಿಂದುಳಿದ‌ ತಾಲೂಕು ಎಂಬ ಹಣೆ ಪಟ್ಟಿ ಕಟ್ಟಿಕೊಂಡ ದೇವದುರ್ಗ ತಾಲೂಕಿನಲ್ಲಿ 56 ಹೆಣ್ಣು ಮಕ್ಕಳ ಶೌಚಾಲಯದ ಕೊರತೆ ಇದ್ದು, 63 ಗಂಡು ಮಕ್ಕಳ ಶೌಚಾಲಯ ಕೊರತೆಯಿದೆ.

ಪ್ರಾಥಮಿಕ ಶಾಲೆಗಳ ಶೌಚಾಲಯದ ಕುರಿತು ನೋಡುವುದಾದ್ರೆ ದೇವದುರ್ಗದಲ್ಲಿ ಒಟ್ಟು 634 ಶೌಚಾಲಯದ ಪೈಕಿ, 254 ಗಂಡು ಮಕ್ಕಳ ಶೌಚಾಲಯವಿದೆ. 63 ಶಾಲೆಗಳಲ್ಲಿ ಗಂಡುಮಕ್ಕಳ ಶೌಚಾಲಯದ ಕೊರತೆ ಕಂಡುಬಂದಿದ್ದು, 56 ಹೆಣ್ಣು ಮಕ್ಕಳ ಶೌಚಾಲಯದ ಕೊರತೆ ಇದೆ.

ಲಿಂಗಸೂಗೂರಿನ ಒಟ್ಟು 624 ಶೌಚಾಲಯಗಳಿದ್ದು 56 ಹೆಣ್ಣು, 63 ಗಂಡು ಮಕ್ಕಳ ಶೌಚಾಲಯದ ಕೊರತೆ ಇದೆ. ಮಾನವಿ ತಾಲೂಕಿನಲ್ಲಿ 52 ಶೌಚಾಲಯ, ರಾಯಚೂರು ತಾಲೂಕಿನಲ್ಲಿ 29 , ಸಿಂಧನೂರಿನಲ್ಲಿ 18 ಶೌಚಾಲಯ‌ದ ಕೊರತೆಯಿದೆ. ಹಾಗೂ ಕೆಲವೆಡೆ ಶಾಲಾ ಕಟ್ಟಡದ ಕಾಮಗಾರಿ ವಿಳಂಬವಾಗಿ ನಡೆಯುತ್ತಿದ್ದು, ಅನೇಕ ಶಾಲೆಗಳಲ್ಲಿ ಕಂಪೌಂಡ್, ಆಟದ ಮೈದಾನವಿಲ್ಲ. ಇದರಿಂದಾಗಿ ಮಕ್ಕಳಿಗೆ ತೊಂದರೆ ಉಂಟಾಗುತ್ತಿದ್ದು, ಇನ್ನಾದರೂ ಸಂಬಂಧಪಟ್ಟವರು ಸೂಕ್ತ ಕ್ರಮ ಕೈಗೊಳ್ಳಲಿ.

Intro:ಆ ಜಿಲ್ಲೆ ರಾಜ್ಯದಲ್ಲಿಯೇ ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿ ಕಟ್ಟಿ ಕೊಂಡಿದೆ, ಜಿಲ್ಲೆಯ ಅಭಿವೃದ್ಧಿಗೆ ಶಿಕ್ಷಣವೇ ಮುಖ್ಯವಾಗಿದ್ದು ಆದ್ರೆ ಇಲ್ಲಿನ ಶಾಲೆಗಳಲ್ಲಿ ಮೂಲಭೂತ ಸೌಕರ್ಯವಿಲ್ಲದೇ ಮಕ್ಕಳು ಗುಣಾತ್ಮಕ ಶಿಕ್ಷಣದಿಂದ ವಂಚಿತರಾಗುತಿದ್ದಾರೆ.
ಆರೆ ಯಾವುದೂ ಆ ಜಿಲ್ಲೆ ಎಂದು ನಿಮ್ಮಲ್ಲಿ‌ ಪ್ರಶ್ನೆ ಮೂಡಬಹುದು ಅದುವೇ ರಾಯಚೂರು ಜಿಲ್ಲೆ.

Body:ಹೌದು,ಯಾವುದೇ ಒಂದು ಜಿಲ್ಲೆ ಸಾಮಾಜಿಕ,ಆರ್ಥಿಕ ವಾಗಿ ಅಭಿವೃದ್ಧಿ ಯಾಗಬೇಕಾದ್ರೆ ಶಿಕ್ಷಣ ತುಂಬ‌ ಮುಖ್ಯವಾಗಿದೆ ಈ ನಿಟ್ಟಿನಲ್ಲಿ ನೋಡುವುದಾದ್ರೆ ರಾಯಚೂರು ಜಿಲ್ಲೆಯಲ್ಲಿನ ಮಕ್ಕಳು ಗುಣಮಟ್ಟದಿಂದ ವಂಚಿತರಾಗುತಿದ್ದಾರೆ.
ಶಿಕ್ಷಣದ ಬುನಾದಿ ಹಂತವಾದ ಪ್ರಾಥಮಿಕ ಹಾಗೂ ಪ್ರೌಢಶಾಲೆ ಗಳಲ್ಲಿ ಶಿಕ್ಷಕರ ಕೊರತೆ ಒಂದೆಡೆಯಾದ್ರೆ ಸರಕಾರಿ ಶಾಲೆಗಳಲ್ಲಿ ಶೌಚಾಲಯ,ಕುಡಿಯುವ ನೀರಿನ‌ ಸಮಸ್ಯೆ, ಕೊಠಡಿಗಳ ಸಂಖ್ಯೆ ಕಡಿಮೆಯಿದ್ದು ಅನೇಕ ಶಾಲೆಗಳಲ್ಲಿ ಮಕ್ಕಳು ಗುಣಾತ್ಮಕ ಶಿಕ್ಷಣದಿಂದ ವಂಚಿತರಾಗಿದ್ದಾರೆ.
ಸರಕಾರ ಒಂದೆಡೆ ಶಿಕ್ಷಣವನ್ನು ಕಡ್ಡಾಯಗೊಳಿಸಿ 18 ದೊಳಗಿನ ಪ್ರತಿ ಮಕ್ಕಳು ಶಾಲೆಯಲ್ಲಿರಬೇಕು ಎಂದು ಹೇಳುತ್ತೆ ಮತ್ತೊಂದೆಡೆ ಸರಕಾರಿ ಶಾಲೆಗಳಲ್ಲಿನ ಮಕ್ಕಳು ಮೂಲಭೂತ ಸೌಕರ್ಯದಿಂದ ವಂಚಿತರಾಗುತಿದ್ದಾರೆ.
ಜಿಲ್ಲೆಯಲ್ಲಿ ಅನೇಕ ಮಕ್ಕಳು‌ ಶೌಚಾಲಯ‌ ಸೌಕರ್ಯವಿಲ್ಲ ಹಲವೆಡೆ ಇದ್ರು ಸಮರ್ಪಕ ನಿರ್ವಹಣೆಯಿಲ್ಲ‌ ಹಲವೆಡೆ ಶಾಲೆಗೆ ಬರುವ ವಿದ್ಯಾರ್ಥಿಗಳು ಮನೆಯಿಂದಲೇ ಕುಡಿಯುವ ನೀರು ತರಬೇಕಾಗಿದೆ, ಹಾಗೂ ಶಿಥಿಲಾವಸ್ಥೆ ಕಟ್ಟಡ ಗಳಿರುವ ಕಾರಣ ಅನೇಕ ಪಾಲಕರು ಮಕ್ಕಳಿಗೆ‌ ಅರ್ಧದಲ್ಲಿಯೇ ಶಾಲೆ‌ಬಿಡುವಂತಾಗಿದೆ.
ಮುಖ್ಯವಾಗಿ ಹಲವು ಪ್ರೌಢಶಾಲೆಗಳಲ್ಲಿ‌ ಮಕ್ಕಳು ಮುಖ್ಯವಾಗಿ ಹೆಣ್ಣು ಮಕ್ಕಳು ಶಾಲೆಗಳಲ್ಲಿ‌ ಶೌಚಾಲಯವಿಲ್ಲ ಎಂಬ ಕಾರಣಕ್ಕೆ ಅರ್ಧದಲ್ಲಿಯೇ ಮೊಟಕುಗೊಳಿಸುವ ಅಘಾತಕಾರಿ ಅಂಶ ಬೆಳಕಿಗೆ ಬಂದಿದೆ.
ಶಾಲೆಯಲ್ಲಿ‌ ಶೌಚಾಲಯವಿಲ್ಲದ ಕಾರಣ ಬಯಲು,ಜಾಲಿ ಗಿಡಗಳಲ್ಲಿ ಶೌಚಕ್ಕೆ ಹೋಗಬೇಕಿದ್ದು ವಿಶಜಂತುಗಳ ಕಾಟದಿಂದ ಅನೇಕ ಅನಾಹುತಗಳಾದ ಉದಾಹರಣೆಯಿದೆ.
ಜಿಲ್ಲೆಯಲ್ಲಿ ಪ್ರಾಥಮಿಕ ಶಾಲೆಗಳಲ್ಲಿನ‌ ಶೌಚಾಲಯದ ಸ್ಥಿತಿ ನೋಡುವುದಾದ್ರೆ ಒಟ್ಟು 2,900 ಶೌಚಾಲಯಗಳಿವೆ.12,93 ಗಂಡು ಮಕ್ಕಳ ಶೌಚಾಲಯ ಇವೆ, 155 ಗಂಡು ಮಕ್ಕಳಿಗೆ ಶೌಚಾಲಯವಿಲ್ಲ,‌‌ 1,323 ಹೆಣ್ಣು ಮಕ್ಕಳಿಗೆ ಶೌಚಾಲಯ ವಿದೆ, 125 ಹೆಣ್ಣು‌ ಮಕ್ಕಳ‌ ಶೌಚಾಲಯ ಕೊರತೆಯಿದೆ,
ತಾಲೂಕುವಾರು ನೋಡುವುದಾದ್ರೆ ದೇಶದಲ್ಲಿಯೇ ‌ಶೈಕ್ಷಣಿಕವಾಗಿ ಅತಿ ಹಿಂದುಳಿದ‌ ತಾಲೂಕು ಎಂಬ ಹಣೆ ಪಟ್ಟಿ ಕಟ್ಟಿಕೊಂಡ ಜಿಲ್ಲೆಯ ದೇವದುರ್ಗ ತಾಲೂಕಿನಲ್ಲಿ 56 ಹೆಣ್ಣು ಮಕ್ಕಳ ಶೌಚಾಲಯ ಕೊರತೆ, 63 ಗಂಡು ಮಕ್ಕಳ ಶೌಚಾಲಯ ಕೊರತೆಯಿದೆ.
ಪ್ರಾಥಮಿಕ ಪ್ರಾಥಮಿಕ ಶಾಲೆಗಳ ಶೌಚಾಲಯದ ಕುರಿತು ಹೇಳಬೇಕಾದ್ರೆ ದೇವದುರ್ಗ ಒಟ್ಟು 634 ಶೌಚಾಲಯದ ಪೈಕಿ ಗಂಡು ಮಕ್ಕಳ 254 ಶೌಚಾಲಯ ವಿದ್ರೆ 63 ಶಾಲೆಗಳಲ್ಲಿ ಇಲ್ಲ, 56 ಹೆಣ್ಣು ಮಕ್ಕಳ ಶೌಚಾಲಯ ವಿದ್ದು 56 ಇಲ್ಲ.
ಲಿಂಗಸೂಗೂರಿನ ಒಟ್ಟು 624 ಶೌಚಾಲಯ ಗಳಿದ್ದು 56+ 63 (ಹೆಣ್ಣು+ ಗಂಡು ) ಮಕ್ಕಳ ಶೌಚಾಲಯ ಕೊರತೆಯಿವೆ,ಮಾನವಿ ತಾಲೂಕಿನಲ್ಲಿ 27+ 25 ಒಟ್ಟು 52 ಶೌಚಾಲಯ ಕೊರತೆ, ರಾಯಚೂರು ತಾಲೂಕಿನಲ್ಲಿ 29 (19+ 11) ಶೌಚಾಲಯ ಕೊರತೆ, ಸಿಂಧನೂರು 18 ಶೌಚಾಲಯ‌ (11+7 ) ಶೌಚಾಲಯ ಕೊರತೆಯಿದೆ.
ಈ ಅಂಕಿ‌ಸಂಖ್ಯೆ ನಾವು ಹೇಳುವುದಲ್ಲ‌ಶಿಕ್ಷಣ‌ ಇಲಾಖೆಯ ದಾಖಲೆಗಳು, ಇಷ್ಟು‌ ಮಾತ್ರವಲ್ಲದೇ‌ಮಕ್ಕಳ ದೈಹಿಕ‌ ಹಾಗೂ‌ ಮಾನಸಿಕ‌‌ ವೃದ್ಧಿಗೆ ಕ್ರೀಡೆ ಹಾಗೂ ಆಟೋಟೋಪ‌ಮುಖ್ಯವಾಗಿದ್ದು ಅನೇಕ ಶಾಲೆಗಳಲ್ಲಿ‌ ಮಕ್ಕಳಿಗೆ ಆಟದ ಮೈದಾನವಿಲ್ಲ ಹಾಗೂ ಅನೇಕ ಶಾಲೆಗಳಿಗೆ ಕಂಪೌಂಡ್ ಯಿಲ್ಲದೇ ಹಂದಿ ನಾಯಿಗಳು ಒಳ ನುಗ್ಗುತ್ತವೆ ಹಾಗೂ ರಸ್ತೆಬದಿಯ ಶಾಲೆಯ ಮಕ್ಕಳಿಗೆ ಅಪಾಯ ಎದುರಿಸುವಂತಾಗಿದೆ ಆದ್ರೆ ಶಿಕ್ಷಣ ಇಲಾಖೆ ಮಾತ್ರ ಯಾವುದೇ ಸಮಸ್ಯೆ ಯಿಲ್ಲ ಎಂಬಂತೆ ಗಾಢ ನಿದ್ರೆಗೆ ಜಾರಿದೆ.
ಶಾಲೆಗಳಲ್ಲಿ ನ ಮೂಲಭೂತ ಸೌಕರ್ಯಗಳ ಕೊರತೆಯ ಬಗ್ಗೆ ಇತ್ತೀಚೆಗೆ ಮಕ್ಕಳ‌ ಹಕ್ಕುಗಳ‌‌ ರಕ್ಷಣಾ ಆಯೋಗದ ಅಧ್ಯಕ್ಷರು ಹಾಗೂ ಸದಸ್ಯರು ತೀವ್ರ ತರಾಟೆಗೆ ತೆಗೆದುಕೊಂಡಿದ್ದಲ್ಲದೇ ಸೌಲಭ್ಯ ಕಲ್ಪಿಸದಿದ್ದರೆ ಮಕ್ಕಳ ಹಕ್ಕುಗಳ ಉಲ್ಲಂಘನೆ ಆಧಾರದ ಮೇಲೆ ಕ್ರಮಕ್ಕೆ ಗುರಿಯಾಗಬೇಕಾಗುತ್ತೆ ಎಂದು ಎಚ್ಚರಿಸಿದ್ದರು.

Conclusion:ಬೈಟ್ ಸಾದಿಕ್ ಖಾನ್,ಕರ್ನಾಟಕ ರಕ್ಷಣಾ ಸೇನೆ ಅಧ್ಯಕ್ಷ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.