ETV Bharat / state

ಹಸಿದವರಿಗೆ ಅನ್ನ ನೀಡುತ್ತಿದೆ, ಬಡವರಿಗೆ ಬಂಧುವಾಗಿದೆ ಇಫಾ ಫೌಂಡೇಶನ್​! - Raichur Efa foundation

ರಾಯಚೂರಿನಲ್ಲಿರುವ ಇಫಾ ಫೌಂಡೇಶನ್​ ಸಂಸ್ಥೆ ನಿರ್ಗತಿಕರ ಹಸಿವು ತಣಿಸಿ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಅಲ್ಲದೆ 2008ರಲ್ಲಿ ಆರಂಭವಾದ ಇಫಾ ಫೌಂಡೇಶನ್ ಹಲವಾರು ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ ಬಂದಿದೆ.

ಬಡವರಿಗೆ ಬಂಧುವಾಗಿದೆ ಇಫಾ ಫೌಂಡೇಶನ್
author img

By

Published : Aug 16, 2019, 4:54 AM IST

ರಾಯಚೂರು : ನಗರದ ಇಫಾ ( education for all) ಫೌಂಡೇಶನ್​​ ಪ್ರತಿನಿತ್ಯ ನಿರ್ಗತಿಕರ ಹಸಿವು ತಣಿಸಿ ಜನರ ಮೆಚ್ಚುಗೆಗೆ ಪಾತ್ರವಾಗಿದೆ.

ಕಳೆದ ಹಲವಾರು ವರ್ಷಗಳಿಂದ ಬಡ, ನಿರ್ಗತಿಕರಿಗೆ ಮಧ್ಯಾಹ್ನ ಉಚಿತ ಊಟ ನೀಡುತ್ತಾ ಬಂದಿರುವ ಇಫಾ ಫೌಂಡೇಶನ್ ಕಚೇರಿಗೆ ನಿತ್ಯ ನೂರಾರು ಭಿಕ್ಷುಕರು, ರಿಕ್ಷಾ ಚಾಲಕರು, ವೃದ್ಧರು ಬಂದು ತಮ್ಮ ಹಸಿವು ನೀಗಿಸಿಕೊಳ್ಳುತಿದ್ದಾರೆ.

ಬಡವರಿಗೆ ಬಟ್ಟೆ ನೀಡುವ ಯೋಜನೆ:

2008ರಲ್ಲಿ ಆರಂಭವಾದ ಇಫಾ ಫೌಂಡೇಶನ್ ಹಲವಾರು ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ ಬಂದಿದೆ. ಇತ್ತೀಚಿಗೆ wall of kindness ಎಂಬ ಯೋಜನೆ ರೂಪಿಸಿ ಸಂಘ‌ಸಂಸ್ಥೆ, ದಾನಿಗಳ ಹಾಗೂ ಸಾರ್ವಜನಿಕರಿಂದ ಉಪಯೋಗಿಸಿ ಮತ್ತೊಬ್ಬರಿಗೆ ಬಳಕೆಗೆ ಯೋಗ್ಯವಾಗುವಂತಹ ಬಟ್ಟೆ, ಪಾತ್ರೆ, ಚಪ್ಪಲಿ ಹಾಗೂ ಇತರೆ ಗೃಹ ಬಳಕೆಯ ವಸ್ತುಗಳನ್ನು ಪಡೆದು ಅವಶ್ಯಕತೆ ಇದ್ದವರಿಗೆ ನೀಡುವ ವ್ಯವಸ್ತೆ ಮಾಡುತ್ತಿದೆ.

ಬಡವರಿಗೆ ಬಂಧುವಾಗಿದೆ ಇಫಾ ಫೌಂಡೇಶನ್

ಏನಿದು ಇಫಾ ಫೌಂದೇಶನ್​

2008ರಲ್ಲಿ ಆರಂಭವಾದ ಇಫಾ ಫೌಂಡೇಶನ್ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ರಕ್ತದಾನ ಶಿಬಿರ, ಉಚಿತ ಆರೋಗ್ಯ ತಪಾಸಣೆ, ಸ್ಲಂ ಜನರಿಗೆ ಉಚಿತ ಊಟ ನೀಡುವುದು, ನಿರ್ಗತಿಕ ಶವ ಸಾಗಣೆಗೆ ವಾಹನ ಸೌಲಭ್ಯ, ಉಚಿತ ಶವ ಸಂಸ್ಕಾರ ಸೇರಿದಂತೆ ಅನೇಕ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ ಸಾಮಾಜಿಕ ಜವಾಬ್ದಾರಿ ನಿರ್ವಹಿಸುತ್ತಿದೆ.

ಮುಂದಿನ ದಿನಗಳಲ್ಲಿ ವೃದ್ಧಾಶ್ರಮ, ಡಯಾಲಿಸಿಸ್ ಕೇಂದ್ರ ಸೇರಿದಂತೆ ಹಲವಾರು ಸಾಮಾಜಿಕ ಕಾರ್ಯಗಳನ್ನು ಮಾಡಲಿದ್ದೇವೆ ಎಂದು ಇಫಾ ಫೌಂಡೇಶನ್​​​ನ ಜನರಲ್ ಸೆಕ್ರೆಟ್ರಿ ಮೊಹಮ್ಮದ್ ಸಾಜಿದ್ ತಿಳಿಸಿದ್ದಾರೆ.

ಇಫಾ ಸಂಸ್ಥೆಗೆ ಹೈದ್ರಾಬಾದ್​ನ ಸನಿ ವೆಲ್ಫೇರ್ ಫೌಂಡೇಶನ್, ಕೆಎಸ್ಎಎಮ್ಇ ರಾಯಚೂರು, ಎಮ್ಎಮ್ಎಚ್ ಎಜುಕೇಶನಲ್ ಅ್ಯಂಡ್ ವೆಲ್ಪೇರ್ ಟ್ರಸ್ಟ್, ಎಮ್ಐಎಚ್​​ಜಿ ಬೆಂಗಳೂರು ಸೇರಿದಂತೆ ಇತರೆ ಸಂಸ್ಥೆಗಳು ಧನ ಸಹಾಯ ನೀಡುತ್ತಿವೆ.

Intro:ಒಂದು ಕಡೆ ತಮಗೆ ಬೇಕಾದ ಬಟ್ಟೆ ಹುಡುಕುತ್ತಿರುವ ಜನರು, ಮತ್ತೊಂದು ಕಡೆ ಸಾಲು ಸಾಲು ಕುಳಿತು ಊಟ ಮಾಡುತ್ತಿರುವ ಜನ.ಇದು ಯಾವುದೋ ಬಟ್ಟೆ ಅಂಗಡಿಯಲ್ಲಿನ ಹಾಗೂ ಯಾವುದೇ ಸಮಾರಂಭದ ದೃಷ್ಯವಲ್ಲ ಇದು ರಾಯಚೂರು ನಗರದ ಗೋಶಾಲಾ ರಸ್ತೆಯಲ್ಲಿರುವ ಇಫಾ ಫೌಂಡೇಶನ್ ಕಚೇರಿ ಬಳಿಯಬಲ ದೃಷ್ಯಗಳು.

Body:ಹೌದು,, ಮನುಷ್ಯನಿಗೆ ಬದುಕಲಿಕ್ಕೆ ವಸತಿ,ಊಟ , ಬಟ್ಟೆ ಅವಶ್ಯ ಆದ್ರೆ ನಮ್ಮ ಜಿಲ್ಲೆ ಸೇರಿದಂತೆ ಭಾರತದಲ್ಲಿ ಸ್ವಾತಂತ್ರ್ಯ ಬದೊರೆತು 7 ದಶಕವಾದ್ರೂವಕೂಡ ಇಂದಿಗೂ ಎಷ್ಟೋ ಜನರು ಒಂದೊಪ್ಪತಿನ ಊಟಕ್ಕೂ ಪರದಾಡುತಿದ್ದು ನಾವು ಕಾಣಬಹುದು. ಅನೇಕರು ತಾವು ಅಗತ್ಯಕ್ಕಿಂತ ಹೆಚ್ಚು ಗಳಿಸಿದರೂ ಬಡವರಿಗಾಗಿ ಸಹಾಯ ಮಾಡುವುದು ತೀರ ಕಮ್ಮಿ. ಆದ್ರೆ ಇದಕ್ಕೆ ಅಪವಾದ ವೆಂಬಂತೆ ರಾಯಚೂರಿನ EFA ( education for all) Foundation ಅನೇಕರಿಗೆ ಪ್ರತಿನಿತ್ಯ ಮದ್ಯಾಹ್ನದ ಊಟ ನೀಡುವ ಜೊತೆಗೆ ಬಡ,ನಿರ್ಗತಿಕರ ಹಸಿವು ತಣಿಸುತ್ತಿದೆ. ಹೌದು ಕಳೆದ ಹಲವಾರು ವರ್ಷಗಳಿಂದ ಬಡ,ನಿರ್ಗತಿಕರಿಗೆ ಮಧ್ಯಾಹ್ನ ಉಚಿತ ಊಟ ನೀಡುತ್ತಾ ಬಂದಿದೆ ಇದಕ್ಕೆ ನೂರಾರು ಸಂಖ್ಯೆ ಯಲ್ಲಿ ಬಡ,ನಿರ್ಗತಿಕರಿಗೆ ಊಟ ನೀಡುತ್ತಿದೆ ಪ್ರತಿನಿತ್ಯ ಇಫಾ ಫೌಂಡೇಶನ್ ಕಚೇರಿಗೆ ಬರುವ ನೂರಾರು ಭಿಕ್ಷುಕರು, ರಿಕ್ಷಾ ಚಾಲಕರು,ವೃದ್ಧರು ಇಲ್ಲಿಗೆ ಬಂದು ತಮ್ಮ ಹಸಿವು ನೀಗಿಸಿಕೊಳ್ಳುತಿದ್ದಾರೆ. ಬಡವರಿಗೆ,ನಿರ್ಗತಿಕರಿಗೆ ಬಟ್ಟೆ ನೀಡುವ ಯೋಜನೆ: 2008 ರಲ್ಲಿ ಆರಂಭವಾದ ಇಫಾ ಫೌಂಡೇಶನ್ ಹಲವಾರು ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ ಬಂದಿದ್ದು ಇತ್ತೀಚಿಗೆ wall of kindness ಎಂಬ ಯೋಜನೆ ರೂಪಿಸಿ ಸಂಘ‌ಸಂಸ್ಥೆ,ದಾನಿಗಳ ಹಾಗೂ ಸಾರ್ವಜನಿಕ ರಿಂದ ಉಪಯೋಗಿಸಿ ಮತ್ತೊಬ್ಬರಿಗೆ ಬಳಕೆಗೆ ಯೋಗ್ಯವಾಗುವಂತಹ ( ಮರು ಬಳಕೆಗೆ) ಬಟ್ಟೆ, ಪಾತ್ರೆ,ಚಪ್ಪಲಿ ಹಾಗೂ ಇತರೆ ಗೃಹ ಬಳಕೆಯ ವಸ್ತುಗಳು ಪಡೆದು ಅವಶ್ಯಕತೆ ಇದ್ದವರಿಗೆ ನೀಡುವ ವ್ಯವಸ್ತೆ ಮಾಡುತ್ತಿದೆ ಆ ಮೂಲಕ ಬಳಸಬಹುದಾದ ವಸ್ತುಗಳ ಬೇಗ ಕಸದ ಬುಟ್ಟಿಗೆ ಸೇರದಂತೆ ನೋಡಿಕೊಳ್ಳುತ್ತಿದೆ. ನಿಮಗೆ ಅನಿಸಬಹುದು ಬಳಸಿದ ವಸ್ತುಗಳು ಯಾರು ಬಳಸುತ್ತಾರೆ ಎಂದು ಆದ್ರೆ ಹಲವರು ಶಾಪಿಂಗ್ ಹುಚ್ಚಿನಿಂದ ವಸ್ತುವನ್ನೂ ಬಳಸಿ ಬೇಗ ಬದಲಾಯಿಸಿ ಹೊಸ ವಸ್ತುಗಳತ್ತ ಮುಖ ಮಾಡ್ತಾರೆ ಇದ್ರಿಂದ ಆ ವಸ್ತು ಇನ್ನೂ ಬಳಕೆಗೆ ಯೋಗ್ಯ ವಾಗುವಂತಿದ್ದರೂ ಕಸದ ಬುಟ್ಟಿಗೆ ಸೇರುವ ಮೂಲಕ ಪರಿಸರ ಮಾಲಿನ್ಯಕ್ಕೂ ಕಾರಣವಾಗುತ್ತದೆ ಇದನ್ನು ತಡೆದು ಬಳಸಿದ ವಸ್ತು,ಮತ್ತೊಬ್ಬರಿಗೆ ಬಳಸಲು ಯೋಗ್ಯವಾಗುವಂತಹದ್ದು ಅರ್ಹರಿಗೆ ತಲುಪಿಸುವ ಕಾರ್ಯ ಮಾಡ್ತಾಯಿದಾರೆ ಇದು ಹಲವರ ಮೆಚ್ಚಿಗೆಗೂ ಪಾತ್ರವಾಗಿದೆ. ಇಫಾ ಫೌಂಡೇಶನ್ ಅರಂಭ: 2008ರಲ್ಲಿ ಆರಂಭವಾದ ಇಫಾ ಫೌಂಡೇಶನ್ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ,ರಕ್ತದಾನ ಶಿಬಿರ,ಉಚಿತ ಆರೋಗ್ಯ ತಪಾಸಣೆ, ಸ್ಲಂ ಜನರಿಗೆ ಉಚಿತ ಊಟ ನೀಡುವುದು,ನಿರ್ಗತಿಕ ಶವ ಸಾಗಣೆಗೆ ವಾಹನ ಸೌಲಭ್ಯ,ಉಚಿತ ಶವ ಸಂಸ್ಕಾರ ಸೇರಿದಂತೆ ಇನ್ನೂ ಅನೇಕ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ ಸಾಮಾಜಿಕ ಜವಾಬ್ದಾರಿ ನಿರ್ವಹಿಸುತ್ತಿದೆ. ಮುಂದೆ ವೃದ್ಧಾಶ್ರಮ, ಡಯಾಲಿಸಿಸ್ ಕೇಂದ್ರ, ಮುಸ್ಲಿಂ ವಧು ವರರ ಕೇಂದ್ರ ಹಾಗೂ ಇತರೆ ಹಲವಾರು ಸಾಮಾಜಿಕ ಕಾರ್ಯಗಳನ್ನು ಮಾಡಲಿದ್ದೇವೆ ಎಂದು ಇಫಾ ಫೌಂಡೇಶನ್ ನ ಜನರಲ್ ಸೆಕ್ರಟ್ರಿ ಮೊಹಮ್ಮದ್ ಸಾಜಿದ್ ಈ ಟಿವಿ ಭಾರತ್ಗೆ ದೂರವಾಣಿ ಮೂಲಕ ತಿಳಿಸಿದರು. ಇದಕ್ಕೆ ಹೈದ್ರಾಬಾದ್ ನ ಸನಿ ವೆಲ್ಫೇರ್ ಫೌಂಡೇಶನ್, ಕೆಎಸ್ಎಎಮ್ಇ ರಾಯಚೂರು, ಎಮ್ಎಮ್ಎಚ್ ಎಜುಕೇಶನಲ್ ಅ್ಯಂಡ್ ವೆಲ್ಪೇರ್ ಟ್ರಸ್ಟ್, ಎಮ್ಐಎಚ್ಜಿ ಬೆಂಗಳೂರು ಸೇರಿದಂತೆ ಇತರೆ ಸಂಸ್ಥೆಗಳು ಅಗತ್ಯ ಧನ ಸಹಾಯ ನೀಡುತ್ತಿದ್ದಾರೆ ಅದೇನೆ ಇರಲಿ ಇಂದಿನ ಆದುನಿಕ ಯುಗದಲ್ಲಿ ದುರಾಸೆಗೆ ಬಿದ್ದ ಮಾನವ ತನ್ನಲ್ಲಿ ಸಾಕಷ್ಟು ಹಣ,ಆಸ್ತಿ,ಸಂಪತ್ತು ಇದ್ದರೂ ಕೂಡ ಬಡ,ನಿರ್ಗತಿಕರಿಗೆ ಸಹಾಯ ಮಾಡುವುದು ತೀರ ವಿರಳ ಇಂತಹ ಸಂದರ್ಭದಲ್ಲಿ ನೂರಾರು ಬಡ ನಿರ್ಗತಿಕರಿಗೆ ಊಟ ,ಬಟ್ಟೆ ಹಾಗೂ ಇತರೆ ಸೌಕರ್ಯ ನೀಡುವ ಮೂಲಕ ಸಾಮಾಜಿಕ ಕಳಾಕಳಿ ಮೆರೆಯುವ ಮೂಲಕ ಹಲವರ ಮೆಚ್ಚುಗೆಗೆ ಪಾತ್ರವಾಗಿದೆ. ಬೈಟ್ ಅನುಕ್ರಮವಾಗಿ. 1). ಸಿರಾಜ್, ಸ್ಥಳೀಯ ನಿವಾಸಿ ಹಾಗೂ ಸಂತ್ರಸ್ಥ. 2) ಮೊಹಮ್ಮದ್ ಸಮೀರ್,ಇಫಾ ಫೌಂಡೇಶನ್ ಸದಸ್ಯ.( ಹಿಂದಿ ಮಾತನಾಡಿದವರು,ಟೋಪಿ ಹಾಕಿಕೊಂಡ ವ್ಯಕ್ತಿ.) 3) ಗಿರಿಶ್ ಬೆಂಗಳೂರು, ವಿಸಿಟರ್.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.