ರಾಯಚೂರು : ತಾಲೂಕಿನ ಗಡಿ ಭಾಗದ ಯಾಪಲದಿನ್ನಿ ಗ್ರಾಮದಲ್ಲಿರುವ ಪೆಟ್ರೋಲ್ ಬಂಕ್ನಲ್ಲಿ ಅಕ್ರಮವಾಗಿ ಪೆಟ್ರೋಲ್ ಸಾಗಾಟ ಮಾಡಲಾಗುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ. ಪೆಟ್ರೋಲ್ ಫಿಲ್ಲಿಂಗ್ ಸ್ಟೇಶನ್ನಿಂದ ಅಕ್ರಮವಾಗಿ ಅಂದಾಜು 22 ಸಾವಿರ ಲೀಟರ್ ಪೆಟ್ರೋಲ್‌ನ ಆಂಧ್ರದ ಪಾಸಿಂಗ್ ಹೊಂದಿರುವ ಟ್ಯಾಂಕರ್ನಲ್ಲಿ ತುಂಬಿಕೊಂಡು ತೆಲಂಗಾಣಕ್ಕೆ ಸಾಗಿಸಲಾಗುತ್ತಿತ್ತು.
ಇದನ್ನು ಗಮನಿಸಿದ ಗ್ರಾಮಸ್ಥರು ತಡೆದು, ಪೆಟ್ರೋಲ್ ಬಂಕ್ ಮಾಲೀಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ರಾಮಸ್ಥರು ಪ್ರೆಟೋಲ್ ಬಂಕ್ಗೆ ತೆರಳಿದಾಗ ಪೆಟ್ರೋಲ್ ಇಲ್ಲ ಎಂದು ಹೇಳುತ್ತಿದ್ದರು. ಆದ್ರೆ, ಇರುವ ಪೆಟ್ರೋಲ್ನನ್ನು ಬೇರೆ ರಾಜ್ಯಕ್ಕೆ ಅಕ್ರಮವಾಗಿ ಸಾಗಿಸಲಾಗುತ್ತಿತ್ತು.
ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇವರ ವಿರುದ್ಧ ಕ್ರಮ ಕೈಗೊಂಡು, ಪೆಟ್ರೋಲ್-ಡೀಸೆಲ್ ದೊರೆಯುವಂತೆ ಅವಕಾಶ ಮಾಡಿಕೊಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಸೋಲಿನ ಭಯದಿಂದ ಹೆದರಿ ಹೊರಟ್ಟಿ ಬಿಜೆಪಿಗೆ ಸೇರಿದ್ದಾರೆ : ಸಲೀಂ ಅಹ್ಮದ್ ವ್ಯಂಗ್ಯ