ETV Bharat / state

ತುಂಗಭದ್ರಾ ಜಲಾಶಯದಿಂದ ನೀರು ಬಿಡುಗಡೆ: ರಾಯರ ಬೃಂದಾವನ ಜಲಾವೃತ - ಪ್ರವಾಹ ಭೀತಿ

ತುಂಗಭದ್ರಾ ನದಿಯ ಹೆಚ್ಚುವರಿ ನೀರು ನದಿಗೆ ಹರಿಸಿದ ಕಾರಣ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ರಾಯಚೂರಿನ ರಾಯರ ಬೃಂದಾವನ ಜಲಾವೃತಗೊಂಡಿದೆ.

kn_rcr_01_rayara_brudavan_mulugadde_vis_ka10035
ರಾಯರ ಬೃಂದಾವನ ಜಲಾವೃತ
author img

By

Published : Jul 27, 2021, 11:28 AM IST

Updated : Jul 27, 2021, 2:29 PM IST

ರಾಯಚೂರು: ತುಂಗಭದ್ರಾ ಜಲಾಶಯದಿಂದ ಲಕ್ಷಾಂತರ ಕ್ಯೂಸೆಕ್ ನೀರು ಹೊರಬಿಟ್ಟ ಪರಿಣಾಮ ರಾಯಚೂರು ತಾಲೂಕಿನ ಎಲೆಬಿಚ್ಚಾಲಿ ಗ್ರಾಮದ ಬಳಿಯ ರಾಯರ ಬೃಂದಾವನ ಜಲಾವೃತಗೊಂಡಿದೆ.

ಹೊಸಪೇಟೆಯ ತುಂಗಭದ್ರಾ ಜಲಾಶಯದ ಒಳಹರಿವಿನ ಪ್ರಮಾಣ ಹೆಚ್ಚಳವಾಗಿದೆ. ಹಾಗಾಗಿ, ಜಲಾಶಯದಿಂದ ಹೆಚ್ಚುವರಿ ನೀರನ್ನು ನದಿಗೆ ಹರಿಸಲಾಗ್ತಿದೆ. ಇದರಿಂದ ನದಿ ಪಾತ್ರದ ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ.

ರಾಯರ ಬೃಂದಾವನ ಜಲಾವೃತ

ಓದಿ : ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿರುವ ತುಂಗಭದ್ರಾ ಡ್ಯಾಂ - ವಿಡಿಯೋ

ಎಲೆಬಿಚ್ಚಾಲಿ ಗ್ರಾಮದ ತುಂಗಭದ್ರಾ ನದಿ ತಟದಲ್ಲಿ ಶ್ರೀರಾಘವೇಂದ್ರ ಸ್ವಾಮಿಗಳು ಜಪ ಮಾಡಿದ ಸ್ಥಳವಿದೆ. ಇಲ್ಲಿ ರಾಯರ ಬೃಂದಾವನ ಸ್ಥಾಪಿಸಲಾಗಿದೆ. ರಾಯರ ಪರಂ ಶಿಷ್ಯಾರಾದ ಅಪ್ಪಣ್ಣಾಚಾರ್ಯ ವಂಶಸ್ಥರು ಇಲ್ಲಿ ನೆಲೆಸಿದ್ದಾರೆ. ನಿತ್ಯ ನೂರಾರು ಭಕ್ತರು ಬೃಂದಾವನಕ್ಕೆ ಆಗಮಿಸಿ ರಾಯರ ದರ್ಶನ ಪಡೆದುಕೊಂಡು ಹೋಗುತ್ತಾರೆ.‌

ಪ್ರವಾಹ ಭೀತಿ ಹಿನ್ನೆಲೆ ಎಲೆಬಿಚ್ಚಾಲಿ ಗ್ರಾಮದ ನಿವಾಸಿಗಳನ್ನು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸೂಚಿಸಲಾಗಿದೆ.

Last Updated : Jul 27, 2021, 2:29 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.