ETV Bharat / state

ರಾಯಚೂರು: ಕ್ವಾರಂಟೈನ್​​ ಕೇಂದ್ರದಿಂದ ಹೊರಗಡೆ ಬಂದು ಜನರ ಓಡಾಟ! - Raichur

ನಗರದ ಹೊರವಲಯದ ಬೋಳಮಾನದೊಡ್ಡಿ ರಸ್ತೆಯಲ್ಲಿರುವ ಕ್ವಾರೆಂಟೈನ್​​ ಕೇಂದ್ರದಲ್ಲಿ ಕ್ವಾರಂಟೈನ್​ನಲ್ಲಿರುವ ಜನರು ಹೊರಗಡೆ ಬಂದು ರಾಜಾರೋಷವಾಗಿ ಓಡಾಡುತ್ತಿದ್ದು, ಇದರಿಂದ ಸುತ್ತಮುತ್ತಲಿನ ಬಡಾವಣೆಯ ಜನರು ಆತಂಕಗೊಂಡಿದ್ದಾರೆ.

Quarantine peoples
ಕ್ವಾರಂಟೈನ್
author img

By

Published : May 13, 2020, 9:02 PM IST

ರಾಯಚೂರು: ಸರ್ಕಾರಿ ಕ್ವಾರಂಟೈನ್​ ಕೇಂದ್ರದಲ್ಲಿ ಕ್ವಾರಂಟೈನ್​ ಮಾಡಲಾಗಿರುವ ಕಾರ್ಮಿಕರು ರಾಜಾರೋಷವಾಗಿ ಹೊರಗಡೆ ಬಂದು ಓಡಾಟ ಮಾಡುತ್ತಿರುವ ದೃಶ್ಯ ರಾಯಚೂರಿನಲ್ಲಿ ಕಂಡು ಬಂದಿದೆ.

ನಗರದ ಹೊರವಲಯದ ಬೋಳಮಾನದೊಡ್ಡಿ ರಸ್ತೆಯಲ್ಲಿರುವ ಕ್ವಾರಂಟೈನ್​ ಕೇಂದ್ರದ ಬಳಿ ಈ ದೃಶ್ಯ ಕಂಡು ಬಂದಿದೆ. ಜಿಲ್ಲೆಯಿಂದ ವಲಸೆ ಹೋಗಿ ಮರಳಿ ಬಂದ ಕಾರ್ಮಿಕರಿಗೆ ಜಿಲ್ಲಾಡಳಿತ ಕ್ವಾರಂಟೈನ್​ ಮಾಡಿದೆ. ಆದರೆ ಕ್ವಾರಂಟೈನ್ ಕೇಂದ್ರದಲ್ಲಿ ಮೂಲಭೂತ ಸೌಕರ್ಯಗಳು ಇಲ್ಲ ಎನ್ನುವ ಕಾರಣಕ್ಕೆ ಜನರು ಅಲ್ಲಿಂದ ಹೊರಗಡೆ ಬಂದು ತಮಗೆ ಬೇಕಾದ ವಸ್ತುಗಳನ್ನು ತೆಗೆದುಕೊಂಡು ಹೋಗುತ್ತಿರುವುದಾಗಿ ತಿಳಿಸಿದ್ದಾರೆ.

ಕ್ವಾರಂಟೈನ್​ ಕೇಂದ್ರದಿಂದ ಹೊರಗಡೆ ಬಂದು ಜನರ ಓಡಾಟ

ಕ್ವಾರಂಟೈನ್​ನಲ್ಲಿ ಇರುವ ಕಾರ್ಮಿಕರು ಅಂಗಡಿಗಳಿಗೆ ಬಂದು ಸಾಬೂನು ಸೇರಿದಂತೆ ನಾನಾ ವಸ್ತುಗಳನ್ನು ಖರೀದಿಸಿ ಹೋಗುತ್ತಿದ್ದಾರೆ. ಕಳೆದ ಮೂರು ದಿನಗಳಿಂದ ವಲಸೆ ಕಾರ್ಮಿಕರನ್ನು ಇಲ್ಲಿಯೇ ಕ್ವಾರಂಟೈನ್​ ಮಾಡಲಾಗಿದೆ. ಆದರೆ ಕ್ವಾರಂಟೈನ್​ನಲ್ಲಿರುವ ಕಾರ್ಮಿಕರು ಹೊರಗಡೆ ಬಂದು ಓಡಾಡುತ್ತಿರುವುದು ಸುತ್ತಲಿನ ಬಡಾವಣೆಯ ಜನರಲ್ಲಿ ಆತಂಕ ಮೂಡಿಸಿದ್ದು, ಅವರನ್ನು ಕ್ವಾರಂಟೈನ್​ ಕೇಂದ್ರದಿಂದ ಹೊರಗಡೆ ಬಾರದಂತೆ ನಿಗಾ ವಹಿಸುವಂತೆ ಜನರು ಒತ್ತಾಯಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.