ರಾಯಚೂರು: ಲಿಂಗಸುಗೂರು ತಾಲೂಕಿನಲ್ಲಿ ಬಂದ್ ಮಾಡಿಕೊಂಡಿದ್ದ ಖಾಸಗಿ ಆಸ್ಪತ್ರೆಗಳು ಸೋಮವಾರದಿಂದ ಹೊರ ರೋಗಿಗಳ ಚಿಕಿತ್ಸೆ (ಒಪಿಡಿ) ಆರಂಭಿಸಿದ್ದು ನಾಗರಿಕರಲ್ಲಿ ನಿಟ್ಟುಸಿರು ಬಿಡುವಂತಾಗಿದೆ.
"ಆಸ್ಪತ್ರೆಗಳಲ್ಲಿ ರೋಗಿಗಳಿಗಿಲ್ಲ ಚಿಕಿತ್ಸೆ: ವೈದ್ಯರ ತತ್ಸಾರಕ್ಕೆ ಜನರ ಅಸಮಾಧಾನ" ಎಂಬ ಶೀರ್ಷಿಕೆಯಡಿ ಈಟಿವಿ ಭಾರತ ಸುದ್ದಿ ಬಿತ್ತರಿಸಿತ್ತು. ತಕ್ಷಣವೆ ಸ್ಪಂದಿಸಿದ ತಾಲೂಕು ಆಡಳಿತ ಒಪಿಡಿ ಸೇವೆ ಆರಂಭಿಸುವಂತೆ ಸೂಚನೆ ನೀಡಿತು.
ಇದನ್ನೂ ಓದಿ : ಆಸ್ಪತ್ರೆಗಳಲ್ಲಿ ರೋಗಿಗಳಿಗಿಲ್ಲ ಚಿಕಿತ್ಸೆ: ವೈದ್ಯರ ತತ್ಸಾರಕ್ಕೆ ಜನರ ಅಸಮಾಧಾನ
ಸಾರ್ವಜನಿಕ ಆಸ್ಪತ್ರೆಗಳಲ್ಲಿ ಹತ್ತು ಜನ ವೈದ್ಯರಿದ್ದರೂ ಒಪಿಡಿ ಬಳಿ ಬಹುತೇಕ ವೈದ್ಯರು ಬರುತ್ತಿರಲಿಲ್ಲ. ಆಸ್ಪತ್ರೆಗೆ ಬಂದ ರೋಗಿಗಳು ಅನಿವಾರ್ಯವಾಗಿ ಖಾಸಗಿ ಆಸ್ಪತ್ರೆಗಳತ್ತ ಹೋಗುತ್ತಿರುವುದು ಸಾಮಾನ್ಯವಾಗಿತ್ತು. ಸರ್ಕಾರಿ ಆಸ್ಪತ್ರೆಗಳಲ್ಲಿ ಕರ್ತವ್ಯ ನಿರ್ವಹಿಸುವ ವೈದ್ಯರು ಸಾರ್ವಜನಿಕ ಆಸ್ಪತ್ರೆಗೆ ಗೈರಾಗಿ ತಮ್ಮ ಖಾಸಗಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಬಗ್ಗೆ ಸಂಘ ಸಂಸ್ಥೆಗಳ ಮುಖಂಡರು ಆಕ್ರೋಶ ವ್ಯಕ್ತಪಡಿಸುತ್ತಿರುವುದು ಕೇಳಿ ಬಂದಿತ್ತು.