ETV Bharat / state

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ 17 ಜನ್ರೂ ಕೂಡ ಒಗ್ಗಟ್ಟಾಗಿದ್ದೇವೆ: ಪ್ರತಾಪ್ ಗೌಡ ಪಾಟೀಲ್ - ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ 17 ಜನ್ರು ಕೂಡ ಒಗ್ಗಟ್ಟಾಗಿದ್ದೇವೆ

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ 17 ಜನರೂ ಕೂಡ ಒಗ್ಗಟ್ಟಾಗಿದ್ದೇವೆ ಎಂದು ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಹೇಳಿದ್ದಾರೆ.

Prathap Gowdha Pateel press meet
ಪ್ರತಾಪ್ ಗೌಡ ಪಾಟೀಲ್
author img

By

Published : Jan 25, 2020, 2:53 PM IST

ರಾಯಚೂರು: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ 17 ಜನರೂ ಒಗ್ಗಟ್ಟಾಗಿದ್ದೇವೆ ಎಂದು ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಪ್ರತಾಪ್ ಗೌಡ ಪಾಟೀಲ್

ರಾಯಚೂರಿನ ಮಸ್ಕಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ನಡೆಯುವ ಸಚಿವ ಸಂಪುಟ ವಿಸ್ತರಣೆಯಲ್ಲಿ ಸೋತವರಿಗೆ ಸಚಿವ ಸ್ಥಾನವಿಲ್ಲವೆಂದು ಬಿಜೆಪಿ ಹೈಕಮಾಂಡ್ ಹೇಳಿದ್ದಾರಂತೆ. ಆದ್ರೆ, ನಾವು 17 ಜನರೂ ಕೂಡ ಒಗ್ಗಟ್ಟಾಗಿದ್ದೇವೆ. ಹಾಗಾಗಿ ಎಲ್ಲರಿಗೂ ಸ್ಥಾನ ನೀಡಬೇಕು ಎನ್ನುವ ಒತ್ತಾಯವಿದೆ. ಸೋತ ಇಬ್ಬರಿಗೆ ಅನ್ಯಾಯವಾಗಿದ್ದು, ಅದನ್ನು ಸರಿಪಡಿಸುವ ಭರವಸೆಯಿದೆ. ಆದ್ರೆ, ಸೋತವರಿಗೆ ಸ್ಥಾನವಿಲ್ಲ ಎನ್ನಲಾಗುತ್ತಿದೆ. ಈ ಬಗ್ಗೆ ರಾಜ್ಯ ನಾಯಕರು ಹೈಕಮಾಂಡ್‌ ಜೊತೆ ಮಾತುಕತೆ ನಡೆಸಿ ಸರಿಪಡಿಸುವ ಭರವಸೆಯಿದೆ ಎಂದರು.

ಈಗಾಗಲೇ ಒಂದು ಬಾರಿ ಪಕ್ಷದ ವಿರುದ್ಧ ಬಂಡಾಯವೆದ್ದು, ಪಕ್ಷವನ್ನು ಬಿಟ್ಟು ಬಂದಿದ್ದೇವೆ. ಮತ್ತೊಮ್ಮೆ ಬಂಡಾಯದ ವಿಚಾರವಿಲ್ಲ. ಆದ್ರೆ, 17 ಜನರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು ಎಂಬುವುದು ನಮ್ಮ ಒತ್ತಾಯ. ರಾಜ್ಯದಲ್ಲಿ ನಡೆದ ಉಪಚುನಾವಣೆಯಲ್ಲಿ ಜಯ ಸಾಧಿಸಿದ 11 ಜನರೂ ಸಹ ಸಚಿವರಾಗಲಿದ್ದಾರೆ. ಆರ್. ಆರ್. ನಗರ ಹಾಗೂ ಮಸ್ಕಿ ಕ್ಷೇತ್ರದ ಚುನಾವಣೆಯಲ್ಲಿ ಗೆದ್ದ ಬಳಿಕ ಸಚಿವ ಸ್ಥಾನ ನೀಡುವ ಭರವಸೆ ಸಿಎಂ ಮೇಲಿದೆ. ಈ ಎರಡೂ ಸಚಿವ ಸ್ಥಾನವನ್ನು ಖಾಲಿ ಇಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Intro:ಸ್ಲಗ್: ಪ್ರತಾಪಗೌಡ ಪಾಟೀಲ್ ಹೇಳಿಕೆ
ಫಾರ್ಮೇಟ್: ಎವಿಬಿ
ರಿಪೋರ್ಟ್ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: 25-01-2020
ಸ್ಥಳ: ರಾಯಚೂರು
ಆಂಕರ್: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ 17 ಜನ ಒಗ್ಗಾಟಗಿದ್ದೇವೆ ಎಂದು ಶಾಸಕ ಪ್ರತಾಪಗೌಡ ಪಾಟೀಲ್ ಹೇಳಿದ್ದಾರೆ. Body:ರಾಯಚೂರಿನ ಮಸ್ಕಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ರಾಜ್ಯದಲ್ಲಿ ನಡೆಯುವ ಸಚಿವ ಸಂಪುಟ ವಿಸ್ತರಣೆಯಲ್ಲಿ ಸೋತವರಿಗೆ ಸಚಿವ ಸ್ಥಾನವಿಲ್ಲವೆಂದು ಬಿಜೆಪಿ ಹೈಕಮಾಂಡ್ ಹೇಳಿದ್ದಾರಂತೆ ಹೇಳಿದ್ದಾರೆ. ಆದ್ರೆ ನಾವು 17 ಜನ ಒಗ್ಗಾಟಗಿದ್ದೇವೆ. ಈ ಕಾರಣಕ್ಕೆ ಎಲ್ಲಾರಿಗೂ ಸ್ಥಾನ ನೀಡಬೇಕು ಎನ್ನುವ ಒತ್ತಾಯವಿದೆ. ಸೋತ ಇಬ್ಬರು ಮಾಜಿ ಶಾಸಕ ಅನ್ಯಾಯವಾಗಿದ್ದು, ಅದನ್ನ ಸರಿಪಡಿಸುವ ಭರವಸೆಯಿದೆ. ಈಗೇನು ಸೋತವರಿಗೆ ಸ್ಥಾನವಿಲ್ಲ ಎನ್ನಲಾಗುತ್ತಿದೆ. ಈ ಬಗ್ಗೆ ರಾಜ್ಯ ನಾಯಕ ಹೈಕಮಾಂಡ್ ನಲ್ಲಿ ಮಾತುಕತೆ ನಡೆಸಿ ಸರಿಪಡಿಸುವ ಭರವಸೆಯಿದೆ ಎಂದರು. ಈಗಾಗಲೇ ಒಂದು ಬಾರಿ ಪಕ್ಷದ ವಿರೋಧ ಬಂಡಾಯವೆಂದು ಪಕ್ಷವನ್ನ ಬಿಟ್ಟು ಬಂದಿವೆ, ಮತ್ತೊಮ್ಮೆ ಬಂಡಾಯ ವೇಳೆ ವಿಚಾರವಿಲ್ಲ. ಆದ್ರೆ 17 ಜನರಿಗೆ ಅನ್ಯಾಯಯಾಗದಂತೆ ನೋಡಿಕೊಳ್ಳಬೇಕು ಎಂಬುವುದು ನಮ್ಮ ಒತ್ತಾಯವಿದೆ ಎಂದರು. ಇನ್ನೂ ರಾಜ್ಯದಲ್ಲಿ ನಡೆದ ಉಪಚುನಾವಣೆಯಲ್ಲಿ ಜಯ ಸಾಧಿಸಿದ 11 ಜನರು ಸಹ ಸಚಿವರಾಗಲಿದ್ದಾರೆ. ಆರ್ ಆರ್ ನಗರ ಹಾಗೂ ಮಸ್ಕಿ ಕ್ಷೇತ್ರದ ಚುನಾವಣೆಯಲ್ಲಿ ಗೆದ್ದ ಬಳಿಕ ಸಚಿವ ಸ್ಥಾನ ನೀಡುವ ಭರವಸೆ ಸಿಎಂ ಮೇಲಿದೆ. ಈ ಎರಡು ಸಚಿವ ಸ್ಥಾನವನ್ನ ಖಾಲಿ ಇಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. Conclusion:
ಬೈಟ್.1: ಪ್ರತಾಪಗೌಡ ಪಾಟೀಲ್, ಮಾಜಿ ಶಾಸಕ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.