ರಾಯಚೂರು: ಆರ್ಎಸ್ಎಸ್ ಅನ್ನು ಎಸ್ಡಿಪಿಐಗೆ ಹೋಲಿಕೆ ಮಾಡಿದ್ದು ಸಿದ್ದರಾಮಯ್ಯನವರ ಬೌದ್ಧಿಕ ದಿವಾಳಿತನಕ್ಕೆ ಒಂದು ಸಾಕ್ಷಿ. ನೆಹರು ಕಾಲದಿಂದ ವಲ್ಲಭಭಾಯಿ ಪಟೇಲ್ ಕಾಲದವರೆಗೆ ಆರ್ಎಸ್ಎಸ್ ಪರೇಡ್ಗೆ ಅವಕಾಶ ನೀಡಲಾಗಿತ್ತು. ಇವತ್ತಿಗೂ ಸಹ ಜಗತ್ತಿನ ಅತೀ ದೊಡ್ಡ ಸಂಘಟನೆಯಾಗಿ ಆರ್ಎಸ್ಎಸ್ ಕೆಲಸ ಮಾಡುತ್ತಿದೆ. ಇವರ ಸರ್ಕಾರದಲ್ಲಿ ಆರ್ಎಸ್ಎಸ್ ಎರಡು ಬಾರಿ ಬ್ಯಾನ್ ಮಾಡಿದ್ರು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: ದ್ವಿತೀಯ ಪಿಯುಸಿ ಪರೀಕ್ಷೆ: ಮೊದಲ ದಿನ 11 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಗೈರು
ಸಿದ್ದರಾಮಯ್ಯನವರು ರಾಜ್ಯದ ಮಾಜಿ ಮುಖ್ಯಮಂತ್ರಿಗಳು, ಮೇಲಾಗಿ ವಿಪಕ್ಷ ನಾಯಕರು. ಅವರು ಧಮ್ ಗಿಮ್ ಅಂತ ಮಾತನಾಡುತ್ತಾರಲ್ಲ, ಅವರ ಯೋಗ್ಯತೆಗೆ, ವ್ಯಕ್ತಿತ್ವಕ್ಕೆ ಅದು ಒಳ್ಳೆಯದ್ದಲ್ಲ. ಹಿ ಶುಡ್ ನಾಟ್ ಟಾಕ್ ನಾನ್ ಸೆನ್ಸ್... ಐ ವಿಲ್ ಅಡ್ವೈಸ್ ಹಿಮ್ ಎಂದು ಹೇಳಿದ ಅವರು, ಆರ್ಎಸ್ಎಸ್ ಅನ್ನು ಎಸ್ಡಿಪಿಐಗೆ ಹೋಲಿಕೆ ಮಾಡಿದ್ದು ಖಂಡನೀಯ. ಇದು ಸಿದ್ದರಾಮಯ್ಯ ಮುಸ್ಲಿಂ ತುಷ್ಟೀಕರಣಕ್ಕೆ ಹಿಡಿದಿರುವ ದಾರಿ ಅಷ್ಟೇ ಎಂದರು.