ರಾಯಚೂರು: ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ನಡೆಯುತ್ತಿರುವ ರಾಯರ 425ನೇ ವರ್ಧಂತ್ಯುತ್ಸವ ಸಮಾರೋಪ ಸಮಾರಂಭದಲ್ಲಿ ನಟ ಪುನಿತ್ ರಾಜ್‌ಕುಮಾರ್ ಭಾಗವಹಿಸಿದ್ದರು.
ಮಠಕ್ಕೆ ಆಗಮಿಸಿದ ಪವರ್ ಸ್ಟಾರ್ ಪುನಿತ್ ರಾಜ್‌ಕುಮಾರ್ ನೇರವಾಗಿ ಗ್ರಾಮದ ಅದಿ ದೇವತೆ ಮಂಚಾಲಮ್ಮ ದೇವಿ ದರ್ಶನ ಪಡೆದರು. ಬಳಿಕ ರಾಯರ ಮೂಲ ವೃಂದವನಕ್ಕೆ ತೆರಳಿ ರಾಯರ ದರ್ಶನ ಪಡೆದು, ವಿಶೇಷ ಪೂಜೆ ನೆರವೇರಿಸಿದರು. ವರ್ಧಂತ್ಯುತ್ಸವ ನಿಮಿತ್ತ ಶ್ರೀಮಠದಿಂದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಪುನಿತ್ ರಾಜ್‌ಕುಮಾರ್‌ಗೆ ಪ್ರದಾನ ಮಾಡಿ, ಸನ್ಮಾನಿಸಿದರು.
ಸನ್ಮಾನದ ಬಳಿಕ ಮಾತನಾಡಿದ ಪುನಿತ್, ತಂದೆಯವರ ಜತೆಯಲ್ಲಿ ರಾಯರ ಮಠಕ್ಕೆ ಬಂದ ಬಾಲ್ಯದ ನೆನಪುಗಳನ್ನ ಸ್ಮರಿಸಿದರು.