ETV Bharat / state

ವಿಕ್ಟೋರಿಯಾ ಆಸ್ಪತ್ರೆಗೆ ಕಳಪೆ ಗುಣಮಟ್ಟದ ಪಿಪಿಇ ಕಿಟ್ ಬಂದಿರಲು ಸಾಧ್ಯವಿಲ್ಲ: ಸಚಿವ ಸುಧಾಕರ್​ - Victoria Hospital

ಆರಂಭದಲ್ಲಿ ಸಬ್ ಸ್ಟ್ಯಾಂಡರ್ಡ್ ಕಿಟ್​ಗಳು ಪೂರೈಕೆಯಾಗಿದ್ದವು. ಕೇಂದ್ರ ಸರ್ಕಾರದಿಂದ ಅವು ಬಂದಿದ್ದವು. ಬಳಿಕ ಅವರೇ ಹಿಂತೆಗೆದುಕೊಂಡಿದ್ದಾರೆ. ಆದರೆ ಈಗ ಅಂತಹ ಕಿಟ್​ಗಳು ಬಂದಿರಲು ಸಾಧ್ಯವಿಲ್ಲ ಎಂದು ಸಚಿವ ಡಾ. ಕೆ.ಸುಧಾಕರ್ ಹೇಳಿದರು.

Poor quality PPE kit
ಸಚಿವ ಸುಧಾಕರ್​
author img

By

Published : Jun 13, 2020, 4:09 PM IST

ರಾಯಚೂರು: ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಕಳಪೆ ಗುಣಮಟ್ಟದ ಪಿಪಿಇ ಕಿಟ್ ಬಂದಿರಲು ಸಾಧ್ಯವಿಲ್ಲ. ಒಂದು ವೇಳೆ ಆ ರೀತಿ ಬಂದಿದ್ದರೆ ತುಂಬಾ ಜನಕ್ಕೆ ಪಾಸಿಟಿವ್ ಬರುತ್ತಿತ್ತು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್ ಹೇಳಿದರು.

ನಗರದ ಜಿಲ್ಲಾ ಪಂಚಾಯತ್​​ ಸಭಾಂಗಣದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗ ನಿಯಂತ್ರಣದ ಕುರಿತು ಮುನ್ನಚ್ಚರಿಕೆ ಸಭೆ ಆಯೊಜಿಸಲಾಗಿತ್ತು. ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರಂಭದಲ್ಲಿ ಸಬ್ ಸ್ಟ್ಯಾಂಡರ್ಡ್ ಕಿಟ್​ಗಳು ಪೂರೈಕೆಯಾಗಿದ್ದವು. ಕೇಂದ್ರ ಸರ್ಕಾರದಿಂದ ಅವು ಬಂದಿದ್ದವು. ಬಳಿಕ ಅವರೇ ಹಿಂತೆಗೆದುಕೊಂಡಿದ್ದಾರೆ. ಆದರೆ ಈಗ ಅಂತಹ ಕಿಟ್​ಗಳು ಬಂದಿರಲು ಸಾಧ್ಯವಿಲ್ಲ ಎಂದರು.

ಸಚಿವ ಸುಧಾಕರ್​​

ರಾಯಚೂರಿನಲ್ಲಿ 8 ಮಂದಿ ವೈದ್ಯಕೀಯ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಬಂದಿರುವುದು ಆತಂಕಕ್ಕೆ ಕಾರಣವಾಗಿದೆ. ಸಿಬ್ಬಂದಿಗೆ ಏಕೆ ಸುರಕ್ಷತೆ ಇಲ್ಲ? ನನಗೆ ಸರಿಯಾದ ಮಾಹಿತಿ ಬೇಕು. ಆಸ್ಪತ್ರೆಯಲ್ಲಿ ಸರಿಯಾದ ಮುನ್ನೆಚರಿಕೆ ಕ್ರಮ ಕೈಗೊಂಡಿಲ್ಲವೇ? ಮೂರು ದಿನಗಳಲ್ಲಿ ಈ ಕುರಿತ ಮಾಹಿತಿ ನೀಡಬೇಕು. ರಾಜ್ಯದ ಯಾವ ಜಿಲ್ಲೆಯಲ್ಲೂ ಇಷ್ಟೊಂದು ವೈದ್ಯಕೀಯ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಬಂದಿಲ್ಲ. ಹೀಗಾಗಿ ಈ ಬಗ್ಗೆ ವರದಿ ನೀಡಲು ರಿಮ್ಸ್ ನಿರ್ದೇಶಕ ಡಾ. ಬಸವರಾಜ್ ಪೀರಾಪುರೆಗೆ ಸೂಚಿಸಿದ್ರು. ಕೋವಿಡ್-19 ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು, ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.