ETV Bharat / state

ಬಿಡಾಡಿ ದನಗಳಿಗೆ ಕಡಿವಾಣ.. ಪೊಲೀಸ್​ ಇಲಾಖೆಯಿಂದ ಮಾಲೀಕರಿಗೆ ವಾರ್ನಿಂಗ್​​!

ರಾಯಚೂರು ನಗರದಲ್ಲಿ ಬಿಡಾಡಿ ದನಗಳ ಹಾವಳಿಯಿಂದ ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ಸಮಸ್ಯೆ ಉಂಟಾಗುತ್ತಿದ್ದು, ನಗರಸಭೆ ಹಾಗೂ ಪೊಲೀಸ್​ ಇಲಾಖೆ ವತಿಯಿಂದ ಹಿಡಿದು ನಗರದಲ್ಲಿರುವ ಬಯಲು ರಂಗ ಮಂದಿರದ ಬಳಿ ಕೂಡಿ ಹಾಕಲಾಗಿದೆ.

ಬೀಡಾಡಿ ದನಗಳಿಗೆ ಕಡಿವಾಣ
author img

By

Published : Jul 27, 2019, 11:17 AM IST

ರಾಯಚೂರು: ನಗರದಲ್ಲಿ ಬಿಡಾಡಿ ದನಗಳ ಹಾವಳಿಯಿಂದ ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ಸಮಸ್ಯೆ ಉಂಟಾಗುತ್ತಿದ್ದು, ಈ ದನಗಳನ್ನು ಹಿಡಿದು ನಗರದಲ್ಲಿರುವ ಬಯಲು ರಂಗ ಮಂದಿರದ ಬಳಿ ಕೂಡಿ ಹಾಕಲಾಗಿದೆ.

ಬಿಡಾಡಿ ದನಗಳಿಗೆ ಕಡಿವಾಣ..

ದನಗಳ ಹಾವಳಿ ಹೆಚ್ಚಿದ್ದರಿಂದ ನಗರಸಭೆ ಹಾಗೂ ಪೊಲೀಸ್​ ಇಲಾಖೆ ವತಿಯಿಂದ ಈ ಕಾರ್ಯ ಮಾಡಲಾಗಿತ್ತು. ಕಳೆದ ಕೆಲ ದಿನಗಳ ಹಿಂದೆ ಈ ಬಗ್ಗೆ ಈಟಿವಿ ಭಾರತ್​ನಲ್ಲಿ "ರಾಯಚೂರಿನ ರಸ್ತೆಗಳಲ್ಲಿ ಬಿಡಾಡಿ ದನಗಳದ್ದೇ ಕಾರುಬಾರು, ಯಾವುದೇ ವಾಹನ ಬಂದ್ರೂ ಡೋಂಟ್‌ ಕೇರ್ " ಎಂಬ ವರದಿ ಪ್ರಕಟವಾಗಿದ್ದು, ಎಚ್ಚೆತ್ತ ಅಧಿಕಾರಿಗಳು ಬಿಡಾಡಿ ದನಗಳನ್ನು ಬಯಲು ರಂಗ ಮಂದಿರದ ಬಳಿ ಕೂಡಿ ಹಾಕಿದ್ದಾರೆ.

ಈ ಕಾರ್ಯಾಚರಣೆಯು ಎಸ್ಪಿ ಸಿ ಬಿ ವೇದಮೂರ್ತಿ ಅವರ ನೇತೃತ್ವದಲ್ಲಿ ನಡೆದಿದೆ. ಈ ಬಗ್ಗೆ ಮಾತನಾಡಿದ ವೇದಮೂರ್ತಿ, ನಗರದಲ್ಲಿ 2000 ಬಿಡಾಡಿ ದನಗಳು ಸಾರ್ವಜನಿಕರ ವಾಹನ ಸವಾರರಿಗೆ ತೀವ್ರ ತೊಂದರೆ ಉಂಟು ಮಾಡುತ್ತಿದ್ದವು. ಸಾರ್ವಜನಿಕರ ದೂರು ಹಾಗೂ ಮಾಧ್ಯಮಗಳಲ್ಲಿ ಪ್ರಸಾರವಾದ ಸುದ್ದಿಯನ್ನು ಗಮನದಲ್ಲಿಟ್ಟುಕೊಂಡು ದಾಳಿ ಮಾಡಿ ದನಗಳನ್ನು ಕೂಡಿ ಹಾಕಲಾಗಿದೆ. ಮಾಲೀಕರಿಗೆ ಒಂದುವಾರದ ಕಾಲಾವಕಾಶ ನೀಡಲಾಗಿದೆ. ಅವರ ಆಧಾರ್ ಕಾರ್ಡ್ ಹಾಗೂ ಇತರೆ ದಾಖಲೆಗಳನ್ನು ಪರಿಶೀಲಿಸಿ ಸಾವಿರ ರೂಪಾಯಿ ಅಥವಾ ಸೂಕ್ತವಾದ ದಂಡವನ್ನು ವಿಧಿಸಿ ದನಗಳನ್ನು ಮರಳಿ ಕೊಡಲಾಗುವುದು. ಒಂದು ವೇಳೆ ಮಾಲೀಕರು ಬರದಿದ್ದರೆ ಅಂತಹ ದನಗಳನ್ನು ಮಾರಾಟ ಮಾಡಲಾಗುವುದು ಎಂದರು.

ನಗರಸಭೆಯ ಪೌರಾಯುಕ್ತ ಮಲ್ಲಿಕಾರ್ಜುನ್ ಗೋಪಿ ಶೆಟ್ಟಿ ಪ್ರತಿಕ್ರಿಯಿಸಿ, ಈ ಹಿಂದೆ ಹಲವಾರು ಬಾರಿ ನಗರಸಭೆಯಿಂದ ಬಿಡಾಡಿ ದನಗಳ ಹಾವಳಿ ತಡೆಗೆ ಮಾಲೀಕರಿಗೆ ಸೂಚನೆ ನೀಡಿದ್ದೆವು. ಆದರೂ ರಸ್ತೆಗಳಿಗೆ ದನಗಳನ್ನು ಬಿಡಲಾಗುತ್ತಿತ್ತು. ಪೊಲೀಸ್ ಇಲಾಖೆಯ ಸಹಕಾರದಿಂದ ದನಗಳನ್ನು ಕೂಡಿ ಹಾಕಲಾಗಿದೆ. ಕೂಡಿಹಾಕಿದ ದನಗಳಿಗೆ ನಗರಸಭೆಯಿಂದ ಕುಡಿಯುವ ನೀರು, ಮೇವು ಇತರೆ ಸೌಲಭ್ಯ ನೀಡಿ ಉಪಚಾರ ಮಾಡುತ್ತೇವೆ ಎಂದರು.

Intro:ರಾಯಚೂರು ನಗರದಲ್ಲಿ ಬಿಡಾಡಿ ದನಗಳ ಹಾವಳಿ ಯಿಂದ ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ತೀರಾ ಸಮಸ್ಯೆ ಉಂಟಾಗುತ್ತಿದ್ದು, ರಸ್ತೆಯಲ್ಲಿ ಮಲಗಿರುವ ಕಾರಣ ಟ್ರಾಫಿಕ್ ಜಾಮ್ ಆಗುವ ಅಪಘಾತ ಪ್ರಕರಣಗಳು ನಡೆಯುತ್ತಿರುವ ಕಾರಣ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.
ಇಂದು ಜಿಲ್ಲಾ ಪೊಲೀಸ್ ಇಲಾಖೆ ನಗರಸಭೆಯ ಸಹಕಾರದಿಂದ ಬಿಡಾಡಿ ದನಗಳನ್ನು ಬಂದಿಸಿ ನಗರದ ಮಹಿಳಾ ಸಮಾಜದಲ್ಲಿ ಕೂಡಿ ಹಾಕಿದ್ದಾರೆ.
ಈ ಕುರಿತು ಈ ಟಿವಿ ಭಾರತ "ರಾಯಚೂರಿನ ರಸ್ತೆಗಳಲ್ಲಿ ಬಿಡಾಡಿ ದನಗಳದ್ದೇ ಕಾರುಬಾರು,ಯಾವುದೇ ವಾಹನ ಬಂದ್ರೂ ಡೋಂಟ್ ಕೇರ್ " ಎಂಬ ಶಿರ್ಷಿಕೆಯಲ್ಲಿ ವರದಿ ಮಾಡಿತ್ತು.

Body:ಇಂದು ಎಸ್.ಪಿ.ನೇತೃತ್ವದಲ್ಲಿ ಬಿಡಾಡಿ ದನಗಳನ್ನು ಕಾರ್ಯಚರಣೆ ನಡೆಸಿ 120 ಬಿಡಾಡಿ ದನಗಳನ್ನು ತಂದು ಕೂಡಿ ಹಾಕಿದ್ದಾರೆ.
ಮಹಿಳಾ ಸಮಾಜದಲ್ಲಿ ಯೇ ಕೂಡಿ ಹಾಕಿ ಇಲ್ಲಯೇ ಮೇವು, ನೀರು, ಪಶು ವೈದ್ಯರನ್ನು ನೇಮಿಸಿ ಉಪಚಾರ ಮಾಡಲಾಗುತ್ತಿದೆ.
ಈ ಬಗ್ಗೆ ಎಸ್.ಪಿ.ಸಿ.ಬಿ.ವೇದ ಮೂರ್ತಿ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ನಗರದಲ್ಲಿ 2000 ಬಿಡಾಡಿ ದನಗಳಿಗೆ ಸಾರ್ವಜನಿಕರ ವಾಹನ ಸವಾರರಿಗೆ ತೀವ್ರ ತೊಂದರೆ ಉಂಟು ಮಾಡುತ್ತಿವೆ ಸಾರ್ವಜನಿಕರ ಹಾಗೂ ಮಾಧ್ಯಮಗಳಲ್ಲಿ ಪ್ರಸಾರವಾದ ಸುದ್ದಿಯನ್ನು ಗಮನದಲ್ಲಿಟ್ಟುಕೊಂಡು ದಾಳಿ ಮಾಡಿ ತಂದು ಇಲ್ಲಿ ಕೂಡಿ ಹಾಕಲಾಗಿದೆ.ಅವರ ಮಾಲೀಕರು ಹೊರಗಡೆ ನಿಂತಿದ್ದವರಿಗೆ ತೆಗೆದುಕೊಳ್ಳಲು ನೀಡುವುದಿಲ್ಲ. ಒಂದುವಾರದ ವರದ ಕಾಲಾವಕಾಶ ನೀಡಲಾಗಿದೆ ದನಗಳ ಮಾಲೀಕರಿಗೆ ಅವರ ಆಧಾರ್ ಕಾರ್ಡ್ ಹಾಗೂ ಇತರೆ ದಾಖಲೆಗಳನ್ನು ಪರಿಶೀಲಿಸಿ ಸಾವಿರ ರೂಪಾಯಿ ಅಥವಾ ಸೂಕ್ತದ ದಂಡವನ್ನು ವಿಧಿಸಿದೆ ಅವರಿಗೆ ಮರಳಿ ಕೊಡಲಾಗುವುದು ಒಂದು ವೇಳೆ ಮಾಲಿಕರು ಬರದಿದ್ದರೆ ಅಂತಹ ದನಗಳನ್ನು ಮಾರಾಟ ಮಾಡಲಾಗುವುದು ಇಲ್ಲಿಂದ ಕರೆದುಕೊಂಡು ಹೋದ ದಿನಗಳು ಪುನಃ ರಸ್ತೆಯಲ್ಲಿ ಕಾಣಿಸಿಕೊಂಡರೆ ಇನ್ನೂ ಹೆಚ್ಚಿನ ಕ್ರಮ ಕೈಗೊಂಡು ಬಿಸಿ ಮುಟ್ಟಿಸಿ ಅಮೂಲ್ಯ ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸುತ್ತದೆ ಎಂದು ಹೇಳಿದರು‌.
ನಗರಸಭೆಯ ಪೌರಾಯುಕ್ತ ಮಲ್ಲಿಕಾರ್ಜುನ್ ಗೋಪಿ ಶೆಟ್ಟಿ ಪ್ರತಿಕ್ರಿಯಿಸಿ, ಈ ಹಿಂದೆ ಹಲವಾರು ಬಾರಿ ನಗರಸಭೆಯಿಂದ ಬಿಡಾಡಿ ದನಗಳು ಹಾವಳಿ ತಡೆಗೆ ಮಾಲೀಕರಿಗೆ ಸೂಚನೆ ನಡೆದೆವು ಆದರೂ ರಸ್ತೆಯ ಮೇಲೆ ಮಲಗಿ ಮಲಗಿ ಕೊಳ್ಳುತ್ತಿದ್ದವು ಪೊಲೀಸ್ ಇಲಾಖೆಯ ಸಹಕಾರದಿಂದ ದನಗಳನ್ನು ಕೂಡಿ ಹಾಕಲಾಗಿದೆ. ಕೂಡಿಹಾಕಿದ ದನಗಳಿಗೆ ನಗರಸಭೆಯಿಂದ ಕುಡಿಯುವ ನೀರು ಮೇವು ಇತರೆ ಸೌಲಭ್ಯ ನೀಡಿ ಉಪಚಾರ ಮಾಡುತ್ತೇವೆ ಎಂದ ಅವರು, ರಸ್ತೆಯ ಮಧ್ಯೆ ದನಗಳು ಪ್ಲಾಸ್ಟಿಕ್ ಗಳನ್ನು ತಿಂದು ಸಾವನ್ನಪ್ಪುತ್ತಿರುವ ಘಟನೆಯ ಬಗ್ಗೆ ತಿಳಿಸಿದ ಅವರು ಪ್ಲಾಸ್ಟಿಕ್ ಸಂಪೂರ್ಣ ನಿಷೇಧಿಸಲಾಗಿತ್ತು ಅದನ್ನು ಬಳಸುವ ವ್ಯಾಪಾರಕ್ಕೆ ನಲ್ಲಿ ದಾಳಿಮಾಡಿ ಮಾಡಿಕೊಳ್ಳಲಾಗುತ್ತಿದೆ ಆ ಮೂಲಕ ಕ್ರಮಕೈಗೊಂಡಿದ್ದು ಸಾರ್ವಜನಿಕರು ಕೈ ಜೋಡಿಸಿದಾಗ ಸಂಪೂರ್ಣ ನಿಷೇಧ ವಾಗಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.